KSMHA ನೇಮಕಾತಿ 2021: 15 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜನವರಿ 21: ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ(KSMHA) 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಪ್ರಾಧಿಕಾರದ ಸದಸ್ಯರಾಗಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜನವರಿ 30ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Karnataka State Mental Health Authority (KSMHA Karnataka)
ಹುದ್ದೆ ಹೆಸರು: ಚೇರ್ಮನ್, ಸದಸ್ಯಾ
ಒಟ್ಟು ಹುದ್ದೆ: 15
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 30, 2021.
ವಿದ್ಯಾರ್ಹತೆ: ಅಧಿಸೂಚನೆಯನ್ನು ನೋಡತಕ್ಕದ್ದು.
ವಯೋಮಿತಿ: KSMHA ಕರ್ನಾಟಕ ನೇಮಕಾತಿ ನಿಯಮಾವಳಿಗೆ ತಕ್ಕಂತೆ ಮಿತಿ.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.

ಸಂಬಳ ನಿರೀಕ್ಷೆ:
ಚೇರ್ಮನ್: 65000/ ಪ್ರತಿ ತಿಂಗಳಿಗೆ
ಸದಸ್ಯರು: 2000 ರು ಪ್ರತಿ ಸಭೆಗೆ
ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸೂಕ್ತ ನಮೂನೆಯನ್ನು ಆಯ್ಕೆ ಮಾಡಿಕೊಂಡು ತುಂಬತಕ್ಕದ್ದು, ಅಗತ್ಯ ದಾಖಲೆಗಳ ಜೊತೆಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು.
ವಿಳಾಸ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ
5ನೇ ಮಹಡಿ, ಆರೋಗ್ಯ ಸೌಧ, 1ನೇ ಅಡ್ಡರಸ್ತೆ,
ಮಾಗಡಿ ರಸ್ತೆ,ಬೆಂಗಳೂರು
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 16/01/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30/01/2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications