ಇಸ್ರೋದಲ್ಲಿ 18 ವಿಜ್ಞಾನಿ, ಇಂಜಿನಿಯರ್ ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಡಿಸೆಂಬರ್ 28: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 2018-19ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ತನ್ನ ಅಧಿಕೃತ ವೆಬ್ ತಾಣದಲ್ಲಿ 18 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ವಿಜ್ಞಾನಿ, ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಆಸಕ್ತ, ಅರ್ಹ ಅಭ್ಯರ್ಥಿಗಳು ಡಿಸೆಂಬರ್ 26ರಿಂದ ಜನವರಿ 15, 2019ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)
ಒಟ್ಟು ಹುದ್ದೆ: 18
ಹುದ್ದೆ ಹೆಸರು: ವಿಜ್ಞಾನಿ/ ಇಂಜಿನಿಯರ್
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 15, 2019

ವಿದ್ಯಾರ್ಹತೆ: ಬಿಇ/ಬಿ ಟೆಕ್ ಅಥವಾ ಸಂಬಂಧಪಟ್ಟ ಇಂಜಿನಿಯರಿಂಗ್ ಕೋರ್ಸಿನಲ್ಲಿ ಶೇ65ರಷ್ಟು ಅಂಕಗಳೊಂದಿಗೆ ಪದವಿ.
ವಯೋಮಿತಿ;
ಒಬಿಸಿ : 38 ವರ್ಷ
ಎಸ್ ಸಿ/ ಎಸ್ಟಿ: 40
ಇತರೆ : 35 (ಜನವರಿ 15, 2019 ಅನ್ವಯ)
ಸಂಬಳ ನಿರೀಕ್ಷೆ: 56,100 ಪ್ರತಿ ತಿಂಗಳು
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ಮಹಿಳೆ/ ಮಾಜಿ ಯೋಧ : ಯಾವುದೇ ಶುಲ್ಕವಿಲ್ಲ
ಇತರೆ : 100 ರು
ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ












Click it and Unblock the Notifications