ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ 333 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಸೆ.19: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL) ತನ್ನ ಅಧಿಕೃತ ವೆಬ್ ತಾಣದಲ್ಲಿ 333 ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಸಹಾಯಕ ಮ್ಯಾನೇಜರ್ ಹಾಗೂ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಜಿದಾರರು ತಮ್ಮ ತುಂಬಿದ ಅರ್ಜಿಯನ್ನು ಸೆಪ್ಟೆಂಬರ್ 30, 2022ರೊಳಗೆ ಸಲ್ಲಿಸತಕ್ಕದ್ದು.
ಸಂಸ್ಥೆ ಹೆಸರು: Steel Authority of India Limited
ಹುದ್ದೆ ಹೆಸರು: ಸಹಾಯಕ ಮ್ಯಾನೇಜರ್ ಹಾಗೂ ನಾನ್ ಎಕ್ಸಿಕ್ಯೂಟಿವ್ ಹುದ್ದೆ
ಒಟ್ಟು ಹುದ್ದೆ : 333
ಉದ್ಯೋಗ ಸ್ಥಳ: ರೂರ್ಕೆಲಾ, ಒಡಿಶಾ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 30, 2022
ಹುದ್ದೆ-ಹುದ್ದೆ ಸಂಖ್ಯೆ
ಸಹಾಯಕ ಮ್ಯಾನೇಜರ್: 8
ಆಪರೇಟರ್ ಕಮ್ ಟೆಕ್ನಿಷಿಯನ್: 39
ಮೈನಿಂಗ್ ಫೋರ್ ಮನ್: 24
ಸರ್ವೇಯರ್: 5
ಮೈನಿಂಗ್ ಮೇಟ್: 55
ಫೈರ್ ಆಪರೇಟರ್: 25
ಫೈರ್ ಮನ್ ಕಮ್ ಫೈರ್ ಇಂಜಿನ್ ಡ್ರೈವರ್: 36
ಅಟೆಂಡೆಂಟ್ ಕಮ್ ಟೆಕ್ನಿಷಿಯನ್: 30

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ,ಮೆಟ್ರಿಕ್ಯುಲೇಷನ್, ಡಿಪ್ಲೋಮಾ,
ಸಹಾಯಕ ಮ್ಯಾನೇಜರ್: ಬಿ. ಇ/ ಬಿ.ಟೆಕ್
ಆಪರೇಟರ್ ಕಮ್ ಟೆಕ್ನಿಷಿಯನ್, ಮೈನಿಂಗ್ ಫೋರ್ ಮನ್, ಸರ್ವೇಯರ್, ಫೈರ್ ಆಪರೇಟರ್: ಮೆಟ್ರಿಕ್ಯುಲೇಷನ್, 3 ವರ್ಷಗಳ ಡಿಪ್ಲೋಮಾ ಹಾಗೂ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಅನುಭವ ಹಾಗೂ ಪ್ರಮಾಣ ಪತ್ರ.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ವರ್ಷ ಕನಿಷ್ಠ ಹಾಗೂ 28 ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ(ಕೆನೆಪದರ ವರ್ಗ ರಹಿತ) 3 ವರ್ಷ, ದಿವ್ಯಾಂಗ 10 ವರ್ಷಗಳ ತನಕ ವಿನಾಯಿತಿ ಇರಲಿದೆ.
ಸಂಬಳ ನಿರೀಕ್ಷೆ
ಸಹಾಯಕ ಮ್ಯಾನೇಜರ್ : 50,000 ರು ಇಂದ 1,60,000 ರು
ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳು: 26,600 ರು ನಿಂದ 38, 920 ರು
ಫೈರ್ ಆಪರೇಟರ್: 12,900 ರು ಹಾಗೂ 15,000ರು
ಶುಲ್ಕ ಪಾವತಿ:
ಅರ್ಜಿ ಸಲ್ಲಿಸುವ ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು 700 ರೂ. ಶುಲ್ಕವನ್ನು ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಅಂಗವಿಕಲ/ಇಡಬ್ಲ್ಯುಎಸ್/ಇಲಾಖಾ ಅಭ್ಯರ್ಥಿಗಳಿಗೆ 200 ರೂ. ಶುಲ್ಕ ನಿಗದಿ ಮಾಡಲಾಗಿದೆ.
ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30/09/2022
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications