ಶಿವಮೊಗ್ಗ ವಿವಿಧ ತಜ್ಞ ವೈದ್ಯರುಗಳ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ, ಆಗಸ್ಟ್ 20: ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಕೋವಿಡ್/ನಾನ್ ಕೋವಿಡ್ ಆಸ್ಪತ್ರೆಯ ನಿರ್ವಹಣೆಗಾಗಿ ಎಂಬಿಬಿಎಸ್ ಮತ್ತು ಪೋಸ್ಟ್ ಗ್ರಾಜ್ಯುಯೇಟ್ ವಿದ್ಯಾರ್ಹ ಹೊಂದಿರುವ ತಜ್ಞ ವೈದ್ಯರುಗಳನ್ನು ನೇಮಿಸಿಕೊಳ್ಳಲಾಗುತ್ತಿದೆ.
Recommended Video
ಗುತ್ತಿಗೆ ಆಧಾರದ ಮೇಲೆ ಅಥವಾ ತಾತ್ಕಾಲಿಕ ಅಥವಾ ಒಪ್ಪಂದದ ಮುಖಾಂತರ ಅಥವಾ ಅರೆಕಾಲಿಕ ಅಥವಾ ಪ್ರಕರಣವಾರು ಒಪ್ಪಂದದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಪಿಜಿಷಿಯನ್-10, ಪುಲ್ಮೊನಾಲೊಜಿಸ್ಟ್-2, ಅನ್ಸತೇಸಿಯೋಲಾಜಿಸ್ಟ್-10, ಗೈನಿಕಾಲಿಜಿಸ್ಟ್-6 ಒಟ್ಟು 28 ವೈದ್ಯ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಸಂಸ್ಥೆಯ ಜಾಲತಾಣ : www.sims-shimoga.com ನಲ್ಲಿ ಅರ್ಜಿಯನ್ನು ಪಡೆದು, ಆನ್‍ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿದ ಪ್ರತಿ ಹಾಗೂ ಮೂಲ ದಾಖಲಾತಿಗಳೊಂದಿಗೆ ಆಗಸ್ಟ್ 20 ರ ನಂತರ ಪ್ರತಿದಿನ ನಿರ್ದೇಶಕರ ಕಚೇರಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವುದು. ಈ ನೇಮಕಾತಿಯಲ್ಲಿ ನಿವೃತ್ತ ವೈದ್ಯರುಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಿಮ್ಸ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications