309 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ ಓಎನ್‌ಜಿಸಿ

ಬೆಂಗಳೂರು, ಜನವರಿ 11 : ತೈಲ ಮತ್ತು ನೈಸರ್ಗಿಕ ಅನಿಲ ನಿಗಮ 309 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜನವರಿ 27, 2019 ಕೊನೆಯ ದಿನವಾಗಿದೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಓಎನ್‌ಜಿಸಿ) ಅಸಿಸ್ಟೆಂಟ್ ಟೆಕ್ನಿಶಿಯನ್, ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನಿಶಿಯನ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಅಸಿಸ್ಟೆಂಟ್ ಟೆಕ್ನಿಶಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರು 3 ವರ್ಷದ ಡಿಪ್ಲೊಮಾವನ್ನು ಮೆಕಾನಿಕಲ್ ಇಂಜನಿಯರಿಂಗ್/ಕೆಮಿಕಲ್ ಇಂಜಿನಿಯರಿಂಗ್/ಪೆಟ್ರೋಲಿಯಂ ಇಂಜನಿಯರಿಂಗ್‌ನಲ್ಲಿ ಪಡೆದಿರಬೇಕು.

ONGC recruitment 2019 apply for 309 Various Vacancies

ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಹೈಸ್ಕೂಲ್ ಅಥವ 10ನೇ ತರಗತಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸೈನ್ಸ್ ಮತ್ತು ಟ್ರೇಡ್ ಪ್ರಮಾಣ ಪತ್ರವನ್ನು ಫಿಟ್ಟಿಂಗ್ ಅಥವ ಮೆಕಾನಿಕ್‌ ಟ್ರೇಡ್ ಅನ್ನು ಹೊಂದಿರಬೇಕು.

ಅರ್ಜಿ ಶುಲ್ಕ : ಸಾಮಾನ್ಯ ವರ್ಗದವರಿಗೆ 18 ರಿಂದ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಓಬಿಸಿ ಅಭ್ಯರ್ಥಿಗಳಿಗೆ 18 ರಿಂದ 33 ವರ್ಷ, ಎಸ್‌ಸಿ/ಎಸ್‌ಟಿ 18 ರಿಂದ 35 ವರ್ಷ ಜನವರಿ 27, 2019ಕ್ಕೆ ಅನ್ವಯವಾಗುವಂತೆ.

ವೇತನ ಶ್ರೇಣಿ : ಅಸಿಸ್ಟೆಂಟ್ ಟೆಕ್ನಿಶಿಯನ್ 12000-27000 ಪ್ರತಿ ತಿಂಗಳು. ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನಿಶಿಯನ್ 11000-24000 ಪ್ರತಿ ತಿಂಗಳು.

ಅರ್ಜಿ ಶುಲ್ಕಗಳು : ಸಾಮಾನ್ಯ ಮತ್ತು ಓಬಿಸಿ ವರ್ಗದವರಿಗೆ 370 ರೂ., ಎಸ್‌ಸಿ/ಎಸ್‌ಟಿ/ಅಂಗವಿಕಲ/ನಿವೃತ್ತ ಯೋಧರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಅಭ್ಯರ್ಥಿಗಳನ್ನು ಕಂಪ್ಯೂಟರ್ ಪರೀಕ್ಷೆ, ದೈಹಿಕ ಪರೀಕ್ಷೆ, ಸ್ಕಿಲ್ ಟೆಸ್ಟ್‌ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+