Ola Elecdtric Layoffs: ಓಲಾ ಎಲೆಕ್ಟ್ರಿಕ್ ಕಂಪನಿಯಿಂದ 500 ನೌಕರರ ವಜಾ, ಕಾರಣವೇನು?
Ola Elecdtric Layoffs: ರೈಡ್ ಹೈಲಿಂಗ್ ಕಂಪನಿಯ ಉಪಸಂಸ್ಥೆಯಾದ ಓಲಾ ಎಲೆಕ್ಟ್ರಿಕ್ (Ola Elecdtric) ಕಂಪನಿಯು ತನ್ನ ಉದ್ಯೋಗಿಗಳಿಗೆ ಆಘಾತ ಸುದ್ದು ನೀಡಿದೆ. ವಿವಿಧ ಟೆಕ್ ಕಂಪನಿಗಳು ಉದ್ಯೋಗಗಳ ವಜಾ ಘೋಷಿಸಿದಂತೆ ಈ ಓಲಾ ಎಲೆಕ್ಟ್ರಿಕ್ ಸಹ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದೆ. ಇದರಿಂದ ಓಲಾದ ನೂರಾರು ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಮತ್ತು ಮಾರಾಟ ಸಂಸ್ಥೆಯಾಗಿದೆ. ಅಪಾರ ಗ್ರಾಹಕರನ್ನು ಸಂಪಾದಿಸುವಲ್ಲಿ ಮುಂಚೂಣಿ ಕಂಪನಿಗೆ ಅಷ್ಟ ವೇಗವಾಗಿ ಗ್ರಾಹಕರಿಂದ ಆಕ್ರೋಶ, ಅಭಿಪ್ರಾಯ ವ್ಯಕ್ತವಾಯಿತು. ಆರ್ಥಿಕ ನಷ್ಟ, ಕಳಪೆ ಓಲಾ ಸ್ಕೂಟರ್ ಸರ್ವೀಸ್ ಸೇವೆ ಹಾಗೂ ಕಳಪೆ ಗುಣಮಟ್ಟದ ಕಾರಣದಿಂದ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸುವಂತಾಯಿತು.

ಓಲಾ ಸ್ಕೂಟರ್ ಗುಣಮಟ್ಟದ ದೂರು ಆಧರಿಸಿ ಗ್ರಾಹಕ ರಕ್ಷಾಣ ಪ್ರಾಧಿಕಾರದಿಂದ ತನಿಖೆ ಆರಂಭಿಸಿದೆ. ಇದರ ಬೆನ್ನಲ್ಲೆ ನಷ್ಟ ಸರಿದೂಗಿಸಲು, ನೌಕರರ ಹೊಂದಾಣಿಕೆ, ಪುನರ್‌ರಚನೆ ಭಾಗವಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಕನಿಷ್ಠ 500 ಉದ್ಯೋಗಿ ಕೆಲಸದಿಂದ ತೆಗೆಯಲು ಸಜ್ಜಾಗಿದೆ.
ಸಿಇಒ ಭವಿಶ್ ಅಗರ್ವಾಲ್ ನೇತೃತ್ವದ ಓಲಾ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಕಂಪನಿಯು ತನ್ನ ಲಾಭ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ದಕ್ಷ ಕಾರ್ಯಾಚರಣೆ ಮರುಸ್ಥಾಪಿಸಲು ಸಜ್ಜಾಗಿದೆ. ಅದರ ಮುಂದುವರಿದ ಭಾಗವಾಗಿ ಒಂದಷ್ಟು ನೌಕರರನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ವರದಿ ಆಗಿದೆ.
ಆರ್ಥಿಕ ನಷ್ಟ ಅನುಭವಿಸಿದ ಓಲಾ ಎಲೆಕ್ಟ್ರಿಕ್
Ola Electric ಈ ಬಗ್ಗೆ ಅಧಿಕೃತವಾಗಿ ಹೇಳಿಲ್ಲವಾದರೂ ಲಾಭದ ಹಾದಿ ಹಿಡಿಯುವ ನಿಟ್ಟಿನಲ್ಲಿ, ಆರ್ಥಿಕ ಚೇತರಿಕೆ ಜೊತೆಗೆ ಖರ್ಚುಗಳಿಗೆ ಕಡಿವಾಣ ಹಾಕಲು ಉದ್ಯೋಗ ವಜಾಗೆ ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ. ಕಳೆದ ತ್ರೈಮಾಸಿಕ ಅಂದರೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ (Q2 FY25) 495 ಕೋಟಿಯಷ್ಟು ನಷ್ಟವಾಗಿದೆ. ನಷ್ಟವು ಶೇಕಡಾ 43 ರಷ್ಟು ಏರಿಕೆ ಆಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದರ ಪ್ರಮಾಣ ರೂ.347 ಕೋಟಿಗಳಷ್ಟಿತ್ತು.
ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಶೇಕಡಾ 26.1 ರಷ್ಟು ಆದಾಯದಲ್ಲಿ ಕುಸಿತ ಕಂಡಿದೆ. ಮಾರುಕಟ್ಟೆಯ ಪಾಲಿನಲ್ಲಿ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು 33ರಷ್ಟಕ್ಕೆ ಕುಸಿದಿದೆ.
ಒಟ್ಟಾರೆಯಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯ ನಿರ್ವಹಣಾ ವೆಚ್ಚ, ಆರ್ಥಿಕ ನಷ್ಟ ಹೆಚ್ಚಾಗಿದೆ. ಹೀಗಾಗಿ ಇದರ ಹೊಂದಾಣಿಕೆ ಹಾಗೂ ಆಥಿರ್ಕ ಲಾಭದ ಹಾದಿಗೆ ಹೋಗಲೇಬೇಕಾದ ಅನಿವಾರ್ಯತೆಯಿಂದಾಗಿ 500 ಜನರಿಗೆ ಕಂಪನಿಯು ಗೇಟ್ ನೀಡಲು ನಿರ್ಧರಿಸಿದೆ.












Click it and Unblock the Notifications