NABARD recruitment; 150 ಹುದ್ದೆಗಳಿಗೆ ಅರ್ಜಿ ಹಾಕಿ
ಬೆಂಗಳೂರು, ಸೆಪ್ಟೆಂಬರ್ 04; ನಬಾರ್ಡ್ ಅಸಿಸ್ಟೆಂಬರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಸೆಪ್ಟೆಂಬರ್ 23 ಕೊನೆಯ ದಿನವಾಗಿದೆ.
ನಬಾರ್ಡ್ (ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್) 150 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಪ್ರತಿ ತಿಂಗಳಿಗೆ 44,500-89,150 ರೂ. ವೇತನ ನಿಗದಿ ಮಾಡಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್ ಜನರಲ್ 77, ಕಂಪ್ಯೂಟರ್/ ಇನ್‌ಫರ್‌ಮೇಶನ್ ಟೆಕ್ನಾಲಜಿ 40, ಫೈನಾನ್ಸ್ 15, ಕಂಪನಿ ಸೆಕರೆಟ್ರಿ 3, ಸಿವಿಲ್ ಇಂಜಿನಿಯರಿಂಗ್ 3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ 3, ಜಿಯೋ ಇನ್‌ಪೋಮ್ಯಾಟಿಕ್ಸ್ 2, ಫಾರೆಸ್ಟರಿ 2, ಫುಡ್ ಪ್ರೊಸೆಸಿಂಗ್ 2, ಸ್ಟಾಟಿಟಿಕ್ಸ್ 2, ಮಾಸ್ ಕಮ್ಯುನಿಕೇಶನ್/ ಮೀಡಿಯಾ ಸ್ಪೆಷಲಿಸ್ಟ್ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ವಯೋಮಿತಿಯ ವಿವರಗಳು; ನಬಾರ್ಡ್ ನೇಮಕಾತಿ ನಿಯಮಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗೆ ಕನಿಷ್ಠ ವಯೋಮಿತಿ 21 ವರ್ಷಗಳು. ಗರಿಷ್ಠ ವಯೋಮಿತಿ 30 ವರ್ಷಗಳು (1 ಸೆಪ್ಟೆಂಬರ್ 2023ಕ್ಕೆ ಅನ್ವಯವಾಗುವಂತೆ).
ಒಬಿಸಿ ಅಭ್ಯರ್ಥಿಗಳಿಗೆ 3, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5, ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳಿಗೆ 10, ಅಂಗವಿಕಲ (ಒಬಿಸಿ) ಅಭ್ಯರ್ಥಿಗಳಿಗೆ 13 ಮತ್ತು ಅಂಗವಿಲ (ಎಸ್‌ಸಿ & ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ನಬಾರ್ಡ್‌ನ ಸ್ಟಾಫ್ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಎಸ್‌ಸಿ/ ಎಸ್‌ಟಿ/ ಅಂಗವಿಕಲ ಅಭ್ಯರ್ಥಿಗಳಿಗೆ 150 ರೂ. ಶುಲ್ಕ, ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 800 ರೂ. ಶುಲ್ಕವನ್ನು ಪಾವತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಅರ್ಜಿ ಶುಲ್ಕ ಪಾವತಿ ಮಾಡಲು 23 ಸೆಪ್ಟೆಂಬರ್ ಕೊನೆಯ ದಿನವಾಗಿದೆ.
ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಕ್ಟೋಬರ್ 15ರ ಬಳಿಕ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಬಾರ್ಡ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. nabard.org












Click it and Unblock the Notifications