ಮಂಡ್ಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಉದ್ಯೋಗವಕಾಶ

ಮಂಡ್ಯ, ಮೇ 23: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ ಇರುವ ಲೋಡರ್ಸ್ ಮತ್ತು ಕ್ಲೀನರ್ಸ್‌ ಹುದ್ದೆಗಳಿಗಾಗಿ ನೇರ ನೇಮಕಾತಿಗೆ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದ್ದು, ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಹುದ್ದೆಗಳ ವಿವರ
ಸಂಸ್ಥೆ: ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಮಂಡ್ಯ
ಹುದ್ದೆಯ ಹೆಸರು: ಲೋಡರ್ಸ್ ಮತ್ತು ಕ್ಲೀನರ್ಸ್
ವೇತನ: ತಿಂಗಳಿಗೆ 17,000ದಿಂದ 28,950

ಉದ್ಯೋಗಗಳ ಸಂಖ್ಯೆ ವಿವರ

ಮಂಡ್ಯ ನಗರಸಭೆಯಲ್ಲಿ 6 ಹುದ್ದೆ
ಮದ್ದೂರು ಪುರಸಭೆಯಲ್ಲಿ 6 ಹುದ್ದೆ
ಮಳವಳ್ಳಿ ಪು ರಸಭೆ-8
ಶ್ರೀರಂಗಪಟ್ಟಣ ಪುರಸಭೆ-7
ಕೆ.ಆರ್.ಪೇಟೆ ಪುರಸಭೆ-10
ಪಾಂಡವಪುರಪು ರಸಭೆ-9
ನಾಗಮಂಗಲ ಪುರಸಭೆ-9
ಬೆಳ್ಳೂರು ಪಟ್ಟಣ ಪಂಚಾಯಿತಿ-1

Job Opportunities in Local bodies in Mandya district

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಯಾವುದೇ ವಿದ್ಯಾರ್ಹತೆಯಿಲ್ಲ, 18ರಿಂದ 55 ವರ್ಷದೊಳಗಿನ ವಯೋಮಿತಿಯ ಕನ್ನಡ ಮಾತನಾಡಲು ಗೊತ್ತಿರುವಂತಹವರು, ಲೋಡರ್ಸ್‌ ಮತ್ತು ಕ್ಲೀನರ್ಸ್‌ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ಹೊರಗುತ್ತಿಗೆ ನೌಕರರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?
>ಈ ಕೆಲಸಕ್ಕೆ ಸೇರಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಅಥವಾ ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಡ್ಯ ಜಿಲ್ಲಾ ಕಚೇರಿಯಿಮದ ಪಡೆದುಕೊಳ್ಳಬೇಕು.
>ಅರ್ಜಿಯ ನಮೂನೆಯಲ್ಲಿರುವ ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿದ ಅರ್ಜಿಯನ್ನು ಪೌರಾಯುಕ್ತ ಅಥವಾ ಮುಖ್ಯಾಧಿಕಾರಿಗಳಿಂದ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ, ಜಿಲ್ಲಾಧಿಕಾರಿಗಳ ಕಾರ್ಯಾಲಯ. ಜಿಲ್ಲಾ ನಗರಾಭಿವೃದ್ಧಿಕೋಶ, ಮಂಡ್ಯ ಜಿಲ್ಲೆ, ಮಂಡ್ಯ ಕೊಠಡಿ ಸಂಖ್ಯೆ 21. ಈ ವಿಳಾಸಕ್ಕೆ ಕಳುಹಿಸಬೇಕು.
> ಜೂನ್‌ 6, ಸಂಜೆ 5:30ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ನೇಮಕಾತಿ ವಿಧಾನ:
>ಅರ್ಜಿ ಸಲ್ಲಿಸುವವ ಅಭ್ಯರ್ಥಿಗಳು ಅನ್ಯ ಸ್ಥಳೀಯ ಸಂಸ್ಥೆಯ ಅರ್ಭರ್ಥಿಯಾಗಿರಬಾರದು.
> ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕ್ಷೇಮಾಭಿವೃದ್ಧಿ, ಅಥವಾ ದಿನಗೂಲಿ ಅಥವಾ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಹೊಂದಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿರಬೇಕು.
>ಅಭ್ಯರ್ಥಿಯ ವಯಸ್ಸನ್ನು ಶೈಕ್ಷಣಿಕ ವಿದ್ಯಾರ್ಹತೆ ದಾಖಲಾತಿ/ಆಧಾರ್‌ ಕಾರ್ಡ್‌/ಪಡಿತರ ಚೀಟಿ/ಮತದಾರರ ಚೀಟಿ ಆಧಾರದ ಮೇಲೆ ನಿರ್ಧರಿಸಲಾಗುವುದು.
>ಕಡಿಮೆ ವರ್ಷ ಸೇವೆ ಸಲ್ಲಿಸಿದವರಿಗಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+