ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SBI Recruitment: 1438 ಪೋಸ್ಟ್‌ಗಳಿಗೆ ನೇಮಕಾತಿ- ಇಲ್ಲಿ ಅರ್ಜಿ ಸಲ್ಲಿಸಿ, ವೇತನವನ್ನೂ ಪರಿಶೀಲಿಸಿ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 23: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಂದದ ಆಧಾರದ ಮೇಲೆ ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

SBI ನಿವೃತ್ತ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು SBI ಯ ಹಿಂದಿನ ಅಸೋಸಿಯೇಟ್ಸ್ ಬ್ಯಾಂಕ್‌ಗಳ ಸಿಬ್ಬಂದಿ (e-ABs) ಒಪ್ಪಂದದ ಆಧಾರದ ಮೇಲೆ ಕಲೆಕ್ಷನ್ ಫೆಸಿಲಿಟೇಟರ್‌ಗಳ ಹುದ್ದೆಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು.

ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಹಾಕಿ ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಹಾಕಿ

ಸಂಸ್ಥೆಯಲ್ಲಿ ಒಟ್ಟು 1438 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ನಿವೃತ್ತ ಅಧಿಕಾರಿಗಳು/ಸಿಬ್ಬಂದಿಯನ್ನು CPC/ಪ್ರಾದೇಶಿಕ ಕಚೇರಿ/ AO (ಆಡಳಿತಾತ್ಮಕ ಕಚೇರಿ)/ ATC (ಆಸ್ತಿಗಳ ಟ್ರ್ಯಾಕಿಂಗ್ ಕೇಂದ್ರ) ಅಥವಾ LHO ನಿರ್ಧರಿಸಿದಂತೆ ಯಾವುದೇ ಇತರ ಕಚೇರಿ ಸ್ಥಳಗಳು/ಸಂಸ್ಥೆಗಳಲ್ಲಿ ನೌಕರರನ್ನು ನಿಯೋಜಿಸಲಾಗುವುದು.

SBI Recruitment 2023: Apply for 1438 posts check salary and last date to apply

ಆಸಕ್ತ ಅಭ್ಯರ್ಥಿಗಳು ಜನವರಿ 10, 2023 ರ ವರೆಗೆ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಒಟ್ಟು ಖಾಲಿ ಹುದ್ದೆಗಳು ಮತ್ತು ಅವುಗಳ ಹಂಚಿಕೆ

General: 680
EWS: 125
OBC: 314
SC: 198
ST: 121
Total: 1438

SBI ನೇಮಕಾತಿ: ಸಂಬಳ

ವೇತನವನ್ನು ಮಾಸಿಕ ಮಧ್ಯಂತರದಲ್ಲಿ ಪಾವತಿಸಲಾಗುವುದು. ಕಲೆಕ್ಷನ್ ಫೆಸಿಲಿಟೇಟರ್‌ಗಳಿಗೆ ಮಾಸಿಕ ವೇತನವು ಕೆಳಕಂಡಂತಿದೆ:

Clerical- 25000 ರೂ
JMGS-I- ರೂ. 35000
MMGS-II ಮತ್ತು MMGS-III- ರೂ. 40000

SBI Recruitment 2023: Apply for 1438 posts check salary and last date to apply

SBI ನೇಮಕಾತಿ: ಮಾನದಂಡ

ಎಸ್‌ಬಿಐ ಅಥವಾ ಬ್ಯಾಂಕ್‌ನ ಇತರ ಸಹವರ್ತಿ ಸಂಸ್ಥೆಗಳ ನಿವೃತ್ತ ಅಧಿಕಾರಿ ಅಥವಾ ಸಿಬ್ಬಂದಿ (63 ವರ್ಷಕ್ಕಿಂತ ಮೇಲ್ಪಟ್ಟಿರದ) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸೇವೆಯ(ಅನುಭವ) ದಾಖಲೆಯನ್ನು ಹೊಂದಿರಬೇಕು. ಅವರಿಗೆ ನೀಡಲಾದ ಉದ್ಯೋಗದಲ್ಲಿ ಅವರು ಜ್ಞಾನ ಮತ್ತು ಪರಿಣತಿಯನ್ನು ಹೊಂದಿರಬೇಕು.

SBI ನೇಮಕಾತಿ: ಅರ್ಜಿ ಸಲ್ಲಿಸುವ ಕ್ರಮಗಳು

sbi.co.in/web/careers ನಲ್ಲಿ ಪುಟಕ್ಕೆ ಭೇಟಿ ನೀಡಿ. 'ENGAGEMENT OF RETIRED BANK OFFICERS/STAFF OF SBI & e-ABs ON CONTRACT BASIS' ಮೇಲೆ ಕ್ಲಿಕ್ ಮಾಡಿ
'Apply Online'ಲಿಂಕ್ ಅನ್ನು ಕ್ಲಿಕ್ ಮಾಡಿ
ನೋಂದಾಯಿಸಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ಮುಂದುವರಿಯಿರಿ
ಫಾರ್ಮ್ ಅನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿ.

English summary
The State Bank of India is inviting applications for Collection facilitators post on a contractual basis
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X