KSRTC Job Recruitment: ಅಭ್ಯರ್ಥಿಗಳು ಗಮನಿಸಿ: ಮಾರ್ಚ್ 6ಕ್ಕೆ ದೇಹದಾರ್ಢ್ಯ ಪರೀಕ್ಷೆ: ನೇಮಕಾತಿ ವಿವರ

ಬೆಂಗಳೂರು, ಫೆಬ್ರವರಿ 29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವರ್ಷಗಳ ಹಿಂದೆ ಕರೆಯಲಾಗಿದ್ದ 2000 ಹುದ್ದೆಗಳಿಗೆ ನೇಮಕಾತಿಗೆ ಕ್ರಮ ವಹಿಸಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇದೇ ಮಾರ್ಚ್ 6ರಂದು ಪ್ರಮುಖ ಪರೀಕ್ಷೆ ಆಯೋಜಿಸಲಾಗಿದೆ.

ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 2020ರಲ್ಲಿ ಚಾಲಕ ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ನೇರ ನೇಮಕಾತಿ ಹೊರಡಿಸಲಾಗಿದ್ದ ಹುದ್ದೆ ಸಂಖ್ಯೆಯ ಸರ್ಕಾರದ ಸೂಚನೆಯಂತೆ 2000ಕ್ಕೆ ಸಿಮೀತ ಮಾಡಿ ನೇಮಕಾತಿಗೆ ನಿರ್ಧರಿಸಲಾಗಿದೆ.

KSRTC Job Recruitment 2024: Candidates Physical Test-Document Verification on March 6th, Details

ಕರೆಪತ್ರ ಡೌನ್‌ಲೋಡ್ ದಿನಾಂಕದ ವಿವರ

ಇದರ ಭಾಗವಾಗಿಯೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮುಂದಿನ ಮಾರ್ಚ್ 6ರಂದು ದೇಹದಾರ್ಢ್ಯ ಪರೀಕ್ಷೆ ಹಾಗೂ ಮೂಲದಾಖಲಾತಿ ಪರಿಶೀಲನೆ ನಡೆಯಲಿದೆ. ಹಾಜರಾಗಲು ಬಯಸುವ ಅರ್ಹ ಅಭ್ಯರ್ಥಿಗಳು ಮಾರ್ಚ್ 3ರಂದು ನಿಗಮದ ಅಧಿಕೃತ ಜಾಲತಾಣದಲ್ಲಿ (https://ksrtcjobs.karnataka.gov.in/) ಕರಪತ್ರ ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬೇಕು. ಸೂಕ್ತ ಮಾಹಿತಿಯನ್ನು ಓದಿಕೊಳ್ಳಬೇಕಿದೆ.

ಸೂಕ್ತ ದಾಖಲೆಗಳ ಸಮೇತ ಹಾಜರಾಗಿ

ನಿಗದಿತ ಮಾರ್ಚ್ 6ರಂದು ದೇಹದಾರ್ಢ್ಯ ಪರೀಕ್ಷೆ ಸೂಕ್ತ ದಾಖಲೆಗಳ ಸಮೇತ ಹಾಜರಾಗಬೇಕು ಎಂದು ನಿಗಮ ತಿಳಿಸಿದೆ. ಇನ್ನೂ ಈ ಹುದ್ದೆಗಳ ಭರ್ತಿಗಾಗಿ ಸಾರಿಗೆ ಇಲಾಖೆಯು 2020ರ ಫೆಬ್ರವರಿ 14ರಂದು ನೇರ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಅನ್ವಯ ಹಾಲಿ ಇದ್ದ ಮೀಸಲಾತಿ ನಿಯಮಗಳ ಅನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿ ನಿಗಮದ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ.

KSRTC Job Recruitment 2024: Candidates Physical Test-Document Verification on March 6th, Details

ಅರ್ಹರಾಗುವ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆ ನಡೆಸುವ ಕುರಿತು ಶೀಘ್ರವೇ ಪ್ರತ್ಯೇಕ ದಿನಾಂಕ, ಸ್ಥಳದ ಮಾಹಿತಿಯನ್ನು ಪ್ರಕಟಿಸಲಾಗುವುದು ಎಂದು ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಸುಮಾರು ನಾಲ್ಕು ವರ್ಷಗಳ ಹಿಂದೆ ಈ ಹುದ್ದೆಗಳಿಗೆ ರಾಜ್ಯ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಅದರ ನೇರ ನೇಮಕಾತಿಗೆ ಇದೀಗ ಚಾಲನೆ ನೀಡಿರುವ ನಿಗಮವು ಹಂತ ಹಂತ ಪ್ರಕ್ರಿಯೆ ಮೂಲಕ ಅರ್ಹರನ್ನು ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಿಸಿಕೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ.

ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ಏನಿದೆ?

ಸದ್ಯ ಮಾರ್ಚ್ 6ರಂದು ಮೂಲ ದಾಖಲಾತಿ ಮತ್ತು ದೇಹದಾರ್ಢ್ಯ ಪರೀಕ್ಷೆ ಮಾತ್ರ ನಡೆಸಲಾಗುವುದು. ಇದರ ಹೊರತು ಈ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪ ಇರುವುದಿಲ್ಲ. ಮೇಲಿನ ಎರಡು ಪರೀಕ್ಷೆ ಮಾತ್ರ ನಡೆಯಲಿದ್ದು, ಚಾಲನಾ ವೃತ್ತಿ ಪರೀಕ್ಷೆ ಬಗ್ಗೆ ನಿಗಮವೇ ಅಧಿಕೃವಾಗಿ ತಿಳಿಸಲಿದೆ. ಗಣಕೀಕೃತ ಚಾಲನಾ ಪರೀಕ್ಷೆಯಲ್ಲಿನ ಗಳಿಸಿ ಅಂಕಗಳು (ಮೆರಿಟ್) ಆಧಾರದಲ್ಲಿ ನೇಮಕಾತಿ ನಡೆಯಲಿದೆ ಎಂದು ನಿಗಮವು ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+