NIMHANS Recruitment 2023: ವಿವಿಧ ಖಾಲಿ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ, ರೂ. 1ಲಕ್ಷ ವರೆಗೆ ವೇತನ
ಬೆಂಗಳೂರು,ಜೂನ್ 02: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಕೇಂದ್ರ (NIMHANS)ವು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಜೂನ್ 30 ರ ಒಳಗೆ ಅರ್ಜಿ ಸಲ್ಲಿಸುವ ಮೂಲಕ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಪಡೆಯಬಹುದಾಗಿದೆ.
ಸೈಕೋಲಾಜಿಯಲ್ಲಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು 'ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯೂರೋ ಸೈನ್ಸಸ್ ಕ್ಲಿನಿಕಲ್ ಸೈಕಾಲಜಿಸ್ಟ್' ಒಟ್ಟು ಆರು ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವವರಿಗೆ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ದೊರೆಯಲಿದೆ.

ಅರ್ಜಿ ಹಾಕುವ ಮೊದಲು ನಿಮ್ಹಾನ್ಸ್ ಖಾಲಿ ಹುದ್ದೆಗಳ ಸಂಬಂಧಪಟ್ಟ ಮಾಹಿತಿ, ವೇತನ, ವಯೋಮಿತಿ, ಶೈಕ್ಷಣಿಕ ಅರ್ಹತೆ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಬಹುದು.
ಹುದ್ದೆಗಳ ವಿವರ
ಖಾಲಿ ಹುದ್ದೆ- 06
ಹುದ್ದೆ ಹೆಸರು- ಕ್ಲಿನಿಕಲ್ ಸೈಕಾಲಜಿಸ್ಟ್
ಮಾಸಿಕ ವೇತನ - 35,400-1,12,400
ಉದ್ಯೋಗ ಸ್ಥಳ- ಬೆಂಗಳೂರು
ವಯೋಮಿತಿ- 35 ವರ್ಷ
ವಿದ್ಯಾರ್ಹತೆ ಏನು?
ನಿಮ್ಹಾನ್ಸ್ ಆರು ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ (MA), M.Sc ಮನೋವಿಜ್ಞಾನ, M.Phil ಮಾನಸಿಕ ಆರೋಗ್ಯದಲ್ಲಿ ಪದವಿ ಪಡೆವರು ಅರ್ಜಿ ಸಲ್ಲಿಕೆಗೆ ಅರ್ಹರು.

ಅರ್ಜಿ ಶುಲ್ಕ- ವಿಧಾನ
ಅರ್ಜಿ ಸಲ್ಲಿಸಲು ಇಚ್ಛಿಸುವ PWBD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 295 ರೂಪಾಯಿ, UR/OBC ಮತ್ತು EWS ಅಭ್ಯರ್ಥಿಗಳಿಗೆ 590 ರೂಪಾಯಿ ನಿಗದಿಪಡಿಸಲಾಗಿದೆ.
ಇನ್ನು ಅಭ್ಯರ್ಥಿಗಳು ಅರ್ಜಿಯನ್ನು ಜೂನ್ 30ರೊಳಗೆ ರಿಜಿಸ್ಟ್ರಾರ್, ನಿಮ್ಹಾನ್ಸ್, ಪಿಬಿ ನಂ.2900, ಹೊಸೂರು ರಸ್ತೆ, ಬೆಂಗಳೂರು-560029 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://nimhans.ac.in/ ಗೆ ಭೇಟಿ ನೀಡಿ ಎಂದು ಸಂಸ್ಥೆ ತಿಳಿಸಿದೆ.












Click it and Unblock the Notifications