ಪದವೀಧರರು ಅರ್ಜಿ ಹಾಕಿ, ಐಟಿಬಿಪಿಯಲ್ಲಿ 390 ಹುದ್ದೆ ಖಾಲಿ
ಬೆಂಗಳೂರು, ಸೆಪ್ಟೆಂಬರ್ 12 : ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಯಲ್ಲಿ 390 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 3, 2018 ಕೊನೆಯ ದಿನ.
ಸಬ್ ಇನ್ಸ್‌ಪೆಕ್ಟರ್ ಟೆಲಿಕಾಂ (17), ಹೆಡ್ ಕಾನ್ಸ್‌ಟೇಬಲ್ (ಟೆಲಿಕಾಂ) 155, ಕಾನ್ಸ್‌ಟೇಬಲ್ (ಟೆಲಿಕಾಂ) 218 ಹುದ್ದೆಗಳನ್ನು ಐಟಿಬಿಪಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇಂಜಿನಿಯರಿಂಗ್ ಪದವಿ ಪಡೆದವರು ಅಥವ 12ನೇ ತರಗತಿಯಲ್ಲಿ ಪಿಸಿಎಂ ವಿಷಯದಲ್ಲಿ ಉತ್ತೀರ್ಣರಾದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ 200, ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ 100 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ಮಹಿಳೆ/ನಿವೃತ್ತ ಯೋಧರಿಗೆ ಯಾವುದೇ ಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ : ಸಬ್ ಇನ್ಸ್‌ಪೆಕ್ಟರ್ 35400-112400, ಹೆಡ್ ಕಾನ್ಸ್‌ಟೇಬಲ್ 25500-81100, ಕಾನ್ಸ್ ಟೇಬಲ್ 21700-69100 ಪ್ರತಿ ತಿಂಗಳು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications