PDO Exam: ಪಿಡಿಒ ಪರೀಕ್ಷೆಗೆ ಹಾಜರಾಗುವವರು ಗಮನಿಸಿ, ಪ್ರವೇಶ ಪತ್ರ ಮರೆಯಬೇಡಿ
ಬೆಂಗಳೂರು, ಡಿಸೆಂಬರ್ 6: ಕರ್ನಾಟಕ ಲೋಕಸೇವಾ ಆಯೋಗ (KPSC) ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ನೇಮಕಾತಿಗೆ ಸಂಬಂಧಿಸಿದ ಸದರಿ ಸಾಲಿನ ಪರೀಕ್ಷೆಗಳು ಡಿಸೆಂಬರ್ 7ಮತ್ತು 8ರಂದು ನಡೆಯಲಿವೆ. ರಾಜ್ಯಾದ್ಯಂತ ವಿವಿಧ ಕೇಂದ್ರಗಳಲ್ಲಿ ಪಿಡಿಒ ಪರೀಕ್ಷೆಗಳು ಜರುಗಲಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಾಜರಾಗಲಿದ್ದಾರೆ. ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರ ಜೊತೆಗೆ ಒಯ್ಯವುದು ಕಡ್ಡಾಯವಾಗಿದೆ.
ಪಂಚಾಯತ್ ಅಧಿಕಾರಿ ನೇಮಕಾತಿ ಪರೀಕ್ಷೆಗೆ 2024ಗೆ ಸಂಬಂಧಿಸಿದಂತೆ KPSC ಅಧಿಕೃತ ವೆಬ್‌ಸೈಟ್‌ನಲ್ಲಿ ಕಳೆದ ನವೆಂಬರ್ 30 ರಂದು ಹಾಲ್ ಟಿಕೆಟ್ (ಪ್ರವೇಶ ಪತ್ರ) ಬಿಡುಗಡೆ ಆಗಿದೆ. ಯಾರೆಲ್ಲ ಪಿಡಿಒ ಗ್ರೂಪ್ C ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಇದೀಗ ಪರೀಕ್ಷೆಗೆ ಹೋಗುತ್ತಿದ್ದೀರೋ ನೀವೆಲ್ಲ ಪ್ರವೇಶ ಪತ್ರ ಡೌನ್ ಮಾಡಿಕೊಂಡಿರಬೇಕು. ಪ್ರವೇಶ ಕಾರ್ಡ್ ಇಲ್ಲದೇ ನಿಮ್ಮನ್ನು ಪರೀಕ್ಷಾ ಕೇಂದ್ರಕ್ಕೆ ಬಿಡುವುದಿಲ್ಲ ಎಂದರು.

ಕರ್ನಾಟಕ ಲೋಕಸೇವಾ ಆಯೋಗ (KPSC) ಇದೇ ವರ್ಷ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಕೆಯಲ್ಲಿ ಖಾಲಿ ಇರುವ 150 ಪಿಡಿಒ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದ್ದರು. ಅದರಿಂದ ಆಸಕ್ತರು ಅರ್ಜಿ ಸಲ್ಲಿಸಿದ್ದು, ನೇಮಕಾತಿಗಾಗಿ ಆಯೋಗ ಡಿಸೆಂಬರ್ 07 ಮತ್ತು 08 ರಂದು ಪರೀಕ್ಷೆಯನ್ನು ಆಯೋಜಿಸಿದೆ.
ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆ ಹೋಗುವ ಮೊದಲು ಹಾಲ್ ಟಿಕೆಟ್‌ನಲ್ಲಿ ತಿಳಿಸಲಾದ ಮಾರ್ಗಸೂಚಿ ಓದಿಕೊಳ್ಳಬೇಕು, ಪರೀಕ್ಷಾ ಕೇಂದ್ರದಲ್ಲಿ ಅನುಸರಿಸಬೇಕು
ಹಾಲ್ ಟಿಕೆಟ್ ಡೌನ್‌ಲೋಡ್ ಹೇಗೆ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧೆಡೆ ಪಿಡಿಒ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಪೈಕಿ ಯಾರೆಲ್ಲ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಂಡಿಲ್ಲ ಅವರೆಲ್ಲರು ಕೂಡಲೇ ಕೆಪಿಎಸ್‌ಸಿ ಅಧಿಕೃತ ಜಾಲತಾಣ https://kpsc.kar.nic.in/ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಲಿ ಎರಡು ಪ್ರತಿ ನಿಮ್ಮಲ್ಲಿ ಇಟ್ಟುಕೊಳ್ಳಿ.
ಈ ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ಅಭ್ಯರ್ಥಿಗಳು ಲಾಗಿನ್ ಐಡಿ/ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ವಿವರ ನಮೂದಿಸಬೇಕು. ಪರದೆ ಮೇಲೆ ಕೆಪಿಎಸ್‌ಸಿ ಪಿಡಿಒ 2024 ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಪರದೆ ಮೇಲೆ ನಿಮಗೆ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಆಗುತ್ತದೆ.
ಪಿಡಿಒ ಅಭ್ಯರ್ಥಿಗಳಿಗೆ ಪ್ರಮುಖ ಸಲಹೆ
* ಅಭ್ಯರ್ಥಿಗಳು ಹಾಲ್‌ಟಿಕೆಟ್, ನೋಂದಣಿ ಸಂಖ್ಯೆ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು
* ಹಾಲ್ ಟಿಕೆಟ್‌ನಲ್ಲಿ ನೀಡಲಾಗಿರುವ ಪರೀಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು.
* ಅಭ್ಯರ್ಥಿಗಳು ಕಡ್ಡಾಯವಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರ ಒಯ್ಯಬೇಕು.
* ಪರೀಕ್ಷೆ ಕೇಂದ್ರಗಳಿಗೆ ಪ್ರವೇಶ ಪತ್ರ ಇಲ್ಲದ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.
* ಯಾರು ಯಾವುದೇ ಆತಂಕಕ್ಕೆ ಒಳಗಾಗದೇ ಕನಿಷ್ಠ ಒಂದು ಗಂಟೆಗು ಮೊದಲೇ ಪರೀಕ್ಷಾ ಕೇಂದ್ರ ತಲುಪಬೇಕು.
* ಪ್ರವೇಶ ಪತ್ರದಲ್ಲಿ ರೂಲ್ ಸಂಖ್ಯೆ, ಹೆಸರು ಇತರ ಮಾಹಿತಿ ಪರಿಶೀಲಿಸಬೇಕು.
* ನಿರ್ಬಂಧಿತ ವಸ್ತುಗಳನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗಿ, ಬೇಡದ ಗೊಂದಲ, ಸಿಬ್ಬಂದಿ ಜೊತೆಗೆ ಮಾತಿಗೆ ಬೀಳದೇ ಶಾಂತವಾಗಿದ್ದುಕೊಂಡು ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬೇಕು.












Click it and Unblock the Notifications