RRB NTPC Exam: 11,558 ಹುದ್ದೆಗಳ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ ಶೀಘ್ರ, ಅರ್ಜಿ ಸ್ಥಿತಿ ಪರಿಶೀಲಿಸಿ

ಬೆಂಗಳೂರು, ಡಿಸೆಂಬರ್ 01: ರೈಲ್ವೆ ನೇಮಕಾತಿ ಮಂಡಳಿ (RRB)ಯು ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ತಾಂತ್ರಿಕವಲ್ಲದ ಪ್ರಮುಖ ವರ್ಗಗಳಲ್ಲಿ (NTPC) ಖಾಲ ಇರುವ ಸಾವಿರಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಈಗಾಗಲೇ ಅರ್ಜಿ ಸ್ವೀಕರಿಸಿರುವ ಆರ್‌ಆರ್‌ಬಿಯು ಶೀಘ್ರವೇ ಪರೀಕ್ಷೆ ದಿನಾಂಕ ಪ್ರಕಟಿಸಲಿದೆ. ಅದಕ್ಕು ಮೊದಲು ಪದವಿ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ.

RRB NTPC ಪರೀಕ್ಷೆ 2024ರ ಸಂಬಂಧ ಈ ಪರೀಕ್ಷೆಯು ಒಟ್ಟು 11,558 ಹುದ್ದೆಗಳಿಗೆ ನಡೆಯಲಿದೆ. ಪದವಿ ಹಂತದಲ್ಲಿ 8,113 ಹಾಗೂ ಪದವಿಪೂರ್ವ ಮಟ್ಟದಲ್ಲಿ 3,445 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರತ್ಯೇಕ ವೆಬ್‌ಸೈಟ್‌ಗಳಿಗೆ ಹೋಗಿ ನಿಮ್ಮ ಅರ್ಜಿ ಸ್ವೀಕಾರ ಆಗಿದೆಯೇ, ಇಲ್ಲವೇ, ಸ್ಥಿತಿ ಗತಿ ಕುರಿತು ಪರಿಶೀಲಿಸುವಂತೆ ಕೋರಲಾಗಿದೆ.

RRB NTPC Recruitment 2024 exam date will announce soon Here s how check application status

ರೈಲ್ವೆ ನೇಮಕಾತಿ ಮಂಡಳಿಯು NTPC ಸ್ನಾತಕಪೂರ್ವ ಮತ್ತು ಪದವಿ ಮಟ್ಟದ ಈ ಎರಡು ವರ್ಗದ ಹುದ್ದೆಗಳಿಗೆ ಪರೀಕ್ಷೆಯ ವೇಳಾಪಟ್ಟಿ ಆರ್‌ಆರ್‌ಬಿ ವೆಬ್‌ಸೈಟ್‌ಗಳಲ್ಲಿ ಬಿಡುಗಡೆ ಮಾಡಲಿದೆ. ಮೊದಲು ಪರೀಕ್ಷೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಪ್ರವೇಶ ಪತ್ರ (ಹಾಲ್‌ಟಿಕೆಟ್) ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.

ಅಭ್ಯರ್ಥಿಗಳು ಆರ್‌ಆರ್‌ಬಿ ಅಧಿಕೃತ ಜಾಲತಾಣದಲ್ಲಿ ತಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆಯೇ, ಇಲ್ಲವೇ ಎಂದು ಪರಿಶೀಲಿಸಿ. ನೀವು ಅರ್ಜಿ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕ ಮಾಹಿತಿ ಒದಗಿಸಿ ಲಾಗಿನ್ ಆಗಿ ಪರಿಶೀಲಿಸಿಕೊಳ್ಳಬಹುದು. ಅದಕ್ಕಾಗಿ ನೀವು ಅಧಿಕೃತ ಜಾಲತಾಣ https://www.rrbcdg.gov.in/ ಕ್ಕೆ ಭೇಟಿ ನೀಡಬೇಕು.

RRB NTPC ಪರೀಕ್ಷೆ 2024 ಆಯ್ಕೆ ಹೇಗೆ?

ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆ ಸೂಚನೆಯಲ್ಲಿ, ಪದವಿಪೂರ್ವ ಹುದ್ದೆಗಳ ಭರ್ರ್ತಿಗಾಗಿ ಅಭ್ಯರ್ಥಿಗಳಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಬಳಿಕ ಕಂಪ್ಯೂಟರ್ ಆಧಾರಿತ ಟೈಪಿಂಗ್ ಸ್ಕಿಲ್ ಟೆಸ್ಟ್ (TST) ಸಹ ನಡೆಸಿ ಆಯ್ಕೆ ಮಾಡಲಾಗುತ್ತದೆ.

RRB NTPC Recruitment 2024 exam date will announce soon Here s how check application status

ಇನ್ನೂ ಮತ್ತೊಂದು ವರ್ಗವಾದ ಪದವೀಧರ-ಹಂತದ (ಸ್ನಾತಕಪೂರ್ವ) ಹುದ್ದೆಗಳ ನೇಮಕಾತಿ ವೇಳೆ ಅಭ್ಯರ್ಥಿಗಳಿಗೆ ಈ ಮೇಲಿನ ಎರಡು ಕಂಪ್ಯೂಟರ್ ಆಧಾರಿತ ಪರೀಕ್ಷೆ ಜೊತೆಗೆ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT) ನಡೆಸಲಾಗುತ್ತದೆ ಎಂದು ಆರ್‌ಆರ್‌ಬಿ ನೇಮಕಾತಿ ಸೂಚನೆಯಲ್ಲಿ ಮಾಹಿತಿ ನೀಡಿದೆ.

ಪದವಿಧರ 8,113 ಹುದ್ದೆಗಳಿಗೆ ಮಾಸಿಕ ವೇತನ ಮಾಹಿತಿ

ರೈಲ್ವೆ ನೇಮಕಾತಿ ಮಂಡಳಿ ಪ್ರಕಾರ, ಈ NTPC ಪರೀಕ್ಷೆಯ ಪದವೀಧರ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿಯಾದರೂ ಪೋಸ್ಟಿಂಗ್ ನೀಡುವ ಜೊತೆಗೆ ಮಾಸಿಕವಾಗಿ ಅವರಿಗೆ ₹19,900 ರಿಂದ ₹35,400 ವೇತನ ನೀಡಲಾಗುವುದು.

ಪದವಿಪೂರ್ವ 3,445 ಹುದ್ದೆ ಅಭ್ಯರ್ಥಿಗಳ ವೇತನ ವಿವರ

ಪದವಿ ಪೂರ್ವ 3,445 ಹುದ್ದೆಗಳಿಗೆ ಆಯ್ಕೆ ಆಗುವ ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಅಭ್ಯರ್ಥಿಗಳು ಆಯ್ಕೆ ಆದ ಬಳಿಕ ಅವರಿಗೆ ಮಾಸಿಕವಾಗಿ ₹19,900 (ಹಂತ-2) ವೇತನ ನೀಡಲಾಗುತ್ತದೆ. ಇದರಲ್ಲಿ ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್ ಅಭ್ಯರ್ಥಿಗೆ ₹21,700 (ಹಂತ-3) ಮಾಸಿಕ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ https://www.rrbcdg.gov.in/ ಕ್ಲಿಕ್ ಮಾಡಿಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+