ಎಂಎಂಟಿಸಿಯಲ್ಲಿ 26 ಹುದ್ದೆಗಳಿವೆ ಕೂಡಲೇ ಅರ್ಜಿ ಹಾಕಿ!
ಬೆಂಗಳೂರು, ಫೆಬ್ರವರಿ 07: ಸರ್ಕಾರಿ ಸ್ವಾಮ್ಯದ ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಂಎಂಟಿಸಿ)ದ 2018-19ರ ಅವಧಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. 26ಕ್ಕೂ ಅಧಿಕ ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಂಎಂಟಿಸಿ)
ಒಟ್ಟು ಹುದ್ದೆಗಳು: 26
ಹುದ್ದೆ ಹೆಸರು: ಡೆಪ್ಯುಟಿ ಮ್ಯಾನೇಜರ್
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20 ಫೆಬ್ರವರಿ 2019

ವಿದ್ಯಾರ್ಹತೆ:
ಡೆಪ್ಯುಟಿ ಮ್ಯಾನೇಜರ್ (ಮಾರ್ಕೆಟಿಂಗ್): ಎಕಾನಾಮಿಕ್ಸ್ / ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಬಿಎ, ವಾಣಿಜ್ಯ, ವಿಜ್ಞಾನ ವಿಷಯದಲ್ಲಿ ಪದವಿ.
ಅಥವಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್/ ಇಂಜಿನಿಯರಿಂಗ್ ಅಥವಾ 2 ವರ್ಷಗಳ ಪೂರ್ಣಾವಧಿ ಪಿಜಿ ಡಿಗ್ರಿ/ ಡಿಪ್ಲೋಮಾ/ ಎಂಬಿಎ/ ಎಂಎಂಎಸ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್/ ಮ್ಯಾನೇಜ್ಮೆಂಟ್/ ಮಾರ್ಕೆಂಟಿಂಗ್/
ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟ್ಸ್) : ಪದವಿ ಅಥವಾ ಚಾರ್ಟೆಡ್ ಅಕೌಂಟಂಟ್(ಸಿಎ) ಅಥವಾ ಸಿಡಬ್ಲ್ಯೂಎ(ಐಸಿಡಬ್ಲೂಎ)
ಡೆಪ್ಯುಟಿ ಮ್ಯಾನೇಜರ್ (ಕಾನೂನು) : ಕಾನೂನು ವಿಷಯದಲ್ಲಿ ಪದವಿ
ಡೆಪ್ಯುಟಿ ಮ್ಯಾನೇಜರ್ (ರಾಜ್ಯಭಾಷಾ): ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲೀಷ್ ಪ್ರಮುಖ ಭಾಷೆಯಾಗಿ ಪದವಿಯಲ್ಲಿ ಓದಿರಬೇಕು.
ವಯೋಮಿತಿ: 30 ವರ್ಷ
ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ಹಾಗು ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ವಿನಾಯಿತಿ ಇದೆ.
ಸಂಬಳ ವಿವರ: 40,000 ರಿಂದ 14,0000 ಪ್ರತಿ ತಿಂಗಳು
ಅರ್ಜಿ ಶುಲ್ಕ: ಸಾಮಾನ್ಯ/ ಒಬಿಸಿ : 500 ರು, ಎಸ್ ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಗ್ರೂಪ್ ಚರ್ಚೆ ಹಾಗು ವೈಯಕ್ತಿಕ ಸಂದರ್ಶನ
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 20 ಫೆಬ್ರವರಿ 2019
* ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 22 ಫೆಬ್ರವರಿ 2019
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications