ಬೆಳಗಾವಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿ; ನೋಂದಣಿ ಮಾಡಿಸಿ
ಬೆಂಗಳೂರು, ಜನವರಿ 13: ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ಫೆಬ್ರವರಿ 4 ರಿಂದ 15ರ ತನಕ ಸೇನಾ ನೇಮಕಾತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನೋಂದಾವಣಿ ಮಾಡಿಕೊಳ್ಳಬೇಕು. ನೋಂದಣಿಗೆ ಜನವರಿ 18 ಕೊನೆಯ ದಿನವಾಗಿದೆ.
ನೇಮಕಾತಿ ರ‍್ಯಾಲಿಯಲ್ಲಿ ಬೆಳಗಾವಿ, ರಾಯಚೂರು, ಯಾದಗಿರಿ, ಬೀದರ್, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು. ರ‍್ಯಾಲಿಯಲ್ಲಿ ಭಾಗವಹಿಸಲು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ತಾಂತ್ರಿಕ, ಸೈನಿಕ ಕ್ಲರ್ಕ್, ಸ್ಟೋರ್ ಕೀಪರ್ ತಾಂತ್ರಿಕ, ಟ್ರೇಡ್ಸ್ಮನ್, ಸೈನಿಕ ನರ್ಸಿಂಗ್ ಸಹಾಯಕ ಮುಂತಾದ ಹುದ್ದೆಗಳಿಗೆ ನೇಮಕಾತಿ ರ‍್ಯಾಲಿ ನಡೆಯಲಿದೆ. ಆಸಕ್ತರು ರ‍್ಯಾಲಿಯಲ್ಲಿ ಭಾಗವಹಿಸಬಹುದು.

ವೆಬ್ ಸೈಟ್‌ನಲ್ಲಿ ವಯೋಮಾನ, ವಿದ್ಯಾರ್ಹತೆ ಮುಂತಾದ ಅರ್ಹತಾ ಅಂಶಗಳು ಹಾಗೂ ವಿವರಗಳ ಮಾಹಿತಿಯನ್ನು ಪಡೆಯಬಹುದು.
ಅಭ್ಯರ್ಥಿಗಳು ಆನ್‌ಲೈನ್ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ ಹಾಗೂ ಪ್ರವೇಶ ಪತ್ರ ಹೊಂದಿದವರಿಗೆ ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 0831-2950001ಗೆ ಸಂಪರ್ಕಿಸಬಹುದು ಎಂದು ನೇಮಕಾತಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications