ಎನ್‌ಪಿಸಿಐಎಲ್ ನೇಮಕಾತಿ; ಕರ್ನಾಟಕದಲ್ಲಿ ಕೆಲಸ
ಬೆಂಗಳೂರು, ಡಿಸೆಂಬರ್ 16 : ಭಾರತದ ಪರಮಾಣು ವಿದ್ಯುತ್ ನಿಗಮ 144 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು 6/1/2020 ಕೊನೆಯ ದಿನವಾಗಿದೆ.
ಎನ್‌ಪಿಸಿಐಎಲ್ ಡ್ರೈವರ್, ಟೆಕ್ನಿಶಿಯನ್, ಸೈಂಟಿಫಿಕ್ ಅನಲಿಸ್ಟ್, ಸೈಂಟಿಫಿಕ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ಮಾಡಬೇಕಿದೆ.
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ತಿಳಿಯಲು ಅಧಿಸೂಚನೆಯನ್ನು ಓದಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ವಯೋಮಿತಿ ವಿವರ : ಡ್ರೈವರ್ ಹುದ್ದೆಗೆ 20 ರಿಂದ 28 ವರ್ಷಗಳು. ಟೆಕ್ನಿಶಿಯನ್ ಹುದ್ದೆಗೆ 18 ರಿಂದ 25 ವರ್ಷಗಳು. Stipendiary Trainee/ Technician ಹುದ್ದೆಗೆ 18 ರಿಂದ 24 ವರ್ಷಗಳು. ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ 18 ರಿಂದ 30, Stipendiary Trainee/ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ 18 ರಿಂದ 25 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಆಸಕ್ತ ಅಭ್ಯರ್ಥಿಗಳು 17/12/2019 ರಿಂದ 6/01/2020ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications