Job Alert: ಕರ್ನಾಟಕದ ನರ್ಸಿಂಗ್ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗ: ಲಕ್ಷಗಟ್ಟಲೇ ಸ್ಯಾಲರಿ, ವೀಸಾ, ವಸತಿ ಸೌಲಭ್ಯ
ಬೆಂಗಳೂರು, ಮಾರ್ಚ್ 14: ಕರ್ನಾಟಕದಲ್ಲಿ ನರ್ಸಿಂಗ್ ಕೋರ್ಸ್ ಮಾಡಿದವರಿಗೆ ಬೆಲ್ಜಿಯಂನಲ್ಲಿ ಉದ್ಯೋಗ ಅವಕಾಶಗಳು ಸಿಗಲಿವೆ. ನರ್ಸಿಂಗ್ ವೃತ್ತಿಪರಿರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಯಾರೆಲ್ಲ ವಿದೇಶದಲ್ಲಿ ಉದ್ಯೋಗ ಬಯಸುತ್ತಿದ್ದೀರೋ ಅವರು ಕೂಡಲೇ ಅರ್ಜಿ ಹಾಕಬೇಕು. ಅರ್ಹರನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಉತ್ತಮ ವೇತನ ಜೊತೆಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟದ ಅಂತಾರಾಷ್ಟ್ರೀಯ ವಲಸೆ ಕೇಂದ್ರದ ವತಿಯಿಂದ ನರ್ಸಿಂಗ್ ವೃತ್ತಿಪರರಿಗೆ ಬೆಲ್ಜಿಯಂ ನಲ್ಲಿ ಉದ್ಯೋಗಗಳು ಸಿಗಲಿವೆ. ಹಾಗಾದರೆ ಯಾರೆಲ್ಲ ಅರ್ಜಿ ಹಾಕಲು ಅರ್ಹರು? ಸೌಲಭ್ಯಗಳೇನು, ಸಂದರ್ಶನ, ದಿನಾಂಕ ಇತರ ಮಾಹಿತಿ ಇಲ್ಲಿದೆ.

ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನರ್ಸಿಂಗ್ ವೃತ್ತಿಪರರಿಗೆ ಬೆಲ್ಜಿಯಂನಲ್ಲಿ ಕೆಲಸ ಸಿಗಲು ಈ ಪ್ರಮುಖ ಅರ್ಹತೆ ಹೊಂದಿರಬೇಕಿದೆ.
ಮುಖ್ಯ ಅರ್ಹತೆಗಳು
* ವಿದ್ಯಾಭ್ಯಾಸ ಅಥವಾ ವೃತ್ತಿ ತರಬೇತಿ: ಜಿಎನ್‌ಎಂ / ಬಿಎಸ್‌ಸಿ ನರ್ಸಿಂಗ್ / ಪಿಬಿಬಿಎನ್ ಆಗಿರಬೇಕು.
* ಕನಿಷ್ಠ ಒಂದು ವರ್ಷವಾದರೂ ಕ್ಲಿನಿಕಲ್ ಪ್ರಾಕ್ಟಿಸ್ ಅನುಭವ ಹೊಂದಿರಬೇಕು.
* ಇಂಗ್ಲೀಷ್ ಭಾಷಾ ಜ್ಞಾನ: IELTS Score (ಆದ್ಯತೆ 7 / ಒಟ್ಟು 6 ಅಂಕಗಳು ಇರಬೇಕು) ಅಥವಾ OET Score (ಆದ್ಯತೆ B: ಕನಿಷ್ಠ C+ ಇರಬೇಕು) ಎಂದು ತಿಳಿಸಿದೆ.
* ವಯೋಮಿತಿ: ಗರಿಷ್ಠ 35 ವರ್ಷಕ್ಕಿಂತ ಕಡಿಮೆ
* ಆದ್ಯತೆಯ ವಿಶೇಷ ವಿಭಾಗ: ಅರ್ಜಿ ಸಲ್ಲಿಸುವವರನ್ನು ಹಿರಿಯರ ಹಾಗೂ ವೃದ್ಧರ ಆರೈಕೆ (Elderly & Geriatric Care), ಮಾನಸಿಕ ಆರೈಕೆ (Psychiatric Care) ವಿಭಾಗಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂದರ್ಶನ ದಿನಾಂಕ
ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನರ್ಸಿಂಗ್ ವೃತ್ತಿಪರರಿಗೆ ಬೆಂಗಳೂರಿನಲ್ಲಿ ಸಂದರ್ಶನವನ್ನು ಮುಂದಿನ ಏಪ್ರಿಲ್ ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ತಿಳಿಯಲು ಸ್ಕ್ಯಾನಿಂಗ್ ಕ್ಯೋಆರ್ ಕೋಡಿ ತಿಳಿಸಿದೆ.

ಆಯ್ಕೆ ಆದವರಿಗೆ ವಿದೇಶದಲ್ಲಿ ಸಿಗುವ ಸೌಲಭ್ಯಗಳು
* ಸಂದರ್ಶನದಲ್ಲಿ ಆಯ್ಕೆ ಆಗುವವರಿಗೆ ಮಾಸಿಕ ವೇತನ 1.9 ಲಕ್ಷ ರೂಪಾಯಿ ನೀಡಲಾಗುತ್ತದೆ. ಇದು (ಮೊದಲ ವರ್ಷದ ತರಬೇತಿ ಸಮಯದಲ್ಲಿ) ನಂತರ ವರ್ಷದಲ್ಲಿ ಮಾಸಿಕವಾಗಿ ರೂಪಾಯಿ 2.8 ಲಕ್ಷ (ರಿಜಿಸ್ಟರ್ಡ್ ನರ್ಸ್) ವೇತನ ನೀಡಲಾಗುತ್ತದೆ.
ಪ್ರಯಾಣ ಸೌಲಭ್ಯ: ಉಚಿತ ವೀಸಾ ಮತ್ತು ವಿಮಾನ ಟಿಕೆಟ್
* ನೀವು ಬೆಲ್ಜಿಯಂನಲ್ಲಿ ಇರಲು ವಸತಿ ವ್ಯವಸ್ಥೆ ಇರುತ್ತದೆ. ಕಡಿಮೆ ಬಾಡಿಗೆಯ ಸುಸಜ್ಜಿತ ಮನೆ ಹಾಗೂ ವೈದ್ಯಕೀಯ ಭತ್ಯೆಯನ್ನು (ಮೊದಲ ವರ್ಷದ ತರಬೇತಿ ಸಮಯದಲ್ಲಿ) ನೀಡಲಾಗುತ್ತದೆ.
* ಇದರೊಂದಿಗೆ ಪಿಆರ್ ಪಡೆಯುವ ಅವಕಾಶ ಇದ್ದು, ಬೆಲ್ಲಿಯಂ ದೇಶದ ಆಕರ್ಷಕ ಸಾಮಾಜಿಕ ಸೌಲಭ್ಯಗಳು, ವೇತನ ಸಹಿತ ರಜೆ ಹಾಗೂ ಇತ್ಯಾದಿ ಸೌಲಭ್ಯಗಳು ಸಿಗಲವಿಎ.
ಕಡ್ಡಾಯ ಬದ್ಧತೆಗಳು
* ಉದ್ಯೋಗಿಗಳಿಗೆ 6 ತಿಂಗಳ ಆಫ್‌ಲೈನ್ ಡಚ್ ಭಾಷಾ ತರಬೇತಿ (ಭಾರತದಲ್ಲಿ) ನೀಡಲಾಗುತ್ತದೆ.
* ಬೆಲ್ಜಿಯಂನಲ್ಲಿ 1 ವರ್ಷದ ತರಬೇತಿ ಜೊತೆಗೆ ಹಿರಿಯರ ಆರೈಕೆ ಘಟಕದಲ್ಲಿ "Health Care Assistant" ಆಗಿ ಅರೆಕಾಲಿಕ ಕೆಲಸ ನಿಯೋಜನೆ.
* ತರಬೇತಿ ಪೂರ್ಣಗೊಳಿಸಿ HBOS ಪ್ರಮಾಣಪತ್ರ ಪಡೆದ ನಂತರ, "ರಿಜಿಸ್ಟರ್ಡ್ ನರ್ಸ್" ಆಗಿ ಪೂರ್ಣಾವಧಿ ಉದ್ಯೋಗ ಒದಗಿಸಲಾಗುತ್ತದೆ.
ಸಂದರ್ಶನದ ಸ್ಥಳ: ಅರ್ಜಿ ಸಲ್ಲಿಕೆ ಹೇಗೆ?
ಮುಂದಿನ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲಿ ಸಂದರ್ಶನ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಂತರಾಷ್ಟ್ರೀಯ ವಲಸೆ ಕೇಂದ್ರ - ಕರ್ನಾಟಕ (IMC-K), 4ನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, ITI ಕಾಲೇಜು ಆವರಣ, ಡೈರಿ ವೃತ್ತ, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು - 560029, ಕರ್ನಾಟಕ ಇಲ್ಲಿಗೆ ಭೇಟಿ ನೀಡಬೇಕು. ನಿಮ್ಮ ಅರ್ಜಿ ಹಾಗೂ ದಾಖಲೆಗಳನ್ನು ನೀವು [email protected] ಗೆ ಕೂಡಲೇ ಕಳುಹಿಸಬೇಕು ಎಂದು ಕೌಶಲ್ಯ ಅಭಿವೃದ್ಧಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್‌ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications