KAS Exam: ಪರೀಕ್ಷಾರ್ಥಿಗಳ ಪರ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹವೇನು?
ಬೆಂಗಳೂರು, ಆಗಸ್ಟ್ 06: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS exam) ಕ್ಲರ್ಕ್ ಹುದ್ದೆಗೆ ಪರೀಕ್ಷೆಗಳು ಹಾಗೂ ಕರ್ನಾಟಕ ಆಡಳಿತ ಸೇವೆ (KAS exam) ಪ್ರಿಲಿಮನರಿ ಪರೀಕ್ಷೆಗಳು ಒಂದೇ ದಿನ ಮುಖಾ ಮುಖಿ ಆಗಿವೆ ಎನ್ನಲಾಗಿತ್ತು. ನಂತರ ಮುಂದೂಡಿಕೆ ಆಯಿತು. ಇದರಿಂದ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸಮಸ್ಯೆ ಆಗಲಿದೆ. ತಯಾರಿಗೆ ಅವಕಾಶವೇ ಇಲ್ಲದಂತಾಗುತ್ತದೆ ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಹೌದು, ಪರೀಕ್ಷಾರ್ಥಿಗಳ ಪರ ಧ್ವನಿ ಎತ್ತಿರುವ ಶಾಸಕ ಯತ್ನಾಳ್ ಅವರು, ಐ.ಬಿ.ಪಿ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳು ಒಂದೇ ದಿನ ಇದ್ದವು ಎಂದು ಸರ್ಕಾರ ಪರೀಕ್ಷೆಗಳನ್ನು ಮುಂದುಡೂದಿತ್ತು. ಆದರೆ, ಈಗ ಕರ್ನಾಟಕ ಲೋಕ ಸೇವಾ ಆಯೋಗದವರು ವಾರದ ದಿನ [Week Day] ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಗಳು ಇವೆ ಎಂದು ಪರೀಕ್ಷಾರ್ಥಿಗಳು ಹೇಳುತ್ತಿದ್ದಾರೆ.

ಪರೀಕ್ಷಾರ್ಥಿಗಳ ತಯಾರಿಗೆ ಅವಕಾಶ ನೀಡಿಲ್ಲ
ಬಹುತೇಕ ಪರೀಕ್ಷಾರ್ಥಿಗಳು ಐ.ಟಿ.ವಲಯದಲ್ಲಿ ಕೆಲಸ ಮಾಡುತ್ತಿದ್ದು ವಾರದ ದಿನದಲ್ಲಿ ರಜೆ ಪಡೆದು ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ. ಇನ್ನೂ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಹೆಚ್ಚುವರಿ ವಿಶೇಷ ಅವಕಾಶವನ್ನು ಕರ್ನಾಟಕ ಸರ್ಕಾರ ನೀಡಿದೆ.
ಆದರೆ, ಇವರಿಗೆ ತಯಾರಿ ನಡೆಸಲು ಕಾಲಾವಕಾಶ ನೀಡಿಲ್ಲ. ಅಭ್ಯರ್ಥಿಗಳಿಗೆ ತಯಾರಿಗೆ ಇನ್ನಷ್ಟು ಸಮಯ ನೀಡಬೇಕಾಗಿದೆ. ಇದು ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಲೋಕಸೇವೆ ಆಯೋಗದ ಕರ್ತವ್ಯವು ಆಗಿದೆ ಎಂದು ಅವರು ಮನವರಿಕೆ ಮಾಡಿದ್ದಾರೆ.

ಒತ್ತಡಕ್ಕೆ ಮಣಿದು ತ್ವರಿತ ಪರೀಕ್ಷೆಗೆ ಸರ್ಕಾರ ನಿರ್ಧಾರ
ಲೋಕಸೇವಾ ಆಯೋಗದಲ್ಲಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವ ಹಾಗೂ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಆದಷ್ಟು ಬೇಗ ಪರೀಕ್ಷೆಯನ್ನು ಮುಗಿಸಬೇಕೆಂದು ಪಣತೊಟ್ಟಂತೆ ಕಾಣುತ್ತಿದೆ. ಈ ರೀತಿ ಮಾಡಿದ್ದೇ ಆದರೆ ಬಡ ಹಾಗೂ ಶ್ರಮ, ಮುತುವರ್ಜಿ ವಹಿಸಿ ಓದಿಕೊಂಡಿರುವ ಪರೀಕ್ಷಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ವಿವರಿಸಿದರು.
ರಾಜ್ಯ ಸರ್ಕಾರ ಕೂಡಲೇ ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಎಎಸ್ ಪರೀಕ್ಷೆಯು ಯಾವುದೇ ಇತರೆ ಸ್ಪರ್ದಾತ್ಮಕ ಪರೀಕ್ಷೆಗಳ ಇರುವ ದಿನದಂದು [KEA Group 'C', NET, IBPS Banking] ಮಾಡದೇ, ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಯುವ ಕೆಲಸ ಮಾಡಬೇಕು.
ಪರೀಕ್ಷಾರ್ಥಿಗಳ ಹಿತಾಸಕ್ತಿ ಕಾಯಬೇಕು
ಅಲ್ಲದೇ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ ನಡೆಯುವ ದಿನದಂದೇ ಕರ್ನಾಟಕ ಆಡಳಿತ ಸೇವೆಯ ಪರೀಕ್ಷೆ ನಡೆಸುವ ಮೂಲಕ ಅಭ್ಯರ್ಥಿಗಳಿಗೆ ತೊಂದರೆ ಆಗುವಂತೆ ಮಾಡಬಾರದು.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಇದ್ದುಕೊಂಡು ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಯಬೇಕಾದ ಅಧಿಕಾರಿಗಳು ಅಭ್ಯರ್ಥಿಗಳಿಗೆ ಅನುಕೂಲವಾಗದಂತೆ, ಸ್ವಹಿತಾಸಕ್ತಿಗಳಿಗೆ ಮಣಿದು ಅವೈಜ್ಞಾನಿಕವಾಗಿ ಪರೀಕ್ಷೆ ನಿಗದಿ ಮಾಡಬಾರದು. ಇಂತಹ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಒತ್ತಾಯಿಸಿದರು.
ಅಲ್ಲದೇ ಒಂದೆ ದಿನ ಪ್ರಮುಖ ಪರೀಕ್ಷೆಗಳನ್ನು ಆಯೋಜನೆ ಮಾಡುವ ಪದ್ಧತೆ ಪುನರವಾರ್ತನೆ ಆಗದಂತೆ ನೋಡಿಕೊಳ್ಳಿ. ಆದಲ್ಲಿ ಸದರಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಯಾವುದೇ ಪರೀಕ್ಷೆಗಳಾದ ಯುವಕರ ಭವಿಷ್ಯ ದೃಷ್ಟಿಯಿಂದ ರಾಜ್ಯ ಸರ್ಕಾರ ಅತ್ಯಂತ ಪಾರದರ್ಶಕವಾಗಿ, ಅಭ್ಯರ್ಥಿ ಸ್ನೇಹಿಯಾಗಿ ಪರೀಕ್ಷೆ ನಡೆಬೇಕು ಎಂದು ಅವರು ಕೋರಿದರು.
ಸದ್ಯ ಐಬಿಪಿಎಸ್ ಹಾಗೂ ಕೆಎಎಸ್ ಪರೀಕ್ಷೆಗಳು ಒಂದೇ ದಿನ ಬಂದರೆ ಏನು ಮಾಡುವುದು, ಹೇಗೆ ಪರೀಕ್ಷೆ ಎದುರಿಸುವುದು ಎಂಬ ಚಿಂತೆ ಹಲವು ಪರೀಕ್ಷಾರ್ಥಿಗಳಲ್ಲಿ ಕಾಡುತ್ತಿದೆ.












Click it and Unblock the Notifications