ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿ.ನಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಆಗಸ್ಟ್ 30 : ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿಮಿಟೆಡ್ 21 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 15 ಸೆಪ್ಟೆಂಬರ್ 2018 ಕೊನೆಯ ದಿನವಾಗಿದೆ.
ಎಕ್ಸಿಕ್ಯೂಟಿವ್ ಟ್ರೈನಿ, ಅಸಿಸ್ಟೆಂಟ್ ಆಫೀಸರ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ವಿದ್ಯಾರ್ಹತೆಯ ವಿವರ
* ಎಕ್ಸಿಕ್ಯೂಟಿವ್ ಟ್ರೈನಿ : ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಎಂಬಿಎ ಎಚ್ಆರ್, ಪರ್ನಲ್ ಮ್ಯಾನೇಜ್‌ಮೆಂಟ್, ಇಂಡಸ್ಟ್ರಿಯಲ್ ರಿಲೇಶನ್, ಸೋಶಿಯಲ್ ವರ್ಕ್
* ಅಸಿಸ್ಟೆಂಟ್ ಆಫೀಸರ್ ಟ್ರೈನಿ (ಪಿಆರ್) : ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ/ಪಬ್ಲಿಕ್ ರಿಲೇಶನ್/ಪತ್ರಿಕೋದ್ಯದಮಲ್ಲಿ ಡಿಪ್ಲೊಮಾ ಮಾನ್ಯತೆ ಪಡೆದ ಸಂಸ್ಥೆ ಅಥವ ವಿಶ್ವವಿದ್ಯಾಲಯದಿಂದ.
* ಅಸಿಸ್ಟೆಂಟ್ ಆಫೀಸರ್ ಟ್ರೈನಿ (Rajbhasha) : ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ವಿತ್ ಇಂಗ್ಲಿಶ್ ಐಚ್ಚಿಕ ವಿಷಯ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 28 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 31 ಜುಲೈ 2018ಕ್ಕೆ ಅನ್ವಯವಾಗುವಂತೆ.
ಎಸ್‌ಸಿ/ಎಸ್‌ಟಿ/ಅಂಗವಿಕಲ/ನಿವೃತ್ತ ಯೋಧರು ಅರ್ಜಿ ಸಲ್ಲಿಸುವಾಗ ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಉಳಿದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ.
ವೇತನ ಶ್ರೇಣಿ
* ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ 60000-180000 ಪ್ರತಿ ತಿಂಗಳು
* ಅಸಿಸ್ಟೆಂಟ್ ಆಫೀಸರ್ ಟ್ರೈನಿ 24500 ಪ್ರತಿ ತಿಂಗಳು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications