MSME: ಕರ್ನಾಟಕದಲ್ಲಿ ಇನ್ನೈದು ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ

ಬೆಂಗಳೂರು, ಮೇ 31: ಕರ್ನಾಟಕ ಸರ್ಕಾರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬೆಂಬಲಾರ್ಥವಾಗಿ ಮಹತ್ವ ಉಪಕ್ರಮ ಆರಂಭಿಸಿದೆ. 'ಎಸ್ಎಂಇ ಕನೆಕ್ಟ್' ಹಾಗೂ 'ವೆಂಚುರೈಸ್' ತರಹದ ರಚನಾತ್ಮಕ ಉಪಕ್ರಮ ಮೂಲಕ MSME ತಯಾರಿಕೆ ವಲಯದಲ್ಲಿ ಶೇಕಡಾ 12ರಷ್ಟು ಪ್ರಗತಿ ಸಾಧಿಸಲಾಗಿದೆ. ಇದೇ ವಲಯದಿಂದ ರಾಜ್ಯದಲ್ಲಿ 2029ರ ವೇಳೆಗೆ ಬರೋಬ್ಬರಿ 20 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ.

ಕಾಸಿಯಾ, ಎಫ್.ಕೆ.ಸಿ.ಸಿ.ಐ ಮತ್ತು ಪೀಣ್ಯ ಕೈಗಾರಿಕೆಗಳ ಒಕ್ಕೂಟ ದಿಂದ ನಡೆದ 'ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಾವೇಶ-2025' ಈ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಮಹತ್ವದ ಮಾಹಿತಿ ನೀಡಿದರು. ರಾಜ್ಯದಲ್ಲಿ 2 ಮತ್ತು 3 ನೇ ಹಂತದ ನಗರಗಳಲ್ಲಿ ಎಂಎಸ್‌ಎಂಸಿ ಉದ್ಯಮಗಳು ನೆಲೆಯೂರುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದರು.

MSME 12 Percent Growth Karnataka Target is to create 20 lakh jobs by 2029

ಕರ್ನಾಟಕದಲ್ಲಿ 38 ಲಕ್ಷ MSME (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ) ಉದ್ಯಮಗಳಿವೆ. ಇವು ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜತೆಗೆ ಸಾವಿರಾರು ಕೋಟಿ ವಹಿವಾಟು ನಡೆಸುತ್ತಿವೆ. ಭಾರತದ ಜಿಡಿಪಿ ಬೆಳವಣಿಗೆಗೆ ಎಂಎಸ್ಎಂಇ ವಲಯವು ಶೇಕಡ 30ರಷ್ಟು ಕೊಡುಗೆ ನೀಡುತ್ತಿವೆ. ಒಟ್ಟು 15 ಕೋಟಿ ಜನರಿಗೆ ಬದುಕು ನೀಡಿವೆ. ಅದರಲ್ಲೂ ಮಹಿಳೆಯರು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಗಳಿಂದ ಬಂದ ಉದ್ಯಮಿಗಳ ಪಾತ್ರ ಇಲ್ಲಿ ಪ್ರಮುಖವಾಗಿದೆ ಎಂದು ತಿಳಿಸಿದರು.

MSME ಉದ್ಯಮಿಗಳಲ್ಲಿ ಸಾಂಪ್ರದಾಯಿಕ ಉತ್ಪಾದನೆಯಿಂದ ಈಗಿನ ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿದ ಮಾಡುತ್ತಿರುವ ಉತ್ಪನ್ನಗಳವರೆಗೆ ತಯಾರಿಕೆಯ ವ್ಯವಸ್ಥೆಗಳು ಇವೆ. ಗುಂಡುಸೂಜಿಯಿಂದ ಹಿಡಿದು ವಿಮಾನ ಬಿಡಿ ಭಾಗ ತಯಾರಿಕೆ ವರೆಗೆ ಎಲ್ಲವು ಆಗುತ್ತಿದೆ. ರಾಜ್ಯದಲ್ಲಿ ನುರಿತ ಎಂಜಿನಿಯರಿಂಗ್ ಮತ್ತು ತಯಾರಿಕೆ ವಲಯ ಎರಡೂ ಆಧಾರಸ್ತಂಭವಾಗಿದೆ. ಇದರಿಂದ ರಫ್ತು, ವಹೀವಾಟು, ಉದ್ಯೋಗ ಸೃಷ್ಟಿ ಆಗುತ್ತಿದೆ. ಕರ್ನಾಟಕಕ್ಕೆ ಜಾಗತಿಕವಾಗಿರೂ ಹೆಸರು ಬರುತ್ತಿದೆ ಎಂದರು.

ಕರ್ನಾಟಕದಲ್ಲಿ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾತಿ ಮಾಡಿದೆ. ರಾಜ್ಯದ ಹಿಂದುಳಿದಿರುವ ಪ್ರದೇಶಗಳಲ್ಲಿ ಉದ್ದಿಮೆಗಳನ್ನು ಬೆಳೆಸಲು ಈ ನೀತಿಯಡಿ ಹಲವು ಸೌಲಭ್ಯ ಕಲ್ಪಿಸಲಾಗುತ್ತದೆ. ಎಸ್ಎಂಇ ಕನೆಕ್ಟ್ ಅಡಿಯಲ್ಲಿ 1,800 ಉದ್ದಿಮೆಗಳಿಗೆ ನೆರವು ಒದಗಿಸಲಾಗುತ್ತಿದೆ. ಇದರಲ್ಲಿ 60 ಉದ್ದಿಮೆಗಳು ಈಗಾಗಲೇ ಆಧುನಿಕ ತಂತ್ರಜ್ಞಾನಕ್ಕೆ ಅಪ್ಡೇಟ್ ಆಗಿವೆ. ನವೋದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಮಾರ್ಗದರ್ಶನ ಮತ್ತು ಆರ್ಥಿಕ ನಿಧಿಯನ್ನು ಕೊಡಲಾಗುತ್ತಿದೆ.

ಕರ್ನಾಟಕವು 2032ರ ಹೊತ್ತಿಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಿ ಬೆಳೆಯುವ ಗುರಿ ಇಟ್ಟುಕೊಂಡಿದೆ. ಈ ಗುರಿ ಸಾಧನೆಗೆ ಎಂಎಸ್ಎಂಇ ವಲಯ ಶಕ್ತವಾಗಬೇಕು. ಈ ವಲಯಕ್ಕೆ ಬೇಕಡಾ ಸಾಲ ಸೌಲಭ್ಯ, ಕೌಶಲ್ಯಪೂರ್ಣ ಉದ್ಯೋಗಿಗಳು ಮತ್ತು ಪರೀಕ್ಷಾ ವ್ಯವಸ್ಥೆಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+