NHMK Recruitment 2023: ಬೆಂಗಳೂರಲ್ಲೇ ಮಾಸಿಕ 50 ಸಾವಿರ ರೂ.ವೇತನದ ಸರ್ಕಾರಿ ಉದ್ಯೋಗ, ಕೂಡಲೇ ಅರ್ಜಿ ಹಾಕಿ
ಬೆಂಗಳೂರು, ಮಾರ್ಚ್ 29: ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕವು (NHMK) ತಾಯಿ ಆರೋಗ್ಯ ಸಮಾಲೋಚಕರ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಸರ್ಕಾರಿ ಉದ್ಯೋಗ ಸೇರಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಈ ತಾಯಿ ಆರೋಗ್ಯ ಸಮಾಲೋಚಕ ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಹಾಕಬೇಕು. ಮೇ 5ರಂದು ಸಂದರ್ಶನಕ್ಕೆ ಹಾಜರಾಗುವ ಮೂಲಕ ಆಯ್ಕೆಯಾಗುವ ಅವಕಾಶ ನಿಮಗಿದೆ. ಹುದ್ದೆಗಳಿಗೆ ಮಾಹಿತಿ, ಸಂದರ್ಶನದ ವಿವರ ಸೇರಿದಂತೆ ಮುಂತಾದ ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ (NHMK) ದಲ್ಲಿ ಒಂದು ಪೋಸ್ಟ್ ಖಾಲಿ ಇದೆ. ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಲ್ಲೇ ಪೋಸ್ಟಿಂಗ್ ನೀಡಲಾಗುವುದು. ಮಾಸಿಕವಾಗಿ ಈ ನೌಕರರನಿಗೆ 50000-80000 ರೂಪಾಯಿವರೆಗೆ ವೇತನ ನಿಗದಿಪಡಿಸಲಾಗಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇನ್ನೂ ಅಭ್ಯರ್ಥಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು? ಎಂದು ನೋಡುವುದಾದರೆ, ಅರ್ಜಿ ಸಲ್ಲಿಸುವವರು MBBS , DGO, MD, MPH, BDS ಮುಗಿಸಿ, ಈ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವುದು ಕಡ್ಡಾಯ ಮಾಡಲಾಗಿದೆ. ಈ ಅರ್ಹತೆ ಹೊಂದಿದ ಗರಿಷ್ಠ 65 ವರ್ಷ ವಯಸ್ಸಿನೊಳಗಿನವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಸಂದರ್ಶನ ನಡೆಯುವ ಸ್ಥಳ
ಮುಂದಿನ ತಿಂಗಳ ಏಪ್ರಿಲ್ 5ರಂದು ಮುಖ್ಯ ಆಡಳಿತಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಆರೋಗ್ಯ ಮಿಷನ್, 1 ನೇ ಮಹಡಿ, ಪಶ್ಚಿಮ ಭಾಗ, ಆರೋಗ್ಯ ಸೌಧ, ಮಾಗಡಿ ರಸ್ತೆ, 1ನೇ ಅಡ್ಡರಸ್ತೆ, ಬೆಂಗಳೂರು- 560023 ಇಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯು ನೋಡುವುದಾರೆ, ಮೊದಲು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಲಿಖಿತ ಫರಿಖ್ಷೆ ನಡೆಯಲಿದೆ. ನಂತರ ಸಂದರ್ಶನ ನಡೆಯಲಿದ್ದು, ಅಂದು ಅಗತ್ಯ ದಾಖಲೆಗಳ ಸಹಿತ ಅಭ್ಯರ್ಥಿಗಳು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಹುದ್ದೆ, ಅರ್ಜಿ ಸಲ್ಲಿಕೆ, ಅಧಿಸೂಚನೆ ಸೇರಿದಂತೆ ಇನ್ನಿತರ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಆರೋಗ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ https://nhm.karnataka.gov.in/ ಗೆ ಭೇಟಿ ನೀಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications