ಜೆಎನ್‌ಯು ಕನ್ನಡ ಪೀಠದ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಜೂ.25 : ಕರ್ನಾಟಕ ಸರ್ಕಾರದ ನೆರವಿನಿಂದ ದೆಹಲಿಯ ಜವಹಾರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿ ಆರಂಭಗೊಳ್ಳಲಿರುವ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 3, 2015.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇದ್ದು ಪಿಎಚ್‌ಡಿ ಪದವಿ ಪಡೆದಿರುವ ಹಾಗೂ ದ್ರಾವಿಡ ಭಾಷಾ ವಿಜ್ಞಾನ ಮತ್ತು ಭಾಷೆಗಳ ತೌಲನಿಕ ಅಧ್ಯಯನದಲ್ಲಿ ತಿಳುವಳಿಕೆ ಇರುವವರು ಅರ್ಜಿ ಸಲ್ಲಿಸಬಹುದು. [ಜೆಎನ್ ಯು ವೆಬ್ ಸೈಟ್]

ಆಂಗ್ಲ ಭಾಷೆ ಮತ್ತು ಹಿಂದಿ ತಿಳಿದಿದ್ದರೆ ಅನುಕೂಲ. ಬೋಧನೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಅನುಭವವಿರಬೇಕು. [ಕನ್ನಡ ಮಾತನಾಡುವವರಿಗೆ ಮಾತ್ರ ಇಲ್ಲಿ ಉದ್ಯೋಗ]
ಅರ್ಜಿ ಸಲ್ಲಿಸುವ ವಿಳಾಸ : ಆಸಕ್ತರು ತಮ್ಮ ಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು ಜುಲೈ 3, 2015ರೊಳಗೆ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ನವದೆಹಲಿ-110067 ಇವರಿಗೆ ಕಳಿಸಿಕೊಡಬೇಕು.













Click it and Unblock the Notifications