KPTCL Result 2023-23 : ಕೆಪಿಟಿಸಿಎಲ್‌ ನೇರ ನೇಮಕಾತಿ ಫಲಿತಾಂಶ ಪ್ರಕಟ: ಮಾಹಿತಿ, ವಿವರ, ವೆಬ್‌ಲಿಂಕ್‌ಗಾಗಿ ಇಲ್ಲಿ ನೋಡಿ

ಬೆಂಗಳೂರು, ಜನವರಿ 04: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (KPTCL) ವಿವಿಧ ಹುದ್ದೆಗಳಿಗೆ ಅರ್ಹತೆ ಪಡೆಯಲು ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಜನವರಿ 3 ರಂದು ಪ್ರಕಟಗೊಂಡಿದೆ.

ಈ ಪರೀಕ್ಷೆಯು ಬೆಸ್ಕಾಂ, ಸೆಸ್ಕ್‌, ಹೆಸ್ಕಾಂ, ಮೆಸ್ಕಾಂ ಮತ್ತು ಜೆಸ್ಕಾಂಗಳ ಆಡಳಿತ ವ್ಯಾಪ್ತಿಯ ಕಚೇರಿಗಳಲ್ಲಿ ಖಾಲಿ ಇರುವ 1,492 ವಿವಿಧ ಹುದ್ದೆಗಳ ನೇಮಕಾತಿಗೆ ನಡೆದಿತ್ತು.

ಕೆಪಿಟಿಸಿಎಲ್‌ನ ಸಹಾಯಕ ಎಂಜನಿಯರ್‌, ಕಿರಿಯ ಎಂಜನಿಯರ್​ ಹಾಗೂ ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಹತೆ ಪಡೆಯಲು ನೇರ ನೇಮಕಾತಿ ಪರೀಕ್ಷೆ ಕಳೆದ ವರ್ಷ ನಡೆದಿತ್ತು.

ನೇರ ನೇಮಕಾತಿ ಪರೀಕ್ಷೆಯಲ್ಲಿ ಅರ್ಹತೆಗೆ ನಿಗದಿ ಪಡಿಸಿದ ಅಂಕಗಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜನವರಿ 3ರಂದು ಪ್ರಕಟಿಸಿದೆ.

ಕುತೂಹಲಕರ ವಿಚಾರವೆಂದರೆ, ಅರ್ಹತೆಗೆ ನಿಗದಿ ಪಡಿಸಿದ್ದ ಈ ಅಂಕಗಳನ್ನು ಗಳಿಸುವಲ್ಲಿ ಅಗತ್ಯವಿರುವ ಸಂಖ್ಯೆಯ ಅಭ್ಯರ್ಥಿಗಳು ವಿಫಲರಾಗಿದ್ದಾರೆ. ಕಿರಿಯ ಸಹಾಯಕ ಎಂಜಿನಿಯರ್‌ ಹುದ್ದೆ ಹೊರತುಪಡಿಸಿ, ಇನ್ನುಳಿದ ಹುದ್ದೆಗಳಿಗೆ ಅರ್ಹತೆ ಹೊಂದಿದವರ ಸಂಖ್ಯೆ ಕಡಿಮೆ ಇದೆ.

 505 ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಪರೀಕ್ಷೆ

505 ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಪರೀಕ್ಷೆ

505 ಸಹಾಯಕ ಎಂಜಿನಿಯರ್‌ (ವಿದ್ಯುತ್‌) ಹುದ್ದೆಗಳಿಗೆ ಅರ್ಹತೆ ಹೊಂದಲು ಪರೀಕ್ಷೆ ನಡೆಸಲಾಗಿತ್ತು. ಉಳಿಕೆ ವೃಂದಕ್ಕೆ 393, ಬ್ಯಾಕ್‌ಲಾಗ್‌ಗೆ 6 , ಕಲ್ಯಾಣ ಕರ್ನಾಟಕಕ್ಕೆ 106 ಸ್ಥಾನಗಳಿಗೆ ಪರೀಕ್ಷೆ ನಡೆಸಲಾಗಿತ್ತು. 23,979 ಅರ್ಜಿಗಳು ಅರ್ಹತೆಗೊಂಡಿದ್ದವು. ಆದರೆ, ನಿಗದಿ ಪಡಿಸಿದ್ದ ಕನಿಷ್ಟ 35ಕ್ಕಿಂತ ಹೆಚ್ಚು ಅಂಕ ಗಳಿಸುವಲ್ಲಿ ಕೇವಲ 501 ಮಂದಿ ಯಶಸ್ವಿಯಾಗಿದ್ದಾರೆ.

ಒಟ್ಟು 570 ಕಿರಿಯ ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಉಳಿಕೆ ವೃಂದದ 477, ಬ್ಯಾಕ್‌ಲಾಗ್‌ ಹುದ್ದೆಯ 11, ಕಲ್ಯಾಣ ಕರ್ನಾಟಕದ 82 ಸ್ಥಾನಗಳಿಗೆ ಪರೀಕ್ಷೆ ನಡೆಸಲಾಗಿತ್ತು. 22,920 ಅರ್ಜಿಗಳು ಅರ್ಹವಾಗಿದ್ದವು. ಈ ಪೈಕಿ 1,049 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದುಕೊಂಡಿದ್ದಾರೆ.

 28 ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದಗೆ ಪರೀಕ್ಷೆ

28 ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದಗೆ ಪರೀಕ್ಷೆ

ಒಟ್ಟು 28 ಸಹಾಯಕ ಎಂಜಿನಿಯರ್ (ಸಿವಿಲ್) ಸ್ಥಾನಗಳಿಗೆ ಪರೀಕ್ಷೆ ನಡೆದಿತ್ತು. ಉಳಿಕೆ ವೃಂದದ 21, ಕಲ್ಯಾಣ ಕರ್ನಾಟಕದ 7 ಸ್ಥಾನಗಳಿಗೆ ಪರೀಕ್ಷೆ ನಡೆಸಲಾಗಿತ್ತು. 24,316 ಅರ್ಜಿಗಳ ಪೈಕಿ 700 ಮಂದಿ ಮಾತ್ರ ಅರ್ಹತೆ ಹೊಂದಿಲು ಯಶಸ್ವಿಯಾಗಿದ್ದಾರೆ.

ಒಟ್ಟು 29 ಕಿರಿಯ ಎಂಜಿನಿಯರ್ (ಸಿವಿಲ್) ಸ್ಥಾನಗಳಿಗೆ ಅರ್ಹತಾ ಪರೀಕ್ಷೆ ನಡೆಸಲಾಗಿತ್ತು. ಉಳಿಕೆ ವೃಂದಕ್ಕೆ 21, ಕಲ್ಯಾಣ ಕರ್ನಾಟಕದ 8 ಹುದ್ದೆಗಳಿಗೆ ನಡೆದ ಅರ್ಹತಾ ಪರೀಕ್ಷೆಗೆ 15,140 ಅಭ್ಯರ್ಥಿಗಳು ಹಾಜರಾಗಿದ್ದರು. 3,010 ಅಭ್ಯರ್ಥಿಗಳು ಮಾತ್ರ ಕನಿಷ್ಠ ಅಂಕ ಗಳಿಸುವಲ್ಲಿ ಸಫಲರಾಗಿದ್ದಾರೆ.

 ಕಿರಿಯ ಸಹಾಯಕ ಹುದ್ದೆಗಳಿಗೆ 358 ಪರೀಕ್ಷೆ

ಕಿರಿಯ ಸಹಾಯಕ ಹುದ್ದೆಗಳಿಗೆ 358 ಪರೀಕ್ಷೆ

ಕಿರಿಯ ಸಹಾಯಕ ಹುದ್ದೆಗಳಿಗೆ ಅತಿ ಹೆಚ್ಚು ಅರ್ಜಿಗಳು ಸಲ್ಲಿಯಾಗಿದ್ದವು. 358 ಹುದ್ದೆಗಳಿಗೆ ಅರ್ಹತಾ ಪರೀಕ್ಷೆ ನಡೆದಿತ್ತು. 3,10,960 ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದರು. 61,174 ಅಭ್ಯರ್ಥಿಗಳು ಕನಿಷ್ಠ ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 5 ತಿಂಗಳ ಹಿಂದೆ ಈ ಪರೀಕ್ಷೆಗಳನ್ನು ನಡೆಸಿತ್ತು.

 ಈ ಕೆಳಗಿನ ಹುದ್ದೆಗಳಿಗೆ ತಾತ್ಕಾಲಿಕ ಅಂಕ ಪಟ್ಟಿ

ಈ ಕೆಳಗಿನ ಹುದ್ದೆಗಳಿಗೆ ತಾತ್ಕಾಲಿಕ ಅಂಕ ಪಟ್ಟಿ

ಸಹಾಯಕ ಅಭಿಯಂತರ - ಸಿವಿಲ್ (ಅರ್ಹ ಅಭ್ಯರ್ಥಿಗಳ ಪಟ್ಟಿ)
ಸಹಾಯಕ ಅಭಿಯಂತರ - ಎಲೆಕ್ಟ್ರಿಕಲ್ (ಅರ್ಹ ಅಭ್ಯರ್ಥಿಗಳ ಪಟ್ಟಿ)
ಕಿರಿಯ ಅಭಿಯಂತರ - ಸಿವಿಲ್ (ಅರ್ಹ ಅಭ್ಯರ್ಥಿಗಳ ಪಟ್ಟಿ)
ಕಿರಿಯ ಅಭಿಯಂತರ - ಎಲೆಕ್ಟ್ರಿಕಲ್ (ಅರ್ಹ ಅಭ್ಯರ್ಥಿಗಳ ಪಟ್ಟಿ)
ಕಿರಿಯ ಸಹಾಯಕ (ಅರ್ಹ ಅಭ್ಯರ್ಥಿಗಳ ಪಟ್ಟಿ)
ಸಹಾಯಕ ಅಭಿಯಂತರ - ಸಿವಿಲ್ (ಅರ್ಹರಾಗಿರದ ಅಭ್ಯರ್ಥಿಗಳ ಪಟ್ಟಿ)
ಸಹಾಯಕ ಅಭಿಯಂತರ - ಎಲೆಕ್ಟ್ರಿಕಲ್ (ಅರ್ಹರಾಗಿರದ ಅಭ್ಯರ್ಥಿಗಳ ಪಟ್ಟಿ)
ಕಿರಿಯ ಅಭಿಯಂತರ - ಸಿವಿಲ್ (ಅರ್ಹರಾಗಿರದ ಅಭ್ಯರ್ಥಿಗಳ ಪಟ್ಟಿ)
ಕಿರಿಯ ಅಭಿಯಂತರ - ಎಲೆಕ್ಟ್ರಿಕಲ್ (ಅರ್ಹರಾಗಿರದ ಅಭ್ಯರ್ಥಿಗಳ ಪಟ್ಟಿ)

ಅಂಕ ಪಟ್ಟಿ ನೋಡಲು ನೀಡಲಾಗಿರುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿ
https://cetonline.karnataka.gov.in/kea/kptcl2022

 ಇಂಧನ ಸಚಿವ ಸುನೀಲ್‌ ಕುಮಾರ್‌ ಟ್ವೀಟ್‌

ಇಂಧನ ಸಚಿವ ಸುನೀಲ್‌ ಕುಮಾರ್‌ ಟ್ವೀಟ್‌

'ಕೆ.ಪಿ.ಟಿ.ಸಿ.ಎಲ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಹಾರ್ದಿಕ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸುತ್ತೇನೆ. ಫಲಿತಾಂಶವನ್ನು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. https://cetonline.karnataka.gov.in/kea/kptcl2022' ಎಂದು ಸುನೀಲ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+