NIMHANS Recruitment 2023: ಅರ್ಹರು ಅರ್ಜಿ ಸಲ್ಲಿಸಿ ಬೆಂಗಳೂರಲ್ಲೇ ₹1 ಲಕ್ಷ ಸಂಬಳದ ಉದ್ಯೋಗ ಪಡೆಯಿರಿ

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ 01 ಸೀನಿಯರ್ ರೆಸಿಡೆಂಟ್(Senior Resident)​ ಹುದ್ದೆ ಖಾಲಿ ಇದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 18ರೊಳಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿ ತಿಳಿಯಿರಿ.

ಬೆಂಗಳೂರು, ಮಾರ್ಚ್ 01: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ (NIMHANS)ಯು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ ಮಾಡಿದೆ. ಆಸಕ್ತರು ಅರ್ಜಿ ಸಲ್ಲಿಸಿ ಬೆಂಗಳೂರಿನಲ್ಲಿ ಒಂದು ಲಕ್ಷ ರೂಪಾಯಿ ಸಂಬಳದ ಉದ್ಯೋಗ ಪಡೆಯಬಹುದು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ 01 ಸೀನಿಯರ್ ರೆಸಿಡೆಂಟ್(Senior Resident)​ ಹುದ್ದೆ ಖಾಲಿ ಇದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 18ರೊಳಗೆ ಅರ್ಜಿಯನ್ನು ಆನ್​ಲೈನ್ ಮೂಲಕ ಸಲ್ಲಿಸಬೇಕು. ಬೆಂಗಳೂರಿಲ್ಲೇ ಪೋಸ್ಟಿಂಗ್ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

NIMHANS Recruitment 2023: NIMHANS invited for Senior Resident, Apply before march 18th

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಹುದ್ದೆಯ ಪೂರ್ಣ ಮಾಹಿತಿ, ಅರ್ಹತೆ, ವಯೋಮಿತಿ, ಶುಲ್ಕ ಸೇರಿದಂತೆ ಮುಂತಾದ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಖಾಲಿ ಹುದ್ದೆ ವಿವರ

ಸಂಸ್ಥೆ ಹೆಸರು- ನಿಮ್ಹಾನ್ಸ್

ಹುದ್ದೆ ಹೆಸರು- ಸೀನಿಯರ್ ರೆಸಿಡೆಂಟ್

ಖಾಲಿ ಹುದ್ದೆ - 1

ಉದ್ಯೋಗದ ಸ್ಥಳ ಬೆಂಗಳೂರು

ಅರ್ಜಿ ಸಲ್ಲಿಕೆ ಕಡೆ ದಿನ- ಮಾರ್ಚ್​ 18

NIMHANS Recruitment 2023: NIMHANS invited for Senior Resident, Apply before march 18th

ವಯಸ್ಸು

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಹತೆ ಏನಿದೆ

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಎಂಡಿ, ಡಿಎನ್​ಬಿಯಲ್ಲಿ ಅಭ್ಯರ್ಥಿ ಉತ್ತೀಣರಾಗಿರಬೇಕು.

ವೇತನ- ಆಯ್ಕೆ ವಿಧಾನ?

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ತಿಳಿಸಿರುವಂತೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂಪಾಯಿ 1,05,000 ವೇತನ ನೀಡಲಾಗುವುದು. ಇದಕ್ಕೂ ಮೊದಲು ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಜೊತೆಗೆ ಸಂದರ್ಶನ ಮೂಲಕ ಖಾಲಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.

ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ [email protected] ಗೆ ಕಳುಹಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+