RITES Recruitment: ಮಾಸಿಕ 46,417 ರೂಪಾಯಿ ವೇತನದ ಹುದ್ದೆಗೆ ಅರ್ಜಿ ಆಹ್ವಾನ

RITES Recruitment: ಭಾರಯತೀಯ ರೈಲ್ವೆಯು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ರೈಲುಗಳ ಸೇವೆ ಒದಗಿಸುವುದಲ್ಲದೆ, ಉದ್ಯೋಗವಕಾಶಗಳನ್ನು ಕೂಡ ಸೃಷ್ಟಿಸುತ್ತಾ ಬರುತ್ತಿದೆ. ಇನ್ನು ಇದೀಗ ರೈಲ್ವೆ ಸಚಿವಾಲಯದಡಿ ಬರುವ RITES 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಮಾಸಿಕ ವೇತನ ಎಷ್ಟು ಹಾಗೂ ಅಭ್ಯರ್ಥಿಗಳು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇದು ಭಾರತದ ಸಾರಿಗೆ, ಮೂಲಸೌಕರ್ಯ ಮತ್ತು ಕ್ಷೇತ್ರಗಳಲ್ಲಿ ಪ್ರಧಾನ ಬಹು-ಶಿಸ್ತಿನ ಸಲಹಾ ಸಂಸ್ಥೆಯಾಗಿದೆ. ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹಿನ್ನೆಲೆ ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

RITES Recruitment Applications invited for Monthly Rs 46 417 salary post

ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು 17 ಜನವರಿ 2025ರ ರೊಳಗೆ ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. RITES ವೆಬ್‌​ಸೈಟ್‌ಗೆ​ ಭೇಟಿ ನೀಡಿ ಅರ್ಜಿ ಸಲ್ಲಿಸುವ ಅವಕಾಶ ಇದೆ. ಇವುಗಳು ಕೇಂದ್ರ ಸರ್ಕಾರದಡಿ ಬರುವ ಹುದ್ದೆಗಳು ಆಗಿರುವುದರಿಂದ ಉತ್ತಮ ರೀತಿಯಲ್ಲಿ ಮಾಸಿಕ ವೇತನ ಸಿಗಲಿದೆ. ಗುತ್ತಿಗೆ ಆಧಾರದ ಮೇಲೆ ಈ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಭ್ಯರ್ಥಿಗಳಿಗೆ ಜನವರಿ 13ರಿಂದ 17, 2025ರ ವರೆಗೆ ಸಂದರ್ಶನ ನಡೆಯುತ್ತದೆ.

ಪ್ರಮುಖ ವಿವರಗಳು

* ಒಟ್ಟು ಹುದ್ದೆಗಳು-25
* ವಯಸ್ಸಿನ ಮಿತಿ- 40 ವರ್ಷದ ಒಳಗಿನವರಿಗೆ ಅವಕಾಶ
* ಕೆಲಸದಲ್ಲಿ 5 ರಿಂದ 10 ವರ್ಷಗಳ ಅನುಭವ ಇರಬೇಕು
* ಇನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
* ಮಾಸಿಕ ವೇತನ: 41,241 ರಿಂದ 46,417 ರೂಪಾಯಿ

ಹುದ್ದೆಗಳ ಹೆಸರು

* ಸಹಾಯಕ ಹೆದ್ದಾರಿ ಎಂಜಿನಿಯರ್
* ಸರ್ವೆ ಎಂಜಿನಿಯರ್
* ಸಹಾಯಕ ಸೇತುವೆ ಎಂಜಿನಿಯರ್
* ಪ್ರಮಾಣ ಸರ್ವೇಯರ್ (Quantity Surveyor)
* ಎಲೆಕ್ಟ್ರಿಕಲ್ ಇಂಜಿನಿಯರ್
* ಸಿಎಡಿ ತಜ್ಞರು

ವಿದ್ಯಾರ್ಹತೆ ವಿವರ: ಅರ್ಜಿ ಸಲ್ಲಿಸಬಯಸುವವರು ಬಿಇ ಸಿವಿಲ್ ಇಂಜಿನಿಯರ್, ಡಿಪ್ಲೋಮಾದಲ್ಲಿ ಸಿವಿಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಸಿವಿಲ್/ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ ವಿದ್ಯಾರ್ಹತೆ ಪಡೆದಿರಬೇಕಾಗುತ್ತದೆ.

ಎನ್‌ಎಚ್‌ಎಐನಿಂದ ಅರ್ಜಿ ಆಹ್ನಾನ: ಭಾರತೀಯ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ಆಗಾಗ ಹೆದ್ದರಿ ಕಾಮಗಾರಿಗೆ ಸಂಬಂಧಿಸಿದಂತಹ ಮಹತ್ವದ ಅಪ್ಡೇಟ್‌ಗಳನ್ನು ನೀಡುತ್ತಿರುತ್ತದೆ. ಇದೀಗ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳಿರಬೇಕು ಹಾಗೂ ಮಾಸಿಕ ವೇತನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈ ಹುದ್ದೆಗೆ ಡೆಪ್ಯುಟೇಶನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲಸದಲ್ಲಿ ಸಾಕಷ್ಟು ಅನುಭವ ಇರುವಂತವರು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಉದ್ಯೋಗಗಳಿಗೆ 3 ವರ್ಷಗಳ ಅವಧಿಗೆ ಆಕಾಂಕ್ಷಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಣೆ ಮಾಡಲೂಬಹುದು ಎಂದು ತಿಳಿಸಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ವೆಬ್‌​ಸೈಟ್​ ಮೂಲಕ ಆನ್‌​ಲೈನ್‌​ನಲ್ಲಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜನವರಿ 6, 2025ರ ಸಂಜೆ 6 ಗಂಟೆ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಇನ್ನು ಈ ಹುದ್ದೆಗೆ ಸಂಬಂಧಿಸಿದ ಇತರೆ ಮಾಹಿತಿ ಪರಿಶೀಲನೆ ಮಾಡಬೇಕೆಂದರೆ ಇಲಾಖೆಯ ಪಿಡಿಎಫ್​ ಅನ್ನು ಪರಿಶೀಲನೆ
ಮಾಡಬೇಕಾಗುತ್ತದೆ.

ಮಾಸಿಕ ವೇತನ ಎಷ್ಟು?: ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ವೇತನ 67,700-2,08,700 ರೂಪಾಯಿ ಇರುತ್ತದೆ. ಉದ್ಯೋಗದ ಹೆಸರು ಮ್ಯಾನೇಜರ್ (ಫೈನಾನ್ಸ್​ ಮತ್ತು ಅಕೌಂಟ್ಸ್) ಆಗಿದ್ದು, ಒಟ್ಟು 17 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುದೆ. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ 56 ವರ್ಷ ಮೀರಿರಬಾರದು ಎಂದು ತಿಳಿಸಿದೆ.

ಅರ್ಜಿ ಸಲ್ಲಿಕೆಗೆ ಅರ್ಹತೆಗಳೇನು?: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು ವಾಣಿಜ್ಯ ಪದವಿ (ಬಿಕಾಂ) ಅಥವಾ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ ಅಥವಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ 4 ವರ್ಷಗಳ ಅನುಭವ ಇರಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+