822 ಪೊಲೀಸ್ ಪೇದೆಗಳ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಸೆಪ್ಟೆಂಬರ್, 10 : ಕರ್ನಾಟಕ ಪೊಲೀಸ್ ಇಲಾಖೆ ವಿಶೇಷ ಮೀಸಲು ಪೊಲೀಸ್ ಪೇದೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 822 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಅಕ್ಟೋಬರ್ 2015.
ಬೆಟಾಲಿಯನ್-1ರಲ್ಲಿ 177 ಪುರುಷ ಹುದ್ದೆಗಳು, ಬೆಟಾಲಿಯನ್-3ರಲ್ಲಿ 157 ಪುರುಷ ಹುದ್ದೆಗಳು, 4ನೇ ಬೆಟಾಲಿಯನ್‌ನಲ್ಲಿ 91 ಮಹಿಳಾ ಹುದ್ದೆಗಳು ಮತ್ತು 142 ಪುರುಷ ಹುದ್ದೆಗಳು, 6ನೇ ಬೆಟಾಲಿಯನ್‌ನಲ್ಲಿ 79 ಪುರುಷ ಹುದ್ದೆಗಳು, 9ನೇ ಬೆಟಾಲಿಯನ್‌ನಲ್ಲಿ 179 ಪುರುಷ ಹುದ್ದೆಗಳು ಸೇರಿ ಒಟ್ಟು 822 ಹುದ್ದೆಗಳು ಖಾಲಿ ಇವೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣಗೊಂಡಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷಗಳು. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 25 ವರ್ಷಗಳು. ಎಸ್‌ಸಿ/ಎಸ್‌ಟಿ/ಪ್ರವರ್ಗ -1/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 27 ವರ್ಷಗಳು. ಇತರ ವರ್ಗದವರಿಗೆ 30 ವರ್ಷ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗ/2ಎ/2ಬಿ/3ಎ/3ಬಿ ವರ್ಗದವರಿಗೆ ಅರ್ಜಿ ಶುಲ್ಕ 250 ರೂ., ಎಸ್‌ಸಿ/ಎಸ್‌ಟಿ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 100 ರೂ.. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 7, 2015.
ಆಸಕ್ತ ಅಭ್ಯರ್ಥಿಗಳು http://srpc15.ksponline.co.in/Default.aspx ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಸೂಚನೆಗಳನ್ನು ಓದಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications