KIMS Recruitment; ಬೆಂಗಳೂರಿನಲ್ಲಿ ಕೆಲಸ, ಹುದ್ದೆ ವಿವರ
ಬೆಂಗಳೂರು, ಡಿಸೆಂಬರ್ 04; ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ (ಕಿಮ್ಸ್), ಬೆಂಗಳೂರು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದೆ. ಅರ್ಜಿ ಸಲ್ಲಿಕೆ ಮಾಡಲು ಡಿಸೆಂಬರ್ 8 ಕೊನೆಯ ದಿನವಾಗಿದೆ. ಡಿಸೆಂಬರ್ 12ರಂದು ಸಂದರ್ಶನ ನಡೆಯಲಿದೆ.
ಬೆಂಗಳೂರಿನ ಕಿಮ್ಸ್‌ನಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿಗಳನ್ನು ನೇರವಾಗಿ ಪ್ರಾಂಶುಪಾಲರ ಕಛೇರಿ ಅಥವ [email protected]ಗೆ ಸಲ್ಲಿಸಬೇಕು.

ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಡಿಸೆಂಬರ್ 8ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಸಂದರ್ಶನ 12/12/2023ರ ಬೆಳಗ್ಗೆ 11 ಗಂಟೆಗೆ ರಾಜ್ಯ ಒಕ್ಕಲಿಗರ ಸಂಘದ ಕೇಂದ್ರ ಕಛೇರಿ, 2ನೇ ಮಹಡಿ ಬೆಂಗಳೂರು 560004 ಇಲ್ಲಿ ನಡೆಯಲಿದೆ.
ಹುದ್ದೆಗಳ ವಿವರ; ಅನಾಟಮಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 2, ಸೀನಿಯರ್ ರೆಸಿಡೆಂಟ್ 4, ಜೂನಿಯರ್ ರೆಸಿಡೆಂಟ್ 8 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಫಿಜಿಯಾಲಜಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 2, ಸೀನಿಯರ್ ರೆಸಿಡೆಂಟ್ 4, ಜೂನಿಯರ್ ರೆಸಿಡೆಂಟ್ 5 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 3, ಸೀನಿಯರ್ ರೆಸಿಡೆಂಟ್ 2, ಜೂನಿಯರ್ ರೆಸಿಡೆಂಟ್ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಫಾರ್ಮಾಲಜಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 2, ಸೀನಿಯರ್ ರೆಸಿಡೆಂಟ್ ಹುದ್ದೆ. ಪೆಥಾಲಜಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 4, ಸೀನಿಯರ್ ರೆಸಿಡೆಂಟ್ 3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮೈಕ್ರೋಬಯಾಲಜಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 6, ಸೀನಿಯರ್ ರೆಸಿಡೆಂಟ್ 2, ಜೂನಿಯರ್ ರೆಸಿಡೆಂಟ್ 3 ಹುದ್ದೆ ತುಂಬಲಾಗುತ್ತಿದೆ.
ಪೋರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 1 (ಮಹಿಳೆಯರಿಗೆ ಆದ್ಯತೆ), ಸೀನಿಯರ್ ರೆಸಿಡೆಂಟ್ 4, ಜೂನಿಯರ್ ರೆಸಿಡೆಂಟ್ 1 ಹುದ್ದೆ. ಕಮ್ಯುನಿಟಿ ಮೆಡಿಸಿನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 1, ಸೀನಿಯರ್ ರೆಸಿಡೆಂಟ್ 2 ಹುದ್ದೆ ಇದೆ. ಜನರಲ್ ಮೆಡಿಸಿನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ 8, ಸೀನಿಯರ್ ರೆಸಿಡೆಂಟ್ 3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಡರ್ಮಟಾಲಜಿ ವಿಭಾಗದಲ್ಲಿ ಪ್ರೊಫೆಸರ್ ಅಸಿಸ್ಟೆಂಟ್ ಪ್ರೊಫೆಸರ್ 2, ಸೀನಿಯರ್ ರೆಸಿಡೆಂಟ್ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸೈಕ್ಯಾಟ್ರಿ ವಿಭಾಗದಲ್ಲಿ ಅಸೋಸಿಯೆಟ್ ಪ್ರೊಫೆಸರ್ 1, ಅಸಿಸ್ಟೆಂಟ್ ಪ್ರೊಫೆಸರ್ 1, ಸೀನಿಯರ್ ರೆಸಿಡೆಂಟ್ 1 ಹುದ್ದೆ ತುಂಬಲಾಗುತ್ತಿದೆ.
ಜನರಲ್ ಸರ್ಜರಿ ಪ್ರೊಫೆಸರ್ 3, ಅಸಿಸ್ಟೆಂಟ್ ಪ್ರೊಫೆಸರ್ 9, ಸೀನಿಯರ್ ರೆಸಿಡೆಂಟ್ 5 ಹುದ್ದೆ. ಓಬಿಜಿ ಅಸಿಸ್ಟೆಂಟ್ ಪ್ರೊಫೆಸರ್ 6, ರೇಡಿಯಾಲಜಿ ಪ್ರೊಫೆಸರ್ 1, ಅಸಿಸ್ಟೆಂಟ್ ಪ್ರೊಫೆಸರ್ 1 ಹುದ್ದೆ ಭರ್ತಿ ಮಾಡಲಾಗುತ್ತಿದೆ.
ಎನ್‌ಎಎಂಸಿ ಗೈಡ್‌ಲೈನ್‌ಗೆ ಅನುಗುಣವಾಗಿ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಅರ್ಜಿಯ ಜೊತೆ ಅಗತ್ಯ ಸರ್ಟಿಫಿಕೆಟ್‌ಗಳನ್ನು ಲಗತ್ತಿಸುವುದು ಕಡ್ಡಾಯ.












Click it and Unblock the Notifications