ತಾಲೂಕು ಪಂಚಾಯಿತಿ ನೇಮಕಾತಿ : 700 ಹುದ್ದೆಗಳಿಗೆ ಅರ್ಜಿ ಹಾಕಿ

ಬೆಂಗಳೂರು, ಏಪ್ರಿಲ್ 29 : ತಾಲೂಕು ಪಂಚಾಯಿತಿಗಳಲ್ಲಿ 700 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗುತ್ತಿದ್ದಂತೆ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ.

ರಾಜ್ಯದಲ್ಲಿ ಹೊಸದಾಗಿ 50 ತಾಲೂಕುಗಳನ್ನು ರಚನೆ ಮಾಡಲಾಗುತ್ತಿದೆ. ಪ್ರತಿ ತಾಲೂಕು ಪಂಚಾಯಿತಿಗೆ ವಿವಿಧ ವೃಂದದ 14 ಹುದ್ದೆಗಳಂತೆ 50 ತಾಲೂಕು ಪಂಚಾಯಿತಿಗಳಿಗೆ 700 ಹುದ್ದೆಗಳ ನೇಮಕಾತಿ ನಡೆಯಲಿದೆ.

ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿಗಳು ಈಗಾಗಲೇ ನೇಮಕಾತಿಗೆ ಒಪ್ಪಿಗೆ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗುತ್ತಿದ್ದಂತೆ ಅಧಿಸೂಚನೆ ಪ್ರಕಟವಾಗಲಿದ್ದು, ಅರ್ಜಿ ಸಲ್ಲಿಸುವ ದಿನಾಂಕ ಘೋಷಣೆಯಾಗಲಿದೆ.

ಕಾರ್ಯ ನಿರ್ವಾಹಕ ಅಧಿಕಾರಿಯಿಂದ, ವಾಹನ ಚಾಲಕರು, ಗ್ರೂಪ್ ಡಿ ಹುದ್ದೆ ಸೇರಿ ಒಟ್ಟು 700 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಬಹುದು. ವಿದ್ಯಾರ್ಹತೆ, ವೇತನ ಶ್ರೇಣಿಗಳ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ

ನೀತಿ ಸಂಹಿತೆ ಜಾರಿಯಲ್ಲಿದೆ

ನೀತಿ ಸಂಹಿತೆ ಜಾರಿಯಲ್ಲಿದೆ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದಿದೆ. ಆದರೆ, ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಅಂದರೆ ಫಲಿತಾಂಶ ಪ್ರಕಟವಾಗುವ ತನಕ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಯಾವುದೇ ನೇಮಕಾತಿ ಮಾಡುವಂತಿಲ್ಲ. ಆದ್ದರಿಂದ, ಮೇ 23ರ ಬಳಿಕ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.

ಹೊಸ ತಾಲೂಕು ರಚನೆ

ಹೊಸ ತಾಲೂಕು ರಚನೆ

ಹೊಸದಾಗಿ 50 ತಾಲೂಕುಗಳ ರಚನೆಯಾಗುತ್ತಿದೆ. ಪ್ರತಿ ತಾಲೂಕಿಗೆ 15 ಹುದ್ದೆಗಳಂತೆ 700 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ನೇಮಕಾತಿ ಅಧಿಸೂಚನೆ ಪ್ರಕಟವಾದ ಬಳಿಕ ವಿದ್ಯಾರ್ಹತೆ, ವೇತನ ಶ್ರೇಣಿ ಮುಂತಾದ ವಿವರ ಪ್ರಕಟವಾಗಲಿದೆ.

ಯಾವ-ಯಾವ ಹುದ್ದೆಗಳು

ಯಾವ-ಯಾವ ಹುದ್ದೆಗಳು

ಕಾರ್ಯ ನಿರ್ವಾಹಕ ಅಧಿಕಾರಿ, ತಾಲೂಕು ಯೋಜನಾಧಿಕಾರಿ, ಸಹಾಯಕ ನಿರ್ದೇಶಕರು (ನರೇಗಾ), ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಅಭಿಯಂತರರು, ಪ್ರಥಮ ದರ್ಜೆ ಸಹಾಯಕರು, ಪ್ರಥಮ ದರ್ಜೆ ಲೆಕ್ಕ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ವಾಹನ ಚಾಲಕರು, ಗ್ರೂಪ್ ಡಿ ಹುದ್ದೆಗಳು.

ಹುದ್ದೆಗಳ ಸಂಖ್ಯೆಯ ವಿವರ

ಹುದ್ದೆಗಳ ಸಂಖ್ಯೆಯ ವಿವರ

ಕಾರ್ಯ ನಿರ್ವಾಹಕ ಅಧಿಕಾರಿ 50, ತಾಲೂಕು ಯೋಜನಾಧಿಕಾರಿ 50, ಸಹಾಯಕ ನಿರ್ದೇಶಕರು (ನರೇಗಾ) 50, ಸಹಾಯಕ ಲೆಕ್ಕಾಧಿಕಾರಿ 50, ಕಿರಿಯ ಅಭಿಯಂತರರು 50 ಹುದ್ದೆಗಳು.

ಪ್ರಥಮ ದರ್ಜೆ ಸಹಾಯಕರು 50, ಪ್ರಥಮ ದರ್ಜೆ ಲೆಕ್ಕ ಸಹಾಯಕರು 50, ದ್ವಿತೀಯ ದರ್ಜೆ ಸಹಾಯಕರು 100, ಬೆರಳಚ್ಚುಗಾರರು 100, ವಾಹನ ಚಾಲಕರು 50, ಗ್ರೂಪ್ ಡಿ 100 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+