• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆ-ರೈಡ್ ಸಂಸ್ಥೆಯುಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

|

ಬೆಂಗಳೂರು, ಜುಲೈ 21 : ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ನಿಯಮಿತಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 15/8/2020 ಕೊನೆಯ ದಿನವಾಗಿದೆ.

   ದಕ್ಷಿಣ ಕನ್ನಡದಲ್ಲಿ ಮತ್ತೆ ಲಾಕ್ ಡೌನ್ !?

   ಬೆಂಗಳೂರು ಉಪನಗರ ರೈಲು ಯೋಜನೆ ಹಾಗೂ ರೈಲ್ವೆ ದ್ವಿಪಥೀಕರಣ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾದ ಕೆ-ರೈಡ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

   ಈ ಹುದ್ದೆಗಳನ್ನು ನಿಯೋಜನೆ ಮೇಲೆ ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

   ಪ್ರಧಾನ ವ್ಯವಸ್ಥಾಪಕರು ಸಿವಿಲ್ 1, ಪ್ರಧಾನ ವ್ಯವಸ್ಥಾಪಕರು ಎಸ್&ಟಿ 1, ಹಿರಿಯ ಡಿಜಿಎಮ್ (ಸಿವಿಲ್ 2, ಎಲೆಕ್ಟ್ರಿಕಲ್ 1, ಎಸ್‌&ಟಿ 1, ಫೈನಾನ್ಸ್ 1) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

   ಹಿರಿಯ ಮ್ಯಾನೇಜರ್ (ಸಿವಿಲ್ 5, ಎಲೆಕ್ಟ್ರಿಕಲ್ 1, ಎಸ್‌&ಟಿ 2, ಫೈನಾನ್ಸ್ 1), ಸಹಾಯಕ ಮ್ಯಾನೇಜರ್ (ಸಿವಿಎಲ್ 8, ಎಲೆಕ್ಟ್ರಿಕಲ್ 3, ಎಸ್&ಟಿ 4, ಫೈನಾನ್ಸ್ 2) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

   ಕಾರ್ಯಕಾರಿ ಸಿವಿಲ್ 5, ಎಲೆಕ್ಟ್ರಿಕಲ್ 2, ಎಸ್‌&ಟಿ 2, ಐಟಿ 1, ಫೈನಾನ್ಸ್ 1, ಎಚ್‌. ಅರ್. 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿವರವಾದ ಅರ್ಹತಾ ಷರತ್ತು ಹಾಗೂ ಅರ್ಜಿಗಳಿಗಾಗಿ ವೆಬ್ ಸೈಟ್‌ ನೋಡಬಹುದು.

   English summary
   Rail Infrastructure Development Company (Karnataka) invited applications for various post. Candidates can submit applications till August 15, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X