ಶಿವಮೊಗ್ಗ: ಕೆಲಸ ಖಾಲಿ ಇದೆ, ನೇರ ಸಂದರ್ಶನ, ನೇಮಕಾತಿ ವಿವರ

ಶಿವಮೊಗ್ಗ, ಆಗಸ್ಟ್‌ 07: ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಯಲಿದೆ, ಹಲವು ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ, ಅರ್ಹರು ಕೆಲಸವ ವಿವರಗಳನ್ನು ನೋಡಿಕೊಂಡು ಅರ್ಜಿ ಸಲ್ಲಿಸಬಹುದು.

ಅರೆಕಾಲಿಕ ಉಪನ್ಯಾಸಕರ ನೇಮಕಕ್ಕೆ ಸೊರಬ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅರ್ಜಿ ಕರೆಯಲಾಗಿದೆ. ಇ&ಸಿ ವಿಭಾಗ, ಆಟೋಮೊಬೈಲ್ ವಿಭಾಗ ಮತ್ತು ಇ&ಇ ವಿಭಾಗಗಳಿಗೆ ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹರು ಅರ್ಜಿ ಹಾಕಬಹುದು.

Shivamogga Walk In Interview And Recruitment Details

ಇ&ಸಿ ವಿಭಾಗಕ್ಕೆ ಬಿ.ಇ. ಇನ್ ಇ&ಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದವರು, ಆಟೋಮೊಬೈಲ್ ವಿಭಾಗಕ್ಕೆ ಬಿಇ ಇನ್ ಆಟೋಮೊಬೈಲ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದವರು ಹಾಗೂ ಇ&ಇ ವಿಭಾಗಕ್ಕೆ ಬಿಇ ಇನ್ ಎಲೆಕ್ಟ್ರಾನಿಕ್ ಪ್ರಥಮ ದರ್ಜೆಯಲ್ಲಿ ರ್ತೇಡೆಯಾಗಿರುವವರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ಅಂಕಪಟ್ಟಿಗಳು, ಪ್ರಮಾಣ ಪತ್ರ ಮತ್ತು ಪೋಟೋಗಳನ್ನು ಲಗತ್ತಿಸಿ ಸಲ್ಲಿಸುವಂತೆ ಸೊರಬ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9482587139/ 9449379331/ 9449573321 ಸಂಖ್ಯೆಗೆ ಕರೆ ಮಾಡಬಹುದು.

ಗುತ್ತಿಗೆ ಆಧಾರದ ನೇಮಕ, ನೇರ ಸಂದರ್ಶನ: ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯಕೀಯ ಆಮ್ಲಜನಕ ವ್ಯವಸ್ಥೆಯ ನಿರ್ವಹಣೆ ತಂತ್ರಜ್ಞರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಇದರಕ್ಕಾಗಿ ಆಗಸ್ಟ್ 12ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1ರ ವರೆಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನವನ್ನು ನಡೆಸಲಾಗುತ್ತದೆ.

ಡಿಪ್ಲೋಮಾ/ ಐಟಿಐ ಇನ್ ಬಯೋ ಮೆಡಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಇನ್‌ಸ್ಟ್ರುಮೆಂಟೇಶನ್/ ಮೆಕಾನಿಕಲ್/ ಇನ್‌ಸ್ಟ್ರುಮೆಂಟ್ ಮ್ಯಾಕಾನಿಕ್/ ಮೈಂಟೆನೆನ್ಸ್ ಮ್ಯಾಕಾನಿಕ್ ವಿದ್ಯಾರ್ಹತೆ ಹೊಂದಿದವರಿಗೆ ಹಾಗೂ ಅನುಭವವುಳ್ಳ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು.

ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಮೂಲ ದಾಖಲಾತಿಗಳು ಮತ್ತು ಪ್ರಮಾಣ ಪತ್ರ ಹಾಗೂ ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಆಡಳಿತ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿವಮೊಗ್ಗ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಎಲ್ಲಾ ತಾಲೂಕುಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಕರೆದಿದೆ.

ಅರ್ಹ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸ್ಥಳೀಯ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ https://karnemakaone.kar.nic.in/abcd/ ಮೂಲಕ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆಗಸ್ಟ್ 29ರೊಳಗಾಗಿ ಅರ್ಜಿ ಸಲ್ಲಿಸಬೇಕಿದೆ.

ಶಿವಮೊಗ್ಗ ಕಾರ್ಯಕರ್ತೆಯರು-34, ಸಹಾಯಕಿಯರು-118. ಭದ್ರಾವತಿ ಕಾರ್ಯಕರ್ತೆಯರು-10, ಸಹಾಯಕಿಯರು-72. ಹೊಸನಗರ ಕಾರ್ಯಕರ್ತೆಯರು-7, ಸಹಾಯಕಿಯರು-35. ಸಾಗರ ಕಾರ್ಯಕರ್ತೆಯರು-21, ಸಹಾಯಕಿಯರು-62. ಶಿಕಾರಿಪುರ ಕಾರ್ಯಕರ್ತೆಯರು 8, ಸಹಾಯಕಿಯರು-55. ಸೊರಬ ಕಾರ್ಯಕರ್ತೆಯರು-38, ಸಹಾಯಕಿಯರು-65, ತೀರ್ಥಹಳ್ಳಿ ಕಾರ್ಯಕರ್ತೆಯರು 9, ಸಹಾಯಕಿಯರು-41 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಹೆಚ್ಚಿನ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್ ಹಾಗೂ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+