ಹತ್ತು ಲಕ್ಷ ಸರಕಾರಿ ಉದ್ಯೋಗಗಳು, ಯಾವ್ಯಾವ ಇಲಾಖೆಗಳಲ್ಲಿ ನೇಮಕ?
ನವದೆಹಲಿ, ಜೂನ್ 20: ಸರಕಾರಿ ಕೆಲಸಕ್ಕಾಗಿ ತಹತಹಿಸುವ ಜನರಿಗೆ ಕೇಂದ್ರ ಸರಕಾರ ಇತ್ತೀಚೆಗೆ ಭಾರೀ ಸಿಹಿ ಸುದ್ದಿ ನೀಡಿದೆ. ಮುಂದಿನ 18 ತಿಂಗಳಲ್ಲಿ, ಅಂದರೆ ಒಂದೂವರೆ ವರ್ಷದ ಅವಧಿಯೊಳಗೆ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ.
"ಸರಕಾರದ ಎಲ್ಲಾ ಇಲಾಖೆ ಮತ್ತು ಸಚಿವಾಲಯಗಳಲ್ಲಿರುವ ಮಾನವ ಸಂಪನ್ಮೂಲಗಳ ಸ್ಥಿತಿಯನ್ನು ಪರಾಮರ್ಶಿಸಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಜನರ ನೇಮಕಾತಿ ಮಾಡುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಬೇಕೆಂದು ಸೂಚಿಸಲಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದರು.
2020ರ ಮಾರ್ಚ್ 1ರ ವೇಳೆ ಕೇಂದ್ರದ ಎಲ್ಲಾ ಸಚಿವಾಲಯಗಳನ್ನು ಪರಿಗಣಿಸಿದಾಗ ಒಟ್ಟು 8.7 ಲಕ್ಷ ಹುದ್ದೆಗಳು ನೇಮಕಾತಿ ಆಗದೇ ಖಾಲಿ ಇರುವ ಅಂಶ ಸರಕಾರದ ದತ್ತಾಂಶದಿಂದ ವೇದ್ಯವಾಗಿತ್ತು. ಈ ವರ್ಷ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರಕಾರ ಸಂಸತ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಕೇಂದ್ರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಅಧಿಕಾರಿಗಳು ಸೇರಿದಂತೆ 9 ಲಕ್ಷ ಹುದ್ದೆಗಳು ಖಾಲಿ ಇವೆ.

ಅತಿಹೆಚ್ಚು ಹುದ್ದೆ ಖಾಲಿ ಇರುವ ಇಲಾಖೆಗಳು
ಸರಕಾರಿ ಡಾಟಾ ಪ್ರಕಾರ ಭಾರತೀಯ ರೈಲ್ವೆ, ರಕ್ಷಣಾ ಇಲಾಖೆ, ಅಂಚೆ ಇಲಾಖೆ, ಗೃಹ ಇಲಾಖೆ ಮತ್ತು ಕಂದಾಯ ಇಲಾಖೆ ಈ ಐದು ಇಲಾಖೆಗಳಲ್ಲೇ ಅತಿ ಹೆಚ್ಚು ಹುದ್ದೆಗಳು ನೇಮಕಾತಿ ಆಗದೇ ಖಾಲಿ ಇವೆ ಎಂಬ ಮಾಹಿತಿ ಇದೆ. ನೇಮಕಾತಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ಮುಗಿಸಬೇಕೆಂದು ಪ್ರಧಾನಿ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಐದು ಇಲಾಖೆಗಳ ಪ್ರಕಟಣೆ ಬಗ್ಗೆ ಉದ್ಯೋಗಾಂಕ್ಷಿಗಳು ಹೆಚ್ಚು ಗಮನ ಇರಿಸುವುದು ಉತ್ತಮ.

ಯಾವ್ಯಾವ ಗುಂಪಿನಲ್ಲಿ ಎಷ್ಟು ಖಾಲಿ ಇದೆ?
ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಲ್ಲಿ ಸುಮಾರು 40 ಲಕ್ಷದಷ್ಟು ಹುದ್ದೆಗಳಿಗೆ ಅನುಮತಿ ಇದೆ. ಆದರೆ, ಸರಕಾರಿ ಉದ್ಯೋಗಿಗಳಿರುವುದು 32 ಲಕ್ಷಕ್ಕಿಂತ ಕಡಿಮೆಯೇ. ಎಂಟು ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಇನ್ನಷ್ಟೇ ಆಗಬೇಕಿದೆ. ಖಾಲಿ ಇರುವ ಇಷ್ಟು ಹುದ್ದೆಗಳಲ್ಲಿ ಗ್ರೂಪ್ ಸಿ ಮಟ್ಟದ ಹುದ್ದೆಗಳೇ ಬಹುತೇಕ ಇರುವುದು. ಸಿ ಗ್ರೂಪ್‌ನಲ್ಲಿ ಬರೋಬ್ಬರಿ 7.56 ಲಕ್ಷ ಹುದ್ದೆಗಳು ಖಾಲಿ ಇವೆ. ಅದು ಬಿಟ್ಟರೆ ಗ್ರೂಪ್ ಬಿ ಮತ್ತು ಗ್ರೂಪ್ ಎ ನಲ್ಲಿ ಕ್ರಮವಾಗಿ 94,842 ಮತ್ತು 21,255 ಹುದ್ದೆಗಳು ಖಾಲಿ ಇವೆ.

ರೈಲ್ವೆ, ಸಿವಿಲ್ ಡಿಫೆನ್ಸ್‌ನಲ್ಲಿರುವ ಹುದ್ದೆಗಳು
ಭಾರತೀಯ ರೈಲ್ವೆ ಇಲಾಖೆಗೆ 15 ಲಕ್ಷ ಹುದ್ದೆಗಳಿಗೆ ಅನುಮತಿ ಕೊಡಲಾಗಿದೆ. ಇದರಲ್ಲಿ 2.3 ಲಕ್ಷ ಹುದ್ದೆಗಳು ಖಾಲಿ ಇವೆ. ಇನ್ನು ರಕ್ಷಣಾ ಇಲಾಖೆಯ ನಾಗರಿಕ ವಿಭಾಗದಲ್ಲಿ ಅನುಮತಿಸಲಾದ 6.33 ಲಕ್ಷ ಹುದ್ದೆಗಳ ಪೈಕಿ 2.5 ಲಕ್ಷ ಹುದ್ದೆಗಳಿಗೆ ಇನ್ನೂ ನೇಮಕಾತಿ ಆಗಿಲ್ಲ.

ಅಂಚೆ, ಕಂದಾಯ ಮತ್ತು ಗೃಹ ಇಲಾಖೆಯಲ್ಲಿ ನೇಮಕಾತಿ
ಅಂಚೆ ಇಲಾಖೆಯಲ್ಲಿ ನಿಗದಿ ಮಾಡಲಾಗಿರುವ 2.67 ಲಕ್ಷ ಹುದ್ದೆಗಳ ಪೈಕಿ 90 ಸಾವಿರದಷ್ಟು ಹುದ್ದೆಗಳು ಖಾಲಿ ಇವೆ. ಹಾಗೆಯೇ, ಕಂದಾಯ ಇಲಾಖೆಯಲ್ಲಿ ಸ್ಯಾಂಕ್ಷನ್ ಆಗಿರುವ 1.78 ಲಕ್ಷ ಉದ್ಯೋಗಿಗಳ ಪೈಕಿ 74 ಸಾವಿರ ಹುದ್ದೆಗಳಿಗೆ ನೇಮಕಾತಿ ಆಗಬೇಕಿದೆ. ಇನ್ನು, ಗೃಹ ಇಲಾಖೆಯಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 10.8 ಲಕ್ಷ ಇರಬೇಕಿದ್ದು, 1.3 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ.

ಅತಿಹೆಚ್ಚು ಹುದ್ದೆಗಳು ಖಾಲಿ ಇರುವ ಇಲಾಖೆಗಳು
1) ಸಿವಿಲ್ ಡಿಫೆನ್ಸ್: 2.47 ಲಕ್ಷ
2) ಭಾರತೀಯ ರೈಲ್ವೆ: 2.37 ಲಕ್ಷ
3) ಗೃಹ ಸಚಿವಾಲಯ: 1.28 ಲಕ್ಷ
4) ಅಂಚೆ ಇಲಾಖೆ: 90,050
5) ಕಂದಾಯ ಇಲಾಖೆ: 74,000
6) ಆಡಿಟ್, ಅಕೌಂಟ್ ಇಲಾಖೆ: 28,237
(ಒನ್ಇಂಡಿಯಾ ಸುದ್ದಿ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications