Railway Jobs: ಕರ್ನಾಟಕದಲ್ಲಿ ರೈಲ್ವೆ ಹುದ್ದೆಗಳು ಖಾಲಿ ಇವೆ, ನವೆಂಬರ್ 19 ಅರ್ಜಿ ಸಲ್ಲಿಕೆಯ ಕಡೆ ದಿನ
ಬೆಂಗಳೂರು, ನವೆಂಬರ್ 01: ನೈಋತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಇರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಹುದ್ದೆ ಅದರಲ್ಲೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಆಯ್ಕೆ ಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿಯೇ ಪೋಸ್ಟಿಂಗ್ ಸಿಗಲಿದೆ.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕ್ರೀಡಾ ಕೋಟಾದಡಿ (ಕ್ರೀಡಾ ಕೋಟಾ) 46 ಹುದ್ದೆಗಳು ಖಾಲಿ ಇವೆ. ಇವು ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗದಲ್ಲಿ ಖಾಲಿ ಇವೆ. ಆಸಕ್ತರು ಆಫ್‌ಲೈನ್/ಪೋಸ್ಟ್ ಮೂಲಕ ಅರ್ಜಿಯನ್ನು ಇದೇ ನವೆಂಬರ್ 19ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೊದಲು ಇಲ್ಲಿ ನೀಡಲಾಗಿರುವ ಮಾಹಿತಿಯನ್ನು ತಿಳಿದುಕೊಳ್ಳಿ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ನೈಋತ್ಯ ರೈಲ್ವೆ ವಲಯ
ಹುದ್ದೆಗಳ ಹೆಸರು: ಕ್ರೀಡಾ ಕೂಟಾದಡಿ ಖಾಲಿ ಹುದ್ದೆಗಳು
ಒಟ್ಟು ಹುದ್ದೆಗಳು : 46
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 19
ಮಾಸಿಕ ವೇತನ: ಗರಿಷ್ಠ 20,200
ಪೋಸ್ಟಿಂಗ್ ಸ್ಥಳ: ಮೈಸೂರು, ಹುಬ್ಬಳ್ಳಿ & ಬೆಂಗಳೂರು
ಶೈಕ್ಷಣಿಕ ಅರ್ಹತೆ
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಬಿ.ಎಸ್.ಸಿ, ಪದವಿ ಪಡೆದಿರಬೇಕು ಎಂದು ನೈಋತ್ಯ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ವಯಸ್ಸಿನ ಮಿತಿ ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಮುಂದಿನ ವರ್ಷ 2025ರ ಜನವರಿ 1ಕ್ಕೆ ಕನಿಷ್ಠ 18 ವರ್ಷ ಹಾಗೈ ಗರಿಷ್ಠ 25 ವರ್ಷ ಮೀರಿರಬಾರದು. ಇನ್ನೂ ಜಾತಿ ಮೀಸಲಾತಿ ಆಧಾರದಲ್ಲಿ ಆಯಾ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಸಿಗಲಿದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಸ್ಪೋರ್ಟ್ಸ್ ಟ್ರಯಲ್ಸ್, ಎಜುಕೇಶನ್ ಕ್ವಾಲಿಫಿಕೇಶನ್, ಫಿಜಿಕಲ್ ಫಿಟ್ನೆಸ್ ಟೆಸ್ಟ್,
ದಾಖಲಾತಿ ಪರಿಶೀಲನೆ ನಡೆಸಿ ಬಳಿಕ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.
ಮಾಸಿಕ ವೇತನ
ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆ ಆಗುವವರಿಗೆ ಮಾಸಿಕ ₹ 5,200- 20,200 ರೂಪಾಯಿ ವೇತನಸಹಿತ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ
ಆಫ್‌ಲೈನ್ ಮೂಲಕವೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಹಿತ ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 19ರೊಳಗಾಗಿ ಕಚೇರಿಗೆ ತಲುಪುವಂತೆ ಸಲ್ಲಿಸಬೇಕು. ಅರ್ಜಿಯನ್ನು 'ವಲಯ ರೈಲ್ವೇ/ಹೆಡ್ ಕ್ವಾರ್ಟರ್ಸ್ ಕೋಟಾ ವಿರುದ್ಧ ಕ್ರೀಡಾ ಕೋಟಾ: ಸಹಾಯಕ ಸಿಬ್ಬಂದಿ ಅಧಿಕಾರಿ/ಹೆಚ್‌ಕ್ಯೂ ನೈಋತ್ಯ ಹೆಚ್‌ಕ್ಯೂ ಕಚೇರಿ, ಸಿಬ್ಬಂದಿ ಇಲಾಖೆ, ರೈಲು ಸೌಧ, ಗದಗ ರಸ್ತೆ, ಹುಬ್ಬಳ್ಳಿ-580020' ಇಲ್ಲಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.
ಬೆಂಗಳೂರು ವಿಭಾಗದ ಅರ್ಜಿಗಳನ್ನು 'ಬೆಂಗಳೂರು ವಿಭಾಗದ ಕೋಟಾ ವಿರುದ್ಧ ಕ್ರೀಡಾ ಕೋಟಾ, ಹಿರಿಯ ವಿಭಾಗದ ಸಿಬ್ಬಂದಿ ಅಧಿಕಾರಿ, DRM ಕಚೇರಿ ಸಂಕೀರ್ಣ, ನೈಋತ್ಯ ಪದವಿ, ಬೆಂಗಳೂರು-560023 ಇಲ್ಲಿಗೆ ಹಾಗೂ ಮೈಸೂರು ವಿಭಾಗದ ಕೋಟಾ ವಿರುದ್ಧ ಕ್ರೀಡಾ ಕೋಟಾ ಹಿರಿಯ ವಿಭಾಗದ ಸಿಬ್ಬಂದಿ ಅಧಿಕಾರಿ, ನೈಋತ್ಯ ಕಾರ್ಯಕ್ರಮ, ಇರ್ವಿನ್ ರಸ್ತೆ, ಮೈಸೂರು-570001 ಈ ವಿಳಾಸಕ್ಕೆ ಕಳುಹಸಿಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications