RRB ALP Recruitment 2024: 5,676 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ಸಂಬಳ ಎಷ್ಟು ಗೊತ್ತಾ?-ಇಲ್ಲಿದೆ ಮಾಹಿತಿ

ಬೆಂಗಳೂರು, ಜನವರಿ, 21: ಭಾರತೀಯ ರೈಲ್ವೆಯು ಸಾರಿಗೆ ವಿಭಾಗಗಳಲ್ಲಿ ದೊಡ್ಡ ಕ್ಷೇತ್ರವಾಗಿದೆ. ಅಲ್ಲದೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಉತ್ತಮ ಸೇವೆಗಳನ್ನು ಒದಗಿಸುವ ಸಾರಿಗೆಯಾಗಿದೆ. ಜೊತೆಗೆ ಹೆಚ್ಚೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿಯೂ ಬೇರೆ ಸಾರಿಗೆಗಳಿಗಿಂತ ಒಂದು ಹೆಜ್ಜೆ ಮುಂದಿಗೆ. ಇದೀಗ ಮತ್ತೆ ರೈಲ್ವೆ ಇಲಾಖೆಯ ರೈಲ್ವೆ ನೇಮಕಾತಿ ಮಂಡಳಿಗಳಿಂದ 5,676 ಸಹಾಯಕ ಲೊಕೊ ಪೈಲಟ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸಬೇಕಾದವರು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂದು ಇಲ್ಲಿ ತಿಳಿಯಿರಿ.

5,676 ಸಹಾಯಕ ಲೊಕೊ ಪೈಲಟ್‌ಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತರು ಸರ್ಜಿ ಸಲ್ಲಿಸಬಹುದಾಗಿದೆ. ಜನವರಿ 20ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ಆಗಿದ್ದು, ಫೆಬ್ರವರಿ 19 ಕೊನೆಯ ದಿನಾಂಕವಾಗಿದೆ. ಮೆಟ್ರಿಕುಲೇಷನ್‌ ಜೊತೆಗೆ ಐಟಿಐ ಮಾಡಿಕೊಂಡವರು ಅಥವಾ ಮೆಟ್ರಿಕ್ಯುಷನ್‌ ಜೊತೆಗೆ ಡಿಪ್ಲೋಮಾ ಮಾಡಿದವರು ಸರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಇನ್ನು ಆಯ್ಕೆಯಾದವರಿಗೆ ಆರಂಭಿಕ ವೇತನ 19,000 ರೂಪಾಯಿ ಆಗಿದೆ.

 RRB ALP Recruitment 2024: Application invited for 5,676 posts, Know Monthly salary details

ವಯೋಮಿತಿ ವಿಚಾರಕ್ಕೆ ಬಂದರೆ 18ರಿಂದ 30 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದಾಗಿದೆ. ಅದರಲ್ಲೂ ಎಸ್‌.ಸಿ/ಎಸ್‌ಟಿ ಅವರಿಗೆ 5 ವರ್ಷ ಮತ್ತು ಒಬಿಸಿ ಅವರಿಗೆ 3 ವರ್ಷ ವಯೋಮಾನದಲ್ಲಿ ಸಡಿಲಿಕೆ ಇದೆ. ನಿವೃತ್ತ ಸೈನಿಕರಿಗೂ ಸಡಿಲಿಕೆ ಇರಲಿದೆ. ಇನ್ನು ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಯಲಿದ್ದು, ದೈಹಿಕ ಅರ್ಹತೆ ಜೊತೆ ವೈದ್ಯಕೀಯ ಪರೀಕ್ಷೆ ಇರಲಿದೆ ಎಂದು ತಿಳಿಸಿದೆ.

ಈ ನೇಮಕಾತಿಯು 21 ರೈಲ್ವೆ ನೇಮಕಾತಿ ಮಂಡಲಿಗಳಿಂದ ನಡೆಯುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಮಂಡಳಿಯ ವೆಬ್‌ಸೈಟ್‌ಗಳಿಗೆ ಹೋಗಿ (ಬೆಂಗಳೂರು -www.rrbbnc.gov.in) ಹುದ್ದೆಗಳ ವರ್ಗೀಕರಣ, ಸಂಪೂರ್ಣ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಕೂಡ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+