KAPL Recruitment 2023: ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಸಲ್ಲಿಕೆಗೆ ಅ.20 ಕೊನೆ ದಿನ, ವೇತನ ವಿವರ

ಬೆಂಗಳೂರು, ಅಕ್ಟೋಬರ್ 11: ಕರ್ನಾಟಕ ಆ್ಯಂಟಿ ಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (KAPL​​) ಕಂಪನಿಯು ತನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈಗಾಗಲೇ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿರುವ ಕಂಪನಿಯು ಅಕ್ಟೋಬರ್ 20ರೊಳಗೆ ಅರ್ಜಿ ಸಲ್ಲಿಸುವ ಸೂಚನೆ ನೀಡಿದೆ.

ಕರ್ನಾಟಕ ಆ್ಯಂಟಿ ಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿಯಲ್ಲಿ ವಿವಿಧ 10 ಆಯುಷ್​ ಸೇವಾ ಪ್ರತಿನಿಧಿ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಸೇರಲು ಇಚ್ಛಿಸುವ ಅಭ್ಯರ್ಥಿಗಳು ಈ ಕೂಡಲೇ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ಕೆಳಗೆ ನೀಡಲಾಗಿರುವ ನೇಮಕಾತಿ ಪೂರ್ಣ ಮಾಹಿತಿ ತಿಳಿದುಕೊಳ್ಳಿ.

kapl-recruitment-2023

ನೇಮಕಾತಿಯ ಪೂರ್ಣ ಮಾಹಿತಿ ಇಲ್ಲಿದೆ

ಕಂಪನಿ ಹೆಸರು: ಕರ್ನಾಟಕ ಆ್ಯಂಟಿ ಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿ.

ಹುದ್ದೆ ಹೆಸರು: ಆಯುಷ್​ ಸೇವಾ ಪ್ರತಿನಿಧಿ

ಒಟ್ಟು ಖಾಲಿ ಹುದ್ದೆ: 10

ಪೋಸ್ಟಿಂಗ್ ಎಲ್ಲಿ: ಕರ್ನಾಟಕ ಸೇರಿ ವಿವಿಧೆಡೆ

ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 20

ವೇತನ: ರೂ.42000 (ವಾರ್ಷಿಕ ಪ್ಯಾಕೇಜ್)

ಒಟ್ಟು ಹತ್ತು ಹುದ್ದೆಗಳ ಪೈಕಿ ಬಿಹಾರ ರಾಜ್ಯದಲ್ಲಿ 02, ಕರ್ನಾಟಕ ಮತ್ತು ಮಧ್ಯ ಪ್ರದೇಶ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ತಲಾ 01 ಹುದ್ದೆಗಳು ಖಾಲಿ ಇವೆ. ಇತ್ತ ಮಹಾರಾಷ್ಟ್ರದಲ್ಲಿ ಒಟ್ಟು 04 ಹುದ್ದೆಗಳು ಖಾಲಿ ಇವೆ ಎಂದು ಕಂಪನಿ ಮಾಹಿತಿ ನೀಡಿದೆ.

kapl-recruitment-2023

ಶೈಕ್ಷಣಿಕ ಅರ್ಹತೆ

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಮಾತ್ರವೇ ಇಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಹೇಳಿದೆ.

ವಯಸ್ಸಿನ ಮಾಹಿತಿ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು. ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗಲಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳ ಆಯ್ಕೆ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ. ಅಲ್ಲಿ ಆಯ್ಕೆ ಆಗುವವರಿಗೆ ನಂತರ ಸಂದರ್ಶನ ನಡೆಸಿ ಕಂಪನಿಯೇ ಆಯ್ಕೆ ಮಾಡಿಕೊಳ್ಳಲಿದೆ. ಅದಾದ ಬಳಿಕ ಕರ್ನಾಟಕ ಸೇರಿದಂತೆ ಬಿಹಾರ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪೋಸ್ಟಿಂಗ್ ನೀಡಲಿದೆ. ಹೆಚ್ಚಿನ ಮಾಹಿತಿಗೆ KAPL ಹೌಸ್, ಪ್ಲಾಟ್ ನಂ 37, ARKA ದಿ ಬಿಸಿನೆಸ್ ಸೆಂಟರ್, 2 ನೇ ಹಂತ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಬೆಂಗಳೂರು - 560058 ಇಲ್ಲಿಗೆ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+