KAS Exam: 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ, ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಏಪ್ರಿಲ್.02: ಕರ್ನಾಟಕ ಲೋಕಸೇವಾ ಆಯೋಗ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳಿಗೆ ಫೆಬ್ರವರಿ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಈಗ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮತ್ತು ಪರೀಕ್ಷಾ ದಿನಾಂಕವನ್ನು ಮುಂದೂಡಿಕೆ ಮಾಡಿದೆ.
ಫೆಬ್ರವರಿ 26 ರಂದು 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಅಧಿಸೂಚನೆಯಲ್ಲಿ ಉಳಿಕೆ ಮೂಲ ವೃಂದದ ಮತ್ತು ಹೈದ್ರಾಬಾದ್ - ಕರ್ನಾಟಕ ವೃಂದದ ಒಟ್ಟು ಹುದ್ದೆಗಳ ಅಂಕಿ-ಅಂಶಗಳು (ಆರ್.ಪಿ.ಸಿ. 307+ಹೈ.ಕ. 77) ಮತ್ತು ವರ್ಗೀಕರಣದಲ್ಲಿ COMMERCIAL TAX INSPECTOR ಎಂದು ನಮೂದಾಗಿದೆ. ಇದನ್ನು ತಿದ್ದುಪಡಿ ಮಾಡಲಾಗಿದೆ.

ಅಂದರೆ, ಗ್ರೂಪ್-ಎ ವೃಂದದ ಆರ್.ಪಿ.ಸಿ, ಮತ್ತು ಹೈ.ಕ. ವೃಂದದ ಹುದ್ದೆಗಳ ಒಟ್ಟು ಸಂಖ್ಯೆ 123 (ಆರ್.ಪಿ.ಸಿ.) ಮತ್ತು 36 (ಹೈ.ಕ.) ಎಂದೂ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟಾರೆ ಹುದ್ದೆಗಳ ಸಂಖ್ಯೆ 307 (ಆರ್.ಪಿ.ಸಿ.) ಮತ್ತು 77 (ಹೈ.ಕ.) ಎಂದು ನಮೂದಾಗಿದೆ. ಅವುಗಳನ್ನು ಒಟ್ಟು ಸಂಖ್ಯೆ 126 (ಆರ್.ಪಿ.ಸಿ.) ಮತ್ತು 33(ಹೈ.ಕ.) ಎಂದೂ ಹಾಗೂ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟಾರ ಹುದ್ದೆಗಳ ಸಂಖ್ಯೆ 310 (ಆರ್.ಪಿ.ಸಿ.) ಮತ್ತು 74 (ಹೈ.ಕ.) ಎಂದೂ ತಿಳಿದುಕೊಳ್ಳಬೇಕು ಎಂದು ಲೋಕಸೇವಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಹೈದ್ರಾಬಾದ್ - ಕರ್ನಾಟಕ ವೃಂದದ ಒಟ್ಟು ಹುದ್ದೆಗಳ ಅಂಕಿ-ಅಂಶಗಳನ್ನು ಆರ್.ಪಿ.ಸಿ. 310 ಮತ್ತು ಹೈದರಾಬಾದ್ ಕರ್ನಾಟಕ 74 ಮತ್ತು COMMERCIAL TAX INSPECTOR ಎಂಬುದನ್ನು COMMERCIAL TAX OFFICER ಎಂದು ತಿದ್ದುಪಡಿ ಮಾಡುವ ಸಲುವಾಗಿ ಏಪ್ರಿಲ್ 02 ರಂದು ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ
ಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಹಿಂದೆ ಕೊನೆಯ ದಿನಾಂಕವನ್ನು ಏಪ್ರಿಲ್ 03ರ ವರೆಗೆ ನೀಡಲಾಗಿತ್ತು. ಪ್ರಸ್ತುತ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹಾಗೂ ಚುನಾವಣಾ ಕಾರ್ಯ ಪ್ರಗತಿಯಲಿರುವ ಕಾರಣದಿಂದಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15-04-2024ರ ವರೆಗೆ ಮುಂದೂಡಲಾಗಿರುತ್ತದೆ. ಇದರ ಜೊತೆಗೆ ಈ ಹಿಂದೆ 5-05-2024ರಂದು ನಿಗದಿಯಾಗಿದ್ದ ಪೂರ್ವಭಾವಿ ಪರೀಕ್ಷೆಯನ್ನು 07-07-2024ಕ್ಕೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್ http://kpsc.kar.nic.in ಭೇಟಿ ನೀಡಬೇಕು.
ವಿಶೇಷ ಸೂಚನೆ:
ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ತಿದ್ದುಪಡಿ ನಿಯಮಗಳನ್ವಯ ಮುಖ್ಯಪರೀಕ್ಷೆಯು ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲೀಷ್ ಎಂಬ ಎರಡು ಅರ್ಹತಾದಾಯಕ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಆಯೋಗವು ಈ ಹಿಂದೆ ಜರುಗಿಸಿರುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದರೂ ಸಹ ಮೇಲಿನ ನಿಯಮಗಳ ಅನ್ವಯ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಮುಖ್ಯಪರೀಕ್ಷೆಗೆ ಅರ್ಹರಾಗುವ ಎಲ್ಲಾ ಅಭ್ಯರ್ಥಿಗಳು ಸದರಿ ಅರ್ಹತ ಪತ್ರಿಕೆಗಳನ್ನು ಕಡ್ಡಾಯವಾಗಿ ಬರೆಯಬೇಕು.











Click it and Unblock the Notifications