ಕೆಪಿಎಸ್ಸಿ: ಎಫ್ ಡಿಎ ಹಾಗೂ ಎಸ್ ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಡಿಸೆಂಬರ್ 01: ವಿವಿಧ ಇಲಾಖೆಗಳಲ್ಲಿ ಇರುವ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗಾಗಿ ಕರ್ನಾಟಕ ಲೋಕಸೇವಾ ಆಯೋಗದಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 1058 ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,
* 507 ಪ್ರಥಮ ದರ್ಜೆ ಸಹಾಯಕರು
* 551 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿವೆ.
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಡಿಸೆಂಬರ್ 12, 2017.

ಶೈಕ್ಷಣಿಕ ವಿದ್ಯಾರ್ಹತೆ:
* ಪ್ರಥಮ ದರ್ಜೆ ಸಹಾಯಕರು- ಕಾನೂನು ಪ್ರಕಾರ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
* ದ್ವಿತೀಯ ದರ್ಜೆ ಸಹಾಯಕರು- ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ಪದವಿಪೂರ್ವ ಪರೀಕ್ಷೆ ಅಥವಾ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮಾ ಪರೀಕ್ಷೆ ತೇರ್ಗಡೆಯಾಗಿರಬೇಕು.
ವಯೋಮಿತಿ: (07.10.2017ರಂತೆ)
* ಸಾಮಾನ್ಯ ವರ್ಗ: 35 ವರ್ಷ ಪ್ರವರ್ಗ- 2(ಎ), 2(ಬಿ), 3(ಎ), 3(ಬಿ): 38 ವರ್ಷ
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1: 40 ವರ್ಷ.
ಪ್ರಮುಖ ದಿನಾಂಕಗಳು:
ನೋಂದಣಿ ದಿನಾಂಕ : ನವೆಂಬರ್ 27, 2017
ನೋಂದಣಿ ಕೊನೆ ದಿನಾಂಕ : ಡಿಸೆಂಬರ್ 12, 2017
ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ (ಪೂರ್ವಭಾವಿ) ಹಾಗೂ ಮುಖ್ಯ ಪರೀಕ್ಷೆ
ಅರ್ಜಿ ಸಲ್ಲಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications