ಕೊಪ್ಪಳದಲ್ಲಿ ಜೂನ್ 20ರಂದು ಮಿನಿ ಉದ್ಯೋಗ ಮೇಳ

ಕೊಪ್ಪಳ, ಜೂನ್ 14 : ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಜೂನ್ 20ರಂದು ಮಿನಿ ಉದ್ಯೋಗ ಮೇಳವನ್ನು ಆಯೋಜಿಸಿದೆ. ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.

ಮಿನಿ ಉದ್ಯೋಗ ಮೇಳ ಜೂನ್ 20ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30ರ ತನಕ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯಲಿದೆ. ಆಸಕ್ತ ಯುವಕ/ಯುವತಿಯರು ಮೇಳದ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ಇಂಡಿಯನ್ ಮನಿ ಪ್ರೈ.ಲಿ. ಹುಬ್ಬಳ್ಳಿ, ರೇಣುಕಾ ಮ್ಯಾನೇಜಮೆಂಟ್ ಸರ್ವಿಸ್ ಧಾರವಾಡ, ಸ್ಪೈಸ್ ಸೆಕ್ಯೂರಿಟಿ ಸರ್ವಿಸ್ ಪ್ರೈ.ಲಿ ಕಲಬುರಗಿ, ಪ್ರಸನ್ನ ಟೆಕ್ನಾಲಜಿಸ್ ಪ್ರೈ.ಲಿ ಮಂಗಳೂರು, ಎಲ್ ಅಂಡ್ ಟಿ ಟಿವಿಎಸ್ ಟ್ರೈನಿಂಗ್ ಪ್ರೈ.ಲಿ. ಬೆಂಗಳೂರು, ಅಗ್ರಿಪ್ಲೆಕ್ಸ್ ಇಂಡಿಯಾ ಪ್ರೈ.ಲಿ. ಬೆಂಗಳೂರು, ಎಜು ಬ್ರಿಡ್ಜ್‌ ಪ್ರೈ.ಲಿ ಶಿವಮೊಗ್ಗ ಮುಂತಾದ ಕಂಪನಿಗಳು ಪಾಲ್ಗೊಳ್ಳಲಿವೆ.

Mini Job fair in Koppal on June 20, 2018

ನೇರ ಸಂದರ್ಶನದ ಮೂಲಕ ಕಂಪನಿಗಳು ನೇಮಕಾತಿ ಮಾಡಿಕೊಳ್ಳಲಿವೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.

1ನೇ ತರಗತಿಯಿಂದ ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಯಾವುದೇ ಪದವಿ, ಐಟಿಐ, ಡಿಪ್ಲೊಮಾ, ಎಲ್ಲಾ ಟ್ರೇಡಗಳು, ಬಿ.ಇ., ಎಂ.ಬಿ.ಎ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಈ ಮೇಳದಲ್ಲಿ ಭಾಗವಹಿಸುವವರಿಗೆ 18 ರಿಂದ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಮೇಳದಲ್ಲಿ ಪಾಲ್ಗೊಳ್ಳುವವರು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್‌ನ ಪ್ರತಿ, ರೆಸ್ಯೂಮ್ ಹಾಗೂ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಹಾಜರಾಗಬೇಕು.

ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+