ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಹಾಯಕ ಕೋಚ್ ಹುದ್ದೆಗಳು ಖಾಲಿ
ಅರ್ಚರಿ,ಅಥ್ಲೆಟಿಕ್ಸ್,ಬ್ಯಾಡ್ಮಿಂಟನ್,ಬಾಕ್ಸಿಂಗ್,ಸೈಕ್ಲಿಂಗ್,ಪುಟ್ಬಾಲ್,ಜಿಮ್ನಾಸ್ಟಿಕ್,ಹಾಕಿ,ಜುಡೊ,ಖೋಖೋ/ಕಬಡ್ಡಿ,ಟೆನ್ನಿಸ್,ಸ್ವಿಮ್ಮಂಗ್,ವಾಲಿಬಾಲ್ ಕ್ರೀಡೆಗಳಿಗೆ ಒಟ್ಟು 176 ಸಹಾಯಕ ಕೋಚರ್ ಹುದ್ದೆಗಳಿ SAI ಅರ್ಜಿ ಅಹ್ವಾನಿಸಿದೆ.
ಬೆಂಗಳೂರು, ಡಿಸೆಂಬರ್. 01 : ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಕ್ರೀಡೆಗಳ ಒಟ್ಟು 176 ಸಹಾಯಕ ಕೋಚ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತರು ಹಾಗೂ ಅರ್ಹರು ಅರ್ಜಿ ಸಲ್ಲಿಸಲು ಡಿಸೆಂಬರ್ 12 ಕೊನೆ ದಿನವಾಗಿದೆ.
ಅರ್ಚರಿ- 12, ಅಥ್ಲೆಟಿಕ್ಸ್-15, ಬ್ಯಾಡ್ಮಿಂಟನ್- 10, ಬಾಕ್ಸಿಂಗ್-18, ಸೈಕ್ಲಿಂಗ್- 10, ಪುಟ್ಬಾಲ್-20, ಜಿಮ್ನಾಸ್ಟಿಕ್-10, ಹಾಕಿ-10, ಜುಡೊ-06, ಖೋ ಖೋ/ಕಬಡ್ಡಿ-04, ಟೆನ್ನಿಸ್-06, ಸ್ವಿಮ್ಮಂಗ್- 10, ವಾಲಿಬಾಲ್-08, ವಾಟರ್ ಸ್ಪೋರ್ಟ್ಸ್-12, ಕುಸ್ತಿ-15, ವೇಟ್ ಲಿಫ್ಟಿಂಗ್-10 ಈ ಎಲ್ಲಾ ಕ್ರೀಡಾ ವಿಭಾಗಗಳಿಗೆ ಒಟ್ಟು 176 ಸಹಾಕ ಕೋಚ್ ಹುದ್ದೆಗೆ ಅರ್ಜಿ ಅಹ್ವಾನಿಸಿದೆ.

ಅರ್ಹತೆಗಳು:
* ಭಾರತದ ಯಾವುದೇ ವಿಶ್ವವಿದ್ಯಾಲಯ ಅಥವಾ ವಿದೇಶಿ ವಿವಿಗಳಲ್ಲಿ ಡಿಪ್ಲಮೋನಲ್ಲಿ ಕೋಚಿಂಗ್ ಪೂರ್ಣಗೊಳಿಸಿರಬೇಕು.r
* ಏಷ್ಯನ್ ಗೇಮ್ಸ್ ಅಥವಾ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಸರ್ಟಿಫಿಕೆಟ್ ಇನ್ ಕೋಚಿಂಗ್ .r
* ಒಲಿಂಪಿಕ್ಸ್ ಗೇಮ್ಸ್ ಗೆ ಅರ್ಹತೆ ಅಥವಾ ಭಾಗವಹಿಸಿರಬೇಕು.
ಆಯ್ಕೆ ವಿಧಾನ: ಮೊದಲಿಗೆ ಆನ್ ಲೈನ್ ಮೂಲಕ ಪರೀಕ್ಷೆ, ದೈಹಿಕ ಪರೀಕ್ಷೆ, ನೈಪುಣ್ಯತೆ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗಳು 31 ಡಿಸೆಂಬರ್ ವೇಳೆಗೆ ಮುಕ್ತಾಯಗೊಳ್ಳಲಿವೆ. ಇದರಲ್ಲಿ ಪಾಸಾದವರಿಗೆ ದೆಹಲಿ, ಕೋಲ್ಕತ್ತಾ, ಬೆಂಗಳೂರು, ಗೋವಾಹಟ್ಟಿ ಸೇರಿದಂತೆ ಮತ್ತಿತರ ಕಡೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಇಂಗ್ಲೀಷ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications