ಕರ್ನಾಟಕ; ಜಿಲ್ಲಾ ಮತ್ತು ತಾಲೂಕು ಮಟ್ಟದ ಉದ್ಯೋಗ ಮಾಹಿತಿ
ಬೆಂಗಳೂರು, ಅಕ್ಟೋಬರ್ 11 : ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 16/10/2019ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇಲಾಖೆಯಡಿಯಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳ ಜಲಮೂಲಗಳ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.
ಈ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಣೆ ಮಾಡಲು ಮಾನವ ಸಂಪನ್ಮೂಲ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಸೇವೆಯನ್ನು ಪಡೆಯುವ ಸಲುವಾಗಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಅಭ್ಯರ್ಥಿಗಳನ್ನು ಪ್ರಾರಂಭಿಕವಾಗಿ ಒಂದು ವರ್ಷದ ಗುತ್ತಿಗೆ ಒಪ್ಪಂದದಲ್ಲಿ ಇಡಲಾಗುವುದು. ಪ್ರತಿವರ್ಷ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ನಂತರ ಮತ್ತೊಂದು ವರ್ಷದ ಅವಧಿಗೆ ನವೀಕರಿಸಲಾಗುತ್ತದೆ. ಹುದ್ದೆಗಳ ವಿವರ, ವೇತನ ಶ್ರೇಣಿ ಮುಂತಾದ ವಿವರಗಳು ಇಲ್ಲಿವೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವ-ಯಾವ ಹುದ್ದೆಗಳು
* ರಾಸಾಯನಿಕ ತಜ್ಞರು ಜಿಲ್ಲಾ ಪ್ರಯೋಗಾಲಯಗಳಲ್ಲಿ ಹುದ್ದೆಗಳು 7. ವೇತನ ಶ್ರೇಣಿ 30,000 ರೂ.
* ರಾಸಾಯನಿಕ ತಜ್ಞರು ತಾಲೂಕು ಪ್ರಯೋಗಾಲಯಗಳಲ್ಲಿ 20 ಹುದ್ದೆ. ವೇತನ ಶ್ರೇಣಿ 25,000
* ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ 10 ಹುದ್ದೆ. ವೇತನ 15,000
* ಜಿಲ್ಲಾ ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರ 51 ಹುದ್ದೆ. ವೇತನ 13,000 +2000 ಭತ್ಯೆ.

ವಯೋಮಿತಿ ವಿವರಗಳು
ರಾಸಾಯನಿಕ ತಜ್ಞರು ಜಿಲ್ಲಾ ಪ್ರಯೋಗಾಲಯ, ರಾಸಾಯನಿಕ ತಜ್ಞರು ತಾಲೂಕು ಪ್ರಯೋಗಾಲಯ, ಜಿಲ್ಲಾ ಪ್ರಯೋಗಾಲಯ ಸಹಾಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ 45 ವರ್ಷವನ್ನು ಮೀರಿರಬಾರದು. ಜಿಲ್ಲಾ ಪ್ರಯೋಗಾಲಯ ಪರಿಚಾರಕರು ಹಾಗೂ ನೀರಿನ ಮಾದರಿ ಸಂಗ್ರಹಗಾರ ಹುದ್ದೆಗೆ 35 ವರ್ಷ ಮೀರಿರಬಾರದು.
ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಈ ಮೇಲ್/ದೂರವಾಣಿ ಮೂಲಕ ಸಂದರ್ಶನದ ದಿನಾಂಕ, ವೇಳೆ ಮತ್ತು ಸ್ಥಳವನ್ನು ತಿಳಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ವಿಳಾಸ
ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಗುರುತಿನ ಪತ್ರ ಮತ್ತು ಇತರ ವಿವರದೊಂದಿಗೆ ಅರ್ಜಿಯನ್ನು ರಿಜಿಸ್ಡರ್ ಪೋಸ್ಟ್, ಸ್ಪೀಡ್ ಪೋಸ್ಟ್, ಕೊರಿಯರ್ ಮೂಲಕ ಸಲ್ಲಿಸಬಹುದು.
ವಿಳಾಸ : ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, 'ಇ' ಬ್ಲಾಕ್, ಕೆ. ಹೆಚ್. ಬಿ. ಕಾಂಪ್ಲೆಕ್ಸ್, ಕಾವೇರಿ ಭವನ, ಬೆಂಗಳೂರು 560009. (16/10/2019ರೊಳಗೆ ತಲುಪುವಂತೆ ಸಲ್ಲಿಸಬೇಕು).

ಒಂದು ವರ್ಷದ ಅವಧಿ
ಆಯ್ಕೆಯಾದ ಅಭ್ಯರ್ಥಿಗಳನ್ನು ಪ್ರಾರಂಭಿಕವಾಗಿ ಒಂದು ವರ್ಷದ ಗುತ್ತಿಗೆ ಒಪ್ಪಂದದಲ್ಲಿ ಇಡಲಾಗುವುದು. ಪ್ರತಿವರ್ಷ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ನಂತರ ಮತ್ತೊಂದು ವರ್ಷದ ಅವಧಿಗೆ ನವೀಕರಿಸಲಾಗುತ್ತದೆ. ಸಿಬ್ಬಂದಿಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣವಾಗಿ ಅಥವ ಭಾಗಶಃ ರದ್ದು ಮಾಡುವ ಅಥವ ಮುಂದೂಡುವ ಹಕ್ಕನ್ನು ಇಲಾಖೆಯು ಹೊಂದಿರುತ್ತದೆ.












Click it and Unblock the Notifications