ಕಲಬುರಗಿ ಪಾಲಿಕೆಯಲ್ಲಿ 219 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಲಬುರಗಿ, ಏಪ್ರಿಲ್ 16: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 2021ನೇ ಸಾಲಿನ ನೇಮಕಾತಿ ಮುಂದುವರೆಸಲಾಗಿದ್ದು, ಈ ಕುರಿತಂತೆ ಪ್ರಕಟಣೆ ಹೊರಡಿಸಲಾಗಿದೆ. ಪಾಲಿಕೆಯ ಪೌರಕಾರ್ಮಿಕ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಏಪ್ರಿಲ್ 21 ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: ಕಲಬುರಗಿ ಮಹಾನಗರ ಪಾಲಿಕೆ
ಹುದ್ದೆ ಹೆಸರು: ಪೌರ ಕಾರ್ಮಿಕ
ಒಟ್ಟು ಹುದ್ದೆ: 219
ಉದ್ಯೋಗ ಸ್ಥಳ: ಕಲಬುರಗಿ ನಗರ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಏಪ್ರಿಲ್ 21, ಸಂಜೆ 5.
ವಿದ್ಯಾರ್ಹತೆ/ ವಯೋಮಿತಿ: ಕಲಬುರಗಿ ಮಹಾನಗರ ಪಾಲಿಕೆ ನೇಮಕಾತಿ ನಿಯಮಾವಳಿಗೆ ತಕ್ಕಂತೆ.

ಅರ್ಜಿ ಸಲ್ಲಿಸುವ ಮುನ್ನ ಓದಿ:
* ಪಾಲಿಕೆ ನೇಮಕಾತಿ ನಿಯಮಾವಳಿಗೆ ತಕ್ಕಂತೆ ಹುದ್ದೆಗೆ ತಕ್ಕ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.
* ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಬಳಿ ಅರ್ಜಿ ನಮೂನೆಗಳು ಲಭ್ಯವಿರಲಿದೆ.
* ಭರ್ತಿ ಮಾಡಿದ ಅರ್ಜಿಗಳನ್ನು ಅಂಚೆ ಮೂಲಕ ಅಥವಾ ನೇರವಾಗಿ ಕೆಳಕಂಡ ವಿಳಾಸಕ್ಕೆ ತಲುಪಿಸಬಹುದು.
* ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಇತ್ತೀಚಿನ ಭಾವಚಿತ್ರ, ಐಡಿ ಪ್ರೂಫ್ ಸೇರಿದಂತೆ ಅಗತ್ಯ ಸೂಕ್ತ ದಾಖಲೆ ಒದಗಿಸಬೇಕು.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಏಪ್ರಿಲ್ 21, ಸಂಜೆ 5 ಗಂಟೆಯೊಳಗೆ.
ಅರ್ಜಿ ಸಲ್ಲಿಸಲು ವಿಳಾಸ:
ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ
ಜಿಲ್ಲಾಧಿಕಾರಿಗಳ ಕಾರ್ಯಾಲಯ ಮೊದಲನೇ ಮಹಡಿ
ಕೊಠಡಿ II, ಮಿನಿ ವಿಧಾನಸೌಧ
ಕಲಬುರಗಿ 548 102
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications