Kodagu District Court Jobs 2023: ಕೊಡಗಿನಲ್ಲಿ ಸರ್ಕಾರಿ ಹುದ್ದೆ ನೇಮಕಾತಿ, ವೇತನ, ವಿವರ
ಬೆಂಗಳೂರು, ನವೆಂಬರ್ 15: ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಾಜ್ಯ ಸರ್ಕಾರಿ ಹುಡುಕುತ್ತಿರುವವರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬಹುದು.
ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 64 ಸ್ಟೆನೋಗ್ರಾಫರ್, ಪಿಯೋನ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಮುಂದಿನ ತಿಂಗಳ ಡಿಸೆಂಬರ್ 10ರೊಳಗೆ ಅರ್ಜಿ ಆನ್‌ಲೈನ್ (Online) ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ರಾಜ್ಯ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಅದಕ್ಕು ಮುನ್ನ ನೇಮಕಾತಿ ಕುರಿತು ಇಲ್ಲಿ ನೀಡಲಾಗಿರುವ ಪೂರ್ಣ ಮಾಹಿತಿ ತಿಳಿದುಕೊಳ್ಳಿ.

ನೇಮಕಾತಿಯ ಸಂಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಕೊಡಗು ಜಿಲ್ಲಾ ನ್ಯಾಯಾಲಯ
ಹುದ್ದೆ ಹೆಸರು: ಸ್ಟೆನೋಗ್ರಾಫರ್, ಪಿಯೋನ್
ಖಾಲಿ ಹುದ್ದೆ: 64
ಮಾಸಿಕ ವೇತನ: 27,650 ನಿಂದ 52,650 ರೂಪಾಯಿ
ಉದ್ಯೋಗದ ಸ್ಥಳ: ಕೊಡಗು
ಅರ್ಜಿ ಸಲ್ಲಿಕೆಗೆ ಇರುವ ಕೊನೆಯ ದಿನಾಂಕ: ಡಿಸೆಂಬರ್ 10
ಹುದ್ದೆಗಳ ಪೂರ್ಣ ಮಾಹಿತಿ ತಿಳಿಯುವುದಾದರೆ, ಸ್ಟೆನೋಗ್ರಾಫರ್ 2 ಹುದ್ದೆ ಖಾಲಿ ಇವೆ, ಟೈಪಿಸ್ಟ್ 17, ಟೈಪಿಸ್ಟ್-ಕಾಪಿಯಿಸ್ಟ್ 7,
ಪ್ರೊಸೆಸ್ ಸರ್ವರ್ 8 ಮತ್ತು ಪಿಯೋನ್ 30 ಹುದ್ದೆಗಳು ಖಾಲಿ ಇವೆ. ಆಸಕ್ತರು ಅಭ್ಯರ್ಥಿಗಳು ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ
ಟೈಪಿಸ್ಟ್-ಕಾಪಿಯಿಸ್ಟ್ ಹುದ್ದೆಗೆ ಅರ್ಜಿ ಹಾಕುವವರು 12ನೇ ತರಗತಿ ಪೂರೈಸಿರಬೇಕು. ಪ್ರೊಸೆಸ್ ಸರ್ವರ್ ಹುದ್ದೆ ಹಾಗೂ ಪಿಯೋನ್ ಹುದ್ದೆಗೆ 10ನೇ ತರಗತಿ ಉತ್ತೀರ್ಣವನ್ನು ಕಡ್ಡಾಯ ಮಾಡಲಾಗಿದೆ. ಉಳಿದಂತೆ ಸ್ಟೆನೋಗ್ರಾಫರ್ ಮತ್ತು ಟೈಪಿಸ್ಟ್ ಹುದ್ದೆಗಾಗಿ 12ನೇ ತರಗತಿ, ಡಿಪ್ಲೊಮಾ ಮತ್ತು ಪೂರ್ಣಗೊಳಿಸಿದವರು ಅರ್ಜಿಗಳನ್ನು ಸಲ್ಲಿಸಬೇಕು ಎಂದು ಕೋರ್ಟ್ ಅಧಿಸೂಚನೆ ತಿಳಿಸಿದೆ.
ವಯೋಮಿತಿ ವಿವರ
ಆಸಕ್ತು ಅಭ್ಯರ್ಥಿಗಳು ಈ ಮೇಲಿನ ಹುದ್ದೆಗಳನ್ನು ಪಡೆಬೇಕಾದರೆ ಅವರಿಗೆ ಡಿಸೆಂಬರ್ 10 ವೇಳೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು ಎಂದು ಕೊಡಗು ಜಿಲ್ಲಾ ಕೋರ್ಟ್ ನೇಮಕಾತಿ ಅಧಿಸೂಚನೆ ಹೇಳಿದೆ.

ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಇರಲಿದೆ. ಪರಿಶಿಷ್ಟ ಜಾತಿ-ಪಂಗಡ/ಪ್ರವರ್ಗ-I ಅಭ್ಯರ್ಥಿಗಳಿಗೆ 05 ವರ್ಷ, Cat-2A/2B/3A & 3B ಅಭ್ಯರ್ಥಿಗಳಿಗೆ 03 ವರ್ಷ ಹಾಗೂ PWD/ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು
ಅರ್ಜಿ ಶುಲ್ಕದ ಮಾಹಿತಿ
ಪರಿಶಿಷ್ಟ ಜಾತಿ-ಪಂಗಡದ ಅಭ್ಯರ್ತಿಗಳು/ಪ್ರವರ್ಗ-I/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಉಳಿದಂತೆ ಪ್ರವರ್ಗ 2A/2B/3A & 3B ಅಭ್ಯರ್ಥಿಗಳಿಗೆ 150 ರೂಪಾಯಿ ಇದ್ದು, ಸಾಮಾನ್ಯ ಅಭ್ಯರ್ಥಿಗಳಿಗೆ ರೂ.300 ರೂಪಾಯಿ ನಿಗದಿ ಮಾಡಲಾಗಿದೆ. ಈ ಹಣವನ್ನು ನೀವು ಆನ್‌ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಲಿಖಿತ ಪರೀಕ್ಷೆ ಎದುರಿಸಬೇಕು. ನಂತರ ಕೌಶಲ್ಯ (ಸ್ಕಿಲ್) ಟೆಸ್ಟ್ ಮತ್ತು ಟೈಪಿಂಗ್ ಟೆಸ್ಟ್ ಎದುರಿಸಬೇಕು. ಇದಾದ ಬಳಿಕ ನೇರ ಸಂದರ್ಶನ ನಡೆಯಲಿದೆ
ನೆನಪಿಡಬೇಕಾದ ದಿನಾಂಕ
ಅರ್ಜಿ ಸಲ್ಲಿಕೆ ಆರಂಭ: ನವೆಂಬರ್ 10
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಡಿಸೆಂಬರ್ 10
ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನ: ಡಿಸೆಂಬರ್ 11












Click it and Unblock the Notifications