9 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಐಒಎಲ್
ಬೆಂಗಳೂರು, ಮಾರ್ಚ್ 15 : ಐಒಎಲ್ 9 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 6, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಯಿಲ್ ಇಂಡಿಯಾ ಲಿಮಿಟೆಡ್ (ಐಒಎಲ್) 3 ಜನರಲ್ ಮ್ಯಾನೇಜರ್, 1 ಸೀನಿಯರ್ ಸೆಕ್ಯೂರಿಟಿ ಆಫೀಸರ್ ಸೇರಿದಂತೆ ಒಟ್ಟು 9 ಹುದ್ದೆಗಳನ್ನು ಭರ್ತಿ ಮಾಡಲಿದೆ.
ವೇತನ ಶ್ರೇಣಿ : ಜನರಲ್ ಮ್ಯಾನೇಜರ್ 120000 - 280000, ಸೀನಿಯರ್ ಸೆಕ್ಯೂರಿಟಿ ಆಫೀಸರ್ 60000- 180000 ರೂ.ಗಳು.

ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ರಕ್ಷಣೆ/ಪ್ಯಾರಾಮಿಲಿಟರಿ/ಗ್ರೂಪ್ ಕ್ಯಾಪ್ಟನ್/ಡಿಐಜಿ/ಅಡಿಷನಲ್ ಕಮೀಷನರ್ ಆಫ್ ಪೊಲೀಸ್ ವಿಷಯದಲ್ಲಿ ಅನುಭವ ಹೊಂದಿರಬೇಕು.
ಸೀನಿಯರ್ ಸೆಕ್ಯೂರಿಟಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ರಕ್ಷಣೆ/ಪ್ಯಾರಾಮಿಲಿಟರಿ/ಕ್ಯಾಪ್ಟನ್/ಅಸಿಸ್ಟೆಂಟ್ ಕಮಾಂಡೆಂಟ್ ವಿಷಯದಲ್ಲಿ ಅನುಭವ ಹೊಂದಿರಬೇಕು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 50 ವರ್ಷ. ಸೀನಿಯರ್ ಸೆಕ್ಯೂರಿಟಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 32 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಪ್ರಮುಖ ಅಂಶಗಳು
* ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿಕೆಲಸ
* ಒಟ್ಟು ಹುದ್ದೆಗಳು 9
* ದೇಶದ ಯಾವುದೇ ನಗರದಲ್ಲಿ ಪೋಸ್ಟಿಂಗ್
* 6 ಏಪ್ರಿಲ್ ಅರ್ಜಿ ಸಲ್ಲಿಕೆಗೆ ಕೊನೆ ದಿನ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ











Click it and Unblock the Notifications