KPSC: ಭೂ ಸರ್ವೇಯರ್ ನೇಮಕಾತಿ 2025 ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ ಅಪ್ಡೇಟ್ಸ್..
ಬೆಂಗಳೂರು, ಏಪ್ರಿಲ್ 20: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುವ ಭೂ ಸರ್ವೇಯರ್ ನೇಮಕಾತಿಗೆ (Land Surveyor Recruitment- 2025) ಅರ್ಜಿ ಪ್ರಕ್ರಿಯೆ ಪೂರ್ಣಗೊಂಡು ನಾಲ್ಕು ತಿಂಗಳು ಕಳೆದಿವೆ. ಪರೀಕ್ಷೆ ದಿನಾಂಕ ಜೊತೆಗೆ ಪ್ರವೇಶ ಪತ್ರ (Admit Card) ಯಾವಾಗ ಬಿಡುಗಡೆ ಆಗುತ್ತದೆ ಎಂಬ ಕುತೂಹಲ ಅಭ್ಯರ್ಥಿಗಳಲ್ಲಿ ಹೆಚ್ಚಾಗಿದೆ. ಅಡ್ಮಿಟ್ ಕಾರ್ಡ್ ಅಪ್ಡೇಟ್ಸ್, ಡೌನ್‌ಲೋಡ್ ಹೇಗೆ? ಎಂಬ ಪೂರ್ಣ ವಿವರ ಇಲ್ಲಿದೆ.
ರಾಜ್ಯ ಸರ್ಕಾರ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 364 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು (KPSC) ಕಳೆದ ವರ್ಷಾಂತ್ಯಕ್ಕೆ ಅರ್ಜಿ ಆಹ್ವಾನಿಸಿತ್ತು. ಡಿಸೆಂಬರ್ ಎರಡನೇ ವಾರದಲ್ಲಿ ಅರ್ಜಿ ಸಲ್ಲಿಕೆ ಪೂರ್ಣಗೊಂಡಿತ್ತು. ಅದಾದ ಮೇಲೆ ಪರೀಕ್ಷೆ, ಅಡ್ಮಿಟ್ ಕಾರ್ಡ್ (KPSC Land Surveyor Admit Card-2025) ಬಗ್ಗೆ ಅಪ್ಡೇಟ್ ಸಿಕ್ಕಿರಲಿಲ್ಲ. ಸರ್ಕಾರಿ ನೌಕರಿ ಸೇರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿ ಅಪ್ಡೇಟ್ ತಿಳಿಯಲು, ಪ್ರವೇಶ ಪತ್ರ ಡೌನ್‌ಲೋಡ್, ಪರೀಕ್ಷಾ ಮಾಹಿತಿಗಾಗಿ ನೀವು https://kpsc.kar.nic.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಭೂ ಸರ್ವೇಯರ್ ನೇಮಕಾತಿ-2025 ಪ್ರವೇಶ ಪತ್ರದ ಬಿಡುಗಡೆಗೆ ಸಿದ್ಧತೆ ಆರಂಭಿಸಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಈ ಸಂಬಂಧ ಪ್ರವೇಶ ಪತ್ರ, ಪರೀಕ್ಷೆ ದಿನಾಂಕಗಳು ಅವರಿಗೆ ಅಗತ್ಯವಾಗಿರುತ್ತದೆ.
KPSC ಭೂ ಸರ್ವೇಯರ್ ನೇಮಕಾತಿ-2025 ಪ್ರವೇಶ ಪತ್ರವನ್ನು ಪರೀಕ್ಷೆ ನಡೆಯುವ 10-15 ದಿನಗಳ ಮೊದಲು ಬಿಡುಗಡೆ ಮಾಡಲಾಗುತ್ತದೆ. https://kpsc.kar.nic.in/ ವೆಬ್‌ಸೈಟ್‌ನಲ್ಲಿ ನೀವು ಡೌನ್‌ಲೋಡ್ ಮಾಡಬಹುದಾಗಿದೆ. ಅದನ್ನು ಹೇಗೆ ಡೌನ್‌ಲೋಡ್ ಮಾಡಬೇಕು? ವಿಧಾನಗಳೇನು? ಎಂಬ ಮಾಹಿತಿ ಇಲ್ಲಿದೆ.
KPSC ಭೂ ಸರ್ವೇಯರ್ ಪ್ರವೇಶ ಪತ್ರ ಡೌನ್‌ಲೋಡ್ ವಿಧಾನ
* ಅಭ್ಯರ್ಥಿಗಳು ಮೊದಲು KPSC ವೆಬ್‌ಸೈಟ್‌ಗೆ ಭೇಟಿ ಕೊಡಬೇಕು.
* ನಂತರ ಅಲ್ಲಿ ಕಾಣುವ ಭೂ ಸರ್ವೇಯರ್ 'ಪ್ರವೇಶ ಪತ್ರ'ದ ವಿಭಾಗ ಆಯ್ಕೆ ಮಾಡಿಕೊಳ್ಳಬೇಕು.
* ಕೇಳಲಾಗುವ ಅಗತ್ಯ ಮಾಹಿತಿ ನೀಡಿ.
* ನಿಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕದ ವಿವರ ಹಾಕಬೇಕು. ಅರ್ಜಿ ಸಲ್ಲಿಕೆ ವೇಳೆ ನೀವು ಭರ್ತಿ ಮಾಡಿದ ಅರ್ಜಿ ನಮೂನೆಯಲ್ಲಿ ಈ ಮಾಹಿತಿ ಲಭ್ಯವಿದೆ ಎಂದು ಪರಿಶೀಲಿಸಿ.
* ಬಳಿಕ ಅಗತ್ಯ ಮಾಹಿತಿ ನಮೂದಿಸಿದ ನಂತರ, ಸಬ್ಮಿಟ್ ಮಾಡಬೇಕು.
* ಪ್ರವೇಶ ಪತ್ರ ನಿಮ್ಮ ವೆಬ್‌ಸೈಟ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
* ಡೌನ್‌ಲೋಡ್ ಮಾಡುವ ಮುನ್ನ ಅಲ್ಲಿರುವ ವಿವಿರ, ಮಾಹಿತಿ ಪರಿಶೀಲಿಸಿಕೊಳ್ಳಬೇಕು.
* ಪರೀಕ್ಷೆಗಾಗಿ ಈ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಸುರಕ್ಷಿತವಾಗಿಟ್ಟುಕೊಳ್ಳಬೇಕು.
ಪರೀಕ್ಷೆ ಯಾವಾಗ?:ವಿಶೇಷ ಸೂಚನೆ
ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿದ ಪ್ರವೇಶ ಪತ್ರದಲ್ಲಿ ಏನದರೂ ಸಮಸ್ಯೆ, ಹೆಸರು, ಸಂಖ್ಯೆ ವಿಳಾಸದಲ್ಲಿ ಲೋಪಗಳು, ತಪ್ಪುಗಳು ಕಂಡು ಬಂದಲ್ಲಿ ಕೂಡಲೇ KPSC ಸಂಪರ್ಕಿಸಬೇಕು. ಅಧಿಕಾರಿಗಳ ಸಹಾಯ ಪಡೆಯಬೇಕು. ಇದೇ ವರ್ಷ 2025ರ ಮಧ್ಯಭಾಗದಲ್ಲಿ ಕೆಪಿಎಸ್‌ಸಿಯು ಭೂ ಸರ್ವೇಯರ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಿದೆ. ಈ ಸಂಬಂಧ ಶೀಘ್ರವೇ ವೇಳಾಪಟ್ಟಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಅಭ್ಯರ್ಥಿಗಳು ಆಗಾಗ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಬೇಕು.
ಭೂ ಸರ್ವೇಯರ್ ಪರೀಕ್ಷೆ ಎಂದರೇನು?
ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ನಡೆಸುವ ಭೂ ಸರ್ವೇಯರ್ ಇದೊಂದು ಸರ್ಕಾರಿ ಪ್ರಮುಖ ನೇಮಕಾತಿ ಪರೀಕ್ಷೆ ಆಗಿದೆ. ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಭೂ ಸರ್ವೇಯರ್ ಹುದ್ದೆಗಳಿಗೆ ಈ ನೇಏಮಕಾತಿ, ಪರೀಕ್ಷೆ ನಡೆಯುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಿತ್ತು. ಆಯ್ಕೆ ಆಗುವವರು ಭೂಮಾಪಕರು ಆಗುತ್ತಾರೆ. ಈ ಭೂಮಾಪನಕಾರರು ನಗರ ಯೋಜನೆ, ಭೂ ಅಭಿವೃದ್ಧಿ ಹಾಗೂ ವಿವಿಧ ಆಡಳಿತಾತ್ಮಕ ಕಾರ್ಯಗಳಿಗೆ ಅಗತ್ಯವಾದ ಭೂಮಾಪನಕಾರರ ಪಾತ್ರ ನಿರ್ವಹಣೆ ಮಾಡುತ್ತಾರೆ.












Click it and Unblock the Notifications