ದೀಪಾವಳಿ ಗಿಫ್ಟ್: 75000 ಮಂದಿಗೆ ಸರ್ಕಾರಿ ನೌಕರಿಯ ಆಫರ್ ಲೆಟರ್ ಕೊಟ್ಟ ಪ್ರಧಾನಿ!

ನವದೆಹಲಿ, ಅಕ್ಟೋಬರ್ 22: ದೀಪಾವಳಿ ಹೊಸ್ತಿಲಿನಲ್ಲಿ ದೇಶದ ನಿರುದ್ಯೋಗಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಂಪರ್ ಕೊಡುಗೆಯನ್ನು ಕೊಟ್ಟಿದ್ದಾರೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಕಲ್ಪಿಸಿದ್ದಾರೆ.

ನವದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೋಜಗಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಕೋವಿಡ್-19 ನಂತರದಲ್ಲಿ ವಿಶ್ವದಾದ್ಯಂತ ಎದುರಾಗಿರುವ ಆರ್ಥಿಕ ಸಂಕಷ್ಟ ನಿವಾರಣಮೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ 75,000 ನೇಮಕಾತಿ ಪತ್ರಗಳನ್ನು ವಿತರಿಸಿದ ನಂತರ "ರೋಜಗಾರ್ ಮೇಳ"ವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಯುವಜನರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರವು ಅನೇಕ ರಂಗಗಳಲ್ಲಿ ಕೆಲಸ ಮಾಡುತ್ತಿದೆ ಎಂದರು "ಜಾಗತಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬುದು ಸತ್ಯ. ಹಲವಾರು ದೊಡ್ಡ ಆರ್ಥಿಕತೆಗಳು ಹೆಣಗಾಡುತ್ತಿದ್ದು, ಹಲವು ದೇಶಗಳಲ್ಲಿ ಹಣದುಬ್ಬರ ಮತ್ತು ನಿರುದ್ಯೋಗದಂತಹ ಸಮಸ್ಯೆಳಿಂದ ತತ್ತರಿಸಿ ಹೋಗಿವೆ," ಎಂದು ಪ್ರಧಾನಿ ಮೋದಿ ಹೇಳಿದರು.

ಸಾಂಕ್ರಾಮಿಕ ಪಿಡುಗಿನ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖ

ಸಾಂಕ್ರಾಮಿಕ ಪಿಡುಗಿನ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖ

ಶತಮಾನಕ್ಕೊಮ್ಮೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗದಿಂದ ಸೃಷ್ಟಿಯಾಗುವ ಅಡ್ಡ ಪರಿಣಾಮಗಳು 100 ದಿನಗಳಲ್ಲಿ ಮಾಯವಾಗುವುದಿಲ್ಲ. ಆದರೆ ಈ ಬಿಕ್ಕಟ್ಟು ಪ್ರಪಂಚದಾದ್ಯಂತ ಎದುರಿಸುತ್ತಿದೆ, ಇದರ ಪರಿಣಾಮವನ್ನು ಎಲ್ಲೆಡೆ ಅನುಭವಿಸಲಾಗುತ್ತಿದೆ. ಭಾರತವು ಈ ಸಮಸ್ಯೆಗಳಿಂದ ನಮ್ಮ ದೇಶವನ್ನು ರಕ್ಷಿಸಲು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮ ದೇಶದ ಮೇಲೆ ಇಂಥ ದುಷ್ಪರಿಣಾಮಗಳನ್ನು ತೊಡೆದು ಹಾಕುವುದಕ್ಕೆ ನಾವು ಪಣ ತೊಟ್ಟಿದ್ದೇವೆ. ಇದು ಸವಾಲಿನ ಕೆಲಸವಾದರೂ, ನಿಮ್ಮ ಆಶೀರ್ವಾದದಿಂದ ನಾವು ಇಲ್ಲಿಯವರೆಗೆ ಸುರಕ್ಷಿತವಾಗಿದ್ದೇವೆ," ಎಂದು ಪ್ರಧಾನಿ ಮೋದಿ ಹೇಳಿದರು.

75,000 ಉದ್ಯೋಗಾಕಾಂಕ್ಷಿಗಳಿಗೆ ಆಫರ್ ಲೆಟರ್

75,000 ಉದ್ಯೋಗಾಕಾಂಕ್ಷಿಗಳಿಗೆ ಆಫರ್ ಲೆಟರ್

ರೋಜಗಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, 75,000 ಉದ್ಯೋಗಾಕಾಂಕ್ಷಿಗಳಿಗೆ ವಿದ್ಯುನ್ಮಾನವಾಗಿ ನೇಮಕಾತಿ ಪತ್ರಗಳನ್ನು ಕಳುಹಿಸಿದರು. ದೇಶದಾದ್ಯಂತ ಭಾರತ ಸರ್ಕಾರದ 38 ಸಚಿವಾಲಯಗಳು ಅಥವಾ ಇಲಾಖೆಗಳಿಗೆ ಈ ಹೊಸ ನೇಮಕಾತಿಗಳು ಸಂಬಂಧಿಸಿವೆ. ಅವರಲ್ಲಿ ಗ್ರೂಪ್ ಎ ಮತ್ತು ಬಿ (ಗೆಜೆಟೆಡ್), ಗ್ರೂಪ್ ಬಿ (ನಾನ್ ಗೆಜೆಟೆಡ್) ಮತ್ತು ಸಿ ಗುಂಪಿನಲ್ಲಿ ವಿವಿಧ ಹಂತಗಳಲ್ಲಿ ಸರ್ಕಾರಿ ನೌಕರಿಯನ್ನು ಪಡೆದುಕೊಂಡಿದ್ದಾರೆ.

ಸರ್ಕಾರದ ರಕ್ಷಣಾ ಇಲಾಖೆಗೆ ನೇಮಕಾತಿ

ಸರ್ಕಾರದ ರಕ್ಷಣಾ ಇಲಾಖೆಗೆ ನೇಮಕಾತಿ

ಭಾರತದ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿದ ಹುದ್ದೆೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ರಕ್ಷಣಾ ಇಲಾಖೆಯು ಬಹುಮುಖ್ಯವಾಗಿದೆ. ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿ, ಸಬ್ ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು, ಎಲ್‌ಡಿಸಿಗಳು, ಸ್ಟೆನೋಗ್ರಾಫರ್‌ಗಳು, ಪಿಎಗಳು, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು ಮತ್ತು ಎಂಟಿಎಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

18 ತಿಂಗಳಿನಲ್ಲಿ 10 ಲಕ್ಷ ಜನರಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ

18 ತಿಂಗಳಿನಲ್ಲಿ 10 ಲಕ್ಷ ಜನರಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ

ಕೇಂದ್ರ ಸರ್ಕಾರವು ಈ ನೇಮಕಾತಿಗಳನ್ನು ಸಚಿವಾಲಯಗಳು ಮತ್ತು ಇಲಾಖೆಗಳು ಸ್ವತಃ ಅಥವಾ UPSC, SSC ಮತ್ತು ರೈಲ್ವೇ ನೇಮಕಾತಿ ಮಂಡಳಿಯಂತಹ ನೇಮಕಾತಿ ಏಜೆನ್ಸಿಗಳ ಮೂಲಕ ಮಾಡುತ್ತಿವೆ. ಈ ತ್ವರಿತ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ. ತಂತ್ರಜ್ಞಾನವನ್ನು ಸಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಅಲ್ಲದೇ ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಜನರನ್ನು "ಮಿಷನ್ ಮೋಡ್"ನಲ್ಲಿ ನೇಮಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+