KPSC Jobs: KAS ಪರೀಕ್ಷೆ ಫಲಿತಾಂಶ ಯಾವಾಗ ಬಿಡುಗಡೆ? ಕಟ್ ಆಫ್ ಅಂಕಗಳ ಅಪ್ಡೇಟ್ಸ್ ಇಲ್ಲಿದೆ
ಬೆಂಗಳೂರು, ಜನವರಿ 10: ಕರ್ನಾಟಕದಲ್ಲಿ ಕಳೆದ ವರ್ಷ 2024 ಡಿಸೆಂಬರ್‌ನಲ್ಲಿ ರಾಜ್ಯ ಲೋಕಸೇವಾ ಆಯೋಗವು (KPSC) KAS ವಿವಿಧ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಬಳಿಕವು ಒಂದಷ್ಟು ಲೋಪದೋಷಗಳ ವಿಚಾರವಾಗಿ ಆಯೋಗವು ಆರೋಪಗಳನ್ನು ಎದುರಿಸಬೇಕಾಯಿತು. ಇದೀಗ ಮತ್ತೊಮ್ಮೆ ಪರೀಕ್ಷೆ ನಡೆಯುವ ಯಾವ ಗೊಂದಲಗಳು ಇಲ್ಲ ಎನ್ನಲಾಗಿದೆ. ಈ ಕಾರಣದಿಂದಲೇ ಅಂತಿಮ ಫಲಿತಾಂಶ ಪ್ರಕಟಗೊಳ್ಳವುದು ಯಾವಾಗ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ (KPSC) ಡಿಸೆಂಬರ್ 29ರಂದು 384 ಕರ್ನಾಟಕ ಆಡಳಿತ ಸೇವೆಗಳ (KAS) ಖಾಲಿ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಿತ್ತು. ಯಶಸ್ವಿಯಾಗಿ ನಡೆದ ಪರೀಕ್ಷೆಯು ಈ ಹುದ್ದಗಳ ಮೇಲೆ ಬೆಟ್ಟದಷ್ಟು ನಿರಿಕ್ಷೆ ಇಟ್ಟುಕೊಂಡ ಅಭ್ಯರ್ಥಿಗಳಲ್ಲಿ ಆಶಾದಾಯಕ ಭರವಸೆ ಹುಟ್ಟುವಂತೆ ಮಾಡಿದೆ. ಅವರೆಲ್ಲರು ಕಟ್ ಆಫ್ ಅಂಕಗಳು, ಫಲಿತಾಂಶ ಇನ್ನಿತರ ಅಪ್ಡೇಟ್ ಮಾಹಿತಿಗೆ ಕಾಯುತ್ತಿದ್ದಾರೆ.

ಇದೇ ತಿಂಗಳ ಜನವರಿ ಅಂತ್ಯಕ್ಕೆ ಕೆಪಿಎಸ್‌ಸಿಯು ಕೆಎಎಸ್ 2024 ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಕರ್ನಾಟಕ ಲೋಕಸೇವಾ ಆಯೋಗ (KPSC) ತನ್ನ ಅಧಿಕೃತ ವೆಬ್‌ಸೈಟ್ https://kpsc.kar.nic.in/ ನಲ್ಲಿ ಪ್ರಕಟಿಸಲಿದೆ. ಪರೀಕ್ಷೆ ಬರೆದುವ ಆಗಾಗ ವೆಬ್‌ಸೈಟ್‌ನಲ್ಲಿ ನೀಡುವ ಸುತ್ತೋಲೆ, ಪ್ರಕಟಣೆಗಳ ಕಡೆಗೆ ಗಮನಹರಿಸಬೇಕು.
ಈ ಕೆಎಎಸ್ ಫಲಿತಾಂಶ ಪ್ರಕಟವಾದ ಬಳಿಕವೇ ಮುಂದಿನ ಹಂತಕ್ಕೆ ಅಭ್ಯರ್ಥಿಗಳು ಹೋಗಲಿದ್ದಾರೆ. ನೇಮಕಾತಿ ಪ್ರಕ್ರಿಯೆ ಮತ್ತಷ್ಟು ಚುರುಕಿನಿಂದ ನಡೆಯಲಿದೆ. ಈ ಕಾರಣದಿಂದ ಇದೇ ತಿಂಗಳು ಪಿಡಿಎಫ್‌ನಲ್ಲಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಯಾರೆಲ್ಲ ಆಯ್ಕೆ ಆಗಿರುತ್ತಾರೋ ಅವರ ಹೆಸರು, ನೋಂದಣಿ ಸಂಖ್ಯೆಯನ್ನು ಶಾರ್ಟ್‌ಲಿಸ್ಟ್ ಮಾಡಿ ಫಲಿತಾಂಶ ಪಟ್ಟಿಯಲ್ಲಿ ಕೊಡಲಾಗುತ್ತದೆ.
ಕರ್ನಾಟಕ ಆಡಳಿತ ಸೇವೆಗೆ ನಡೆಯುವ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆ ಇದಾಗಿದೆ. ಭಾರತೀಯ ಇತಿಹಾಸ, ಭೂಗೋಳ, ಅರ್ಥಶಾಸ್ತ್ರ ರಾಜಕೀಯ, ಹಾಗೂ ಪ್ರಸ್ತುತ ವಿದ್ಯಮಾನಗಳಂತಹ ವಿಷಯಗಳ ಮೇಲೆ ಎರಡು ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಈ ವಿಷಯಗಳಲ್ಲಿ ತಲಾ ಒಂದು ಪ್ರಶ್ನೆ ಪತ್ರಿಕೆ 200 ಅಂಕಗಳಂತೆ ಒಟ್ಟು 400 ಅಂಕಗಳು ನಿಗದಿ ಆಗಿರುತ್ತದೆ. ಈ ಪರೀಕ್ಷೆಗೆ ಹಾಜರಾದ ಲಕ್ಷಾಂತರ ಅಭ್ಯರ್ಥಿಗಳು ಇದೀಗ ಫಲಿತಾಂಶಕ್ಕಾಗಿ, ಜಾತಿವಾರು ಕಟ್ ಆಫ್ ಅಂಕಗಳ ಬಗ್ಗೆ ಉತ್ಸುಕರಾಗಿದ್ದಾರೆ.

KAS ನಿರೀಕ್ಷಿತ ಕಟ್-ಆಫ್ ಅಂಕಗಳ ವಿವರ
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹಲವು ಅಂಶಗಳನ್ನು ಪರಿಗಣಿಸಿ ಕಟ್ ಆಫ್ ಅಂಕಗಳನ್ನು ನಿರ್ಧರಿಸುತ್ತದೆ.
ಒಟ್ಟು ಇರುವ ಖಾಲಿ ಹುದ್ದೆಗಳು, ಪರೀಕ್ಷೆ, ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಸೇರಿದಂತೆ ಕೆಲವು ಮಾನದಂದ ಮೇಲೆ ಕಟ್ ಆಫ್ ಅಂಕಗಳನ್ನು ನಿರ್ಧರಿಸಲಾಗುತ್ತದೆ.
ಅಭ್ಯರ್ಥಿಗಳ ಜಾರಿವಾರು ಕಟ್-ಆಫ್ ಅಂಕಗಳು
ಜನರಲ್- 200-210
ಪರಿಶಿಷ್ಟ ಜಾತಿ- 170-180
ಪರಿಶಿಷ್ಟ ಪಂಗಡ - 170-180
ಸಿ1 - 190-200
2ಎ - 168-170
3ಎ- 190-200
3ಬಿ - 180-190
2ಬಿ - 150-160
ಫಲಿತಾಂಶ ಡೌನ್‌ಲೋಡ್ ಹೇಗೆ?
ಅಭ್ಯರ್ಥಿಗಳು ಕೆಎಎಸ್ 2024 ಫಲಿತಾಂಶ ಬಿಡುಗಡೆ ಆದ ಕೂಡಲೇ ಅಧಿಕೃತ ವೆಬ್‌ಸೈಟ್ https://kpsc.kar.nic.in/ ಗೆ ಭೇಟಿ ನೀಡಬೇಕು. ಅಲ್ಲಿ ನೀಡಲಾಗುವು ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕೆಎಎಸ್ ನೋಂದಣಿ ಸಂಖ್ಯೆ, ಜನ್ಮದಿನಾಂಕ ಇನ್ನಿತರ ಅಗತ್ಯ ವಿವರ ನಮೂದಿಸಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.












Click it and Unblock the Notifications