ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯಲ್ಲಿ ನೇಮಕಾತಿ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 05 : ಸರ್ಕಾರಿ ಸ್ವಾಮ್ಯದ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಒಟ್ಟು 300 ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎಚ್ಎಎಲ್ ನಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಅಕೌಂಟ್ಸ್ - 20, ಆಟೋಮೊಬೈಲ್ ಇಂಜಿನಿಯರ್ಸ್- 15, ವೈದ್ಯಕೀಯ ಅಧಿಕಾರಿಗಳು- 10 ಸೇರಿದಂತೆ ವಿವಿಧ ವಿಭಾದ ಆಡಳಿತಾಧಿಕಾರಿ ಅಧಿಕಾರಿಗಳ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ದಿನಾಂಕ 15, ಸೆಪ್ಟೆಂಬರ್, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Oriental Insurance Recruitment 2017 Apply for (AO 300 Posts)

ವಿದ್ಯಾರ್ಹತೆ: ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ: 31/07/2017ಕ್ಕೆ ಅನ್ವಯವಾಗುವಂತೆ 21ರಿಂದ 30 ವರ್ಷ ವಯೋಮಿತಿಯನ್ನು ಅಭ್ಯರ್ಥಿಗಳಿಗೆ ನಿಗದಿ ಪಡಿಸಲಾಗಿದೆ.

ಕೆಪಿಎಸ್ ಸಿಯಿಂದ ಎಫ್ ಡಿಎ, ಎಸ್ ಡಿಎ ಹುದ್ದೆಗಾಗಿ ಅರ್ಜಿ

ವೇತನ ಶ್ರೇಣಿ: ಬೇಸಿಕ್ ವೇತನ ಸೇರಿದಂತೆ ಎಲ್ಲಾ ಭತ್ಯೆಗಳು ಸೇರಿ ತಂಗಳಿಗೆ 51000 ರು.

ಆಯ್ಕೆ ವಿಧಾನ: ಪ್ರಾಥಮಿಕ ಪರೀಕ್ಷೆ ಬಳಿಕ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆಯಾದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಪರೀಕ್ಷೆಗಳು ದಿನಾಂಕ 22 ಅಕ್ಟೋಬರ್, 2017ರಂದು ನಡೆಯಲಿವೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳುದುಕೊಳ್ಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Oriental Insurance Company Limited (OICL) (A Wholly Owned by Government of India), New Delhi invites online applications for the post of Administrative Officer (Scale-I) in the disciplines of Accounts, Actuaries. The last date for submission of online application of OICL Administrative Officer Vacancy 2017 is 15th September 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ