ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ; ಸೆ.30ರೊಳಗೆ ಅರ್ಜಿ ಹಾಕಿ

ಬೆಂಗಳೂರು, ಸೆಪ್ಟೆಂಬರ್ 25 : ಕಲಬುರಗಿಯಲ್ಲಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಆಸಕ್ತರು ಸೆಪ್ಟೆಂಬರ್ 30ರೊಳಗೆ ಅರ್ಜಿಗಳನ್ನು ಹಾಕಬಹುದು.

2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 6 ರಿಂದ 10ನೇ ತರಗತಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಬೇಕು.

ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಸಮಾಜ ವಿಜ್ಞಾನ ಶಿಕ್ಷಕರ 3 ಹುದ್ದೆಗಳಿಗೆ ಬಿ.ಎ./ ಬಿ.ಇಡಿ., ಇಂಗ್ಲೀಶ್ ಶಿಕ್ಷಕರ 4 ಹುದ್ದೆಗೆ ಬಿ.ಎ./ ಬಿ.ಇ.ಡಿ. ಪಾಸಾಗಿರಬೇಕು.

Kalaburagi Moulana Azad School Recruitment 2020

ವಿಜ್ಞಾನ ಶಿಕ್ಷಕರ 3 ಹುದ್ದೆ ಮತ್ತು ಗಣಿತ ಶಿಕ್ಷಕ 1 ಹುದ್ದೆಗೆ ಬಿ.ಎಸ್ಸಿ./ ಬಿ.ಇ.ಡಿ (ಪಿ.ಸಿ.ಎಂ.ಬಿ) ಪಾಸಾಗಿರಬೇಕು. ಉರ್ದು ವಿಷಯದ 2 ಶಿಕ್ಷಕರ ಹುದ್ದೆಗಳಿಗೆ ಬಿ.ಎ./ ಬಿ.ಇ.ಡಿ. ಪಾಸಾಗಿರಬೇಕು. ಕನಿಷ್ಠ 2 ವರ್ಷದ ಅನುಭವ ಇರಬೇಕು.

ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು 2020ರ ಸೆಪ್ಟೆಂಬರ್ 30ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಆಯಾ ತಾಲೂಕಿನ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ ಕಲಬುರಗಿ, ಅಫಜಲಪೂರ ಹಾಗೂ ಜೇವರ್ಗಿ ಇಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು ಕಲಬುರಗಿ ಹಾಗೂ ಅಫಜಲಪೂರಕ್ಕೆ ಸಂಬಂಧಿಸಿದಂತೆ 7899755427 ಹಾಗೂ ಜೇವರ್ಗಿಗೆ ಸಂಬಂಧಿಸಿದಂತೆ 9535775141ಗೆ ಸಂಖ್ಯೆಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+