Railway RRB NTPC Exam: ಆರ್‌ಆರ್‌ಬಿ ಪರೀಕ್ಷೆ 2025 ವೇಳಾಪಟ್ಟಿ ಅಪ್ಡೇಟ್! ಪರಿಶೀಲನೆ ಹೇಗೆ, ಇಲ್ಲಿದೆ ವಿಧಾನ
RRB NTPC Exam 2025: ಭಾರತದಲ್ಲಿ ರೈಲ್ವೆ ನೇಮಕಾತಿ ಮಂಡಳಿ (RRB) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿದವರಿಗೆ ಯಾವಾಗ ಪರೀಕ್ಷೆ ನಡೆಯಲಿದೆ ಎಂಬೆಲ್ಲ ನಿರೀಕ್ಷೆಗಳು ಇದ್ದವು. ಅದಕ್ಕೀಗ ಉತ್ತರ ಸಿಕ್ಕಿದೆ. NTPC ಉದ್ಯೋಗ ಅಭ್ಯರ್ಥಿಗಳಿಗೆ ಕಂಪ್ಯೂಟರ್-ಆಧಾರಿತ ಪರೀಕ್ಷೆಯ (CBT 1) ಮೊದಲ ಹಂತ ಮುಂದಿನ ದಿನಗಳಲ್ಲಿ ನಡೆಯಲಿದೆ. ಅದರ ಪ್ರವೇಶ ಪತ್ರ (Admit Card) ಸಹ https://rrbcdg.gov.in/ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಆಗಲಿದೆ.
ಆರ್‌ಆರ್‌ಬಿಯು ಖಾಲಿ ಇರುವ 11,558 ತಾಂತ್ರಿಕೇತರ ಜನಪ್ರಿಯ ವರ್ಗಗಳ (NTPC) ಹುದ್ದೆ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ದೇಶಾದ್ಯಂತ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್-ಆಧಾರಿತ ಪರೀಕ್ಷೆ (CBT 1) ಮೊದಲ ಹಂತವನ್ನು ನಡೆಯಲಿದೆ. ಈಗಾಗಲೇ ರೈಲ್ವೆ ಮಂಡಳಿಗೆ ಹುದ್ದೆಗಳ ಭರ್ತಿಗಾಗಿ 1.21 ಕೋಟಿಗೂ ಹೆಚ್ಚು ಅರ್ಜಿಗಳಲ್ಲಿ ಸಲ್ಲಿಕೆ ಆಗಿವೆ. ಈ ಹುದ್ದೆಗಳಿಗೆ ತೀವ್ರ ಸ್ಪರ್ಧೆ ವ್ಯಕ್ತವಾಗಲಿದೆ.

ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಸಿಬಿಟಿ 1 ಪರೀಕ್ಷೆಯನ್ನು ದೇಶದ ನಾನಾ ಕೇಂದ್ರಗಳಲ್ಲಿ, ವಿವಿಧ ಪಾಳಿ ರೂಪದಲ್ಲಿ ನಡೆಸುವ ಸಾಧ್ಯತೆ ಇದೆ. ಅದಕ್ಕಾಗಿ ಅಭ್ಯರ್ಥಿಗಳು ಸೂಕ್ತ ತಯಾರಿ ನಡೆಸಿಕೊಳ್ಳಬೇಕಿದೆ. ಕೇಂದ್ರಗಳಿಗೆ ಗಂಟೆಗೂ ಮೊದಲೇ ಹಾಜರಿರಬೇಕು. ಅನಗತ್ಯ ಗೊಂದಲ ಆತಂಕ ಬೇಡು ಎಂದು ರೈಲ್ವೆ ನೇಮಕಾತಿ ಮಂಡಳಿ ತಿಳಿಸಿದೆ. ಪರೀಕ್ಷೆಯ ದಿನಾಂಕ, ಸಮಯ ಪರೀಕ್ಷಾ ಇತರ ಮಾಹಿತಿಯನ್ನು ಆರ್‌ಆರ್‌ಬಿ ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಿದೆ. RRB NTPC Exam Schedule ನೋಡುವುದು ಎಲ್ಲ, ಪ್ರವೇಶ ಪತ್ರ ಡೌನ್‌ಲೋಡ್ ವಿಧಾನ ಇಲ್ಲಿದೆ.
ಅಧಿಕೃತ ವೆಬ್‌ಸೈಟ್ ಪರಿಶೀಲನೆ ಹೇಗೆ?
ಆರ್‌ಆರ್‌ಬಿ ಎನ್‌ಟಿಪಿಸಿ ಪರೀಕ್ಷೆ ದಿನಾಂಕಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ವೇಳಾಪಟ್ಟಿ ಬಿಡುಗಡೆಯಾದ ಕೂಡಲೇ ಪರಿಶೀಲನೆಗೆ ಇಲ್ಲಿನ ಕ್ರಮ ಅನುಸರಿಸಬೇಕು.
* ಅಭ್ಯರ್ಥಿಗಳು ಮೊದಲು ರೈಲ್ವೆ ನೇಮಕಾತಿ ಮಂಡಳಿಯ (RRB) ವೆಬ್‌ಸೈಟ್ rrbcdg.gov.in ಗೆ ಭೇಟಿ ನೀಡಬೇಕು. ಇಲ್ಲವೇ ಅರ್ಜಿ ಸಲ್ಲಿಸಿದ ನಿರ್ದಿಷ್ಟ RRB ಪ್ರಾದೇಶಿಕ ವೆಬ್‌ಸೈಟ್‌ಗೂ ಭೇಟಿ ಕೊಟ್ಟು ಪರಿಶೀಲಿಸಬಹುದು.
* ತೆರೆದುಕೊಳ್ಳುವ ಪರದೆಯಲ್ಲಿ NTPC ನೇಮಕಾತಿ ವಿಭಾಗದ RRB ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
* ಅರ್ಜಿ ನೋಡಿಕೊಂಡು ಪದವಿಪೂರ್ವ ಅಥವಾ ಪದವಿ ಹಂತದ ಹುದ್ದೆಗಳಿಗೆ ದಿನಾಂಕ ಪರಿಶೀಲಿಸಬೇಕು.
* ದಿನಾಂಕ ಪರಿಶೀಲನೆ ಬಳಿಕ ಭವಿಷ್ಯ ಉಪಯೋಗಕ್ಕಾಗಿ ಅದನ್ನು ಪಿಡಿಎಫ್ ರೂಪದಲ್ಲಿ ಡೌನಲೋಡ್ ಮಾಡಿಟ್ಟುಕೊಳ್ಳಬೇಕು.

100 ಅಂಕದ ಪ್ರಶ್ನೆ ಪತ್ರಿಕೆ
RRB NTPC 2025 ನೇಮಕಾತಿಗಾಗಿ ಕಂಪ್ಯೂಟರ್-ಆಧಾರಿತ ಪರೀಕ್ಷೆ (CBT 1) 100 ವಸ್ತುನಿಷ್ಠ ಮಾದರಿ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಒಂದೂವರೆಗೆ ಗಂಟೆ (90 ನಿಮಿಷಗಳ) ಅವಧಿಯಲ್ಲಿ ಉತ್ತರಿಸಬೇಕಿದೆ. ಮೂರು ವಿಭಾಗದಲ್ಲಿ ಪತ್ರಿಕೆ ಇರಲಿದೆ.
ಗಣಿತ (30 ಪ್ರಶ್ನೆಗಳು), ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ (30 ಪ್ರಶ್ನೆಗಳು) ಹಾಗೂ ಸಾಮಾನ್ಯ ಅರಿವು (40 ಪ್ರಶ್ನೆಗಳು) ಇರಲಿವೆ. ಪ್ರತಿ ಪ್ರಶ್ನೆಗೆ ಒಂದು ಅಂಕ ಇರಲಿದೆ. ಒಟ್ಟು 100 ಪ್ರಶ್ನೆಗಳಿಗೆ 100 ಅಂಕಗಳು ಇರಲಿವೆ.
ಉತ್ತೀರ್ಣಕ್ಕೆ ಜಾತಿವಾರು ಕನಿಷ್ಠ ಅಂಕಗಳ ವಿವರ
ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಮೊದಲ ಹಂತದಿಂದ ಮುಂದಿನ ಹಂತ ಪ್ರವೇಶಿಸಲು ಈ ಸಿಬಿಟಿ 1 ರಲ್ಲಿ ಕನಿಷ್ಠ ಅರ್ಹತೆ ಅಂಕ ಪಡೆಯಬೇಕು. ಸಾಮಾನ್ಯ ಮತ್ತು ಆರ್ಥಿಕವಾಗಿ ದುರ್ಬಲ ವಿಭಾಗ (EWS) ಅಭ್ಯರ್ಥಿಗಳು ಕನಿಷ್ಠ 40 ಅಂಕ.
ಇತರ ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳಿಗೆ ಹಾಗೂ ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಕನಿಷ್ಠ 30 ಅಂಕಗಳು, ಪರಿಶಿಷ್ಟ ಪಂಗಡ ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳು ಶೇಕಡಾ 25 ಅಂಕಡೆ ಪಡೆದಿರಬೇಕು ಎಂದು ತಿಳಿಸಲಾಗಿದೆ. ಉತ್ತೀರ್ಣ ಆದವರ ಶಾರ್ಟ್ ಲಿಸ್ಟ್ ಸಿದ್ದಪಡಿಸಿ ಮುಂದಿನ ಹಂತದ ಪ್ರಕ್ರಿಯೆ ಆರಂಭಿಸಲಾಗುತ್ತದೆ.












Click it and Unblock the Notifications