Get Updates
Get notified of breaking news, exclusive insights, and must-see stories!

KEA Recruitment 2023: ಬೆಂಗಳೂರಿನಲ್ಲೇ ₹62,000 ವೇತನದ ಸರ್ಕಾರಿ ಉದ್ಯೋಗ, ಆಯ್ಕೆ ವಿವರ

ಬೆಂಗಳೂರು, ನವೆಂಬರ್ 01: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಂಸ್ಥೆ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಈ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಸಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಸದುಪಯೋಗ ಮಾಡಿಕೊಳ್ಳುವಂತೆ ಪ್ರಾಧಿಕಾರ ತಿಳಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಒಟ್ಟು 100 ಸ್ಟಾಫ್ ನರ್ಸ್​ (ನರ್ಸಿಂಗ್ ಆಫೀಸರ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಮೂಲಕ ಸರ್ಕಾರಿ ಉದ್ಯೋಗ ಪಡೆಯಲು ಇರುವ ಈ ಸುವರ್ಣ ಅವಕಾಶ ತಪ್ಪಿಸಿಕೊಳ್ಳಬಾರದು ಎಂದು ಪ್ರಾಧಿಕಾರ ತಿಳಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆ ಕುರಿತು ಎಲ್ಲ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

KEA Recruitment 2023: KEA Invite Application For Staff Nurse Officers Post by Eligible

ನೇಮಕಾತಿಯ ಪೂರ್ಣ ಮಾಹಿತಿ

ಸಂಸ್ಥೆ ಹೆಸರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಹುದ್ದೆ ಹೆಸರು: ಸ್ಟಾಫ್ ನರ್ಸ್​

ಖಾಲಿ ಹುದ್ದೆ ಸಂಖ್ಯೆ: 100

ಮಾಸಿಕ ವೇತನ: 33,450 ರಿಂದ 62,600 ರೂಪಾಯಿ

ಉದ್ಯೋಗದ ಸ್ಥಳ: ಬೆಂಗಳೂರು

ಅರ್ಜಿ ಸಲ್ಲಿಕೆ ಕಡೆಯ ದಿನಾಂಕ: ನವೆಂಬರ್ 2

ಶೈಕ್ಷಣಿಕ ಅರ್ಹತೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವವರು ರಾಜ್ಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ನರ್ಸಿಂಗ್ ಪ್ರಮಾಣ ಪತ್ರ ಪಡೆದಿರಬೇಕು. ಇದರೊಂದಿಗೆ ರಿಜಿಸ್ಟರ್​ ನರ್ಸ್​ ಆಗಿರಬೇಕು ಎಂದು ಹೇಳಲಾಗಿದೆ.

ವಯಸ್ಸಿನ ಮಾಹಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಇದೇ ನವೆಂಬರ್ 2ರಂದು ಗುರುವಾರಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ ಮತ್ತು ಪಂಗಡ/ಪ್ರವರ್ಗ- I ಅಭ್ಯರ್ಥಿಗಳಿಗೆ ಐದು ವರ್ಷ, ಪ್ರವರ್ಗ-2A/2B/3A & 3B ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ತಿಳಿಸಿದೆ.

KEA Recruitment 2023: KEA Invite Application For Staff Nurse Officers Post by Eligible

ಅರ್ಜಿ ಶುಲ್ಕದ ಮಾಹಿತಿ

ಪರಿಶಿಷ್ಟ ಜಾತಿ/ಪ್ರವರ್ಗ-I ಅಭ್ಯರ್ಥಿಗಳಿಗೆ 500 ರೂಪಾಯಿ, ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು: 750 ರೂಪಾಯಿ ನಿಗದಿ ಮಾಡಲಾಗಿದ್ದು, ಇ-ಅಂಚೆ ಕಚೇರಿ ಮೂಲಕ ಪಾವತಿಸಬೇಕು ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಿದೆ. ಅಲ್ಲಿ ಆಯ್ಕೆ ಆದವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 080-23460460ಗೆ ಸಂಪರ್ಕಿಸೇಕು. ಇ-ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ನವೆಂಬರ್ 4, 2023 ಕೊನೆಯ ದಿನವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+